ಉಪ ಸಮರ: ಬಿಜೆಪಿ ಸೋಲುವ ಸಾಧ್ಯತೆ; ಇವೆ ಸಾಕಷ್ಟು ಕಾರಣಗಳು!

ಕರ್ನಾಟಕದಲ್ಲಿ ನಡೆಯಲಿರುವ ಮೂರು ಉಪಚುನಾವಣೆಗಳು ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಜಿದ್ದಿಯನ್ನು ಹುಟ್ಟು ಹಾಕಿವೆ. ಶತಾಯಘತಾಯ ಗೆಲ್ಲಲೇಬೇಕು ಎಂದು ಎರಡೂ ಪಕ್ಷಗಳು ಭಾರೀ ಪ್ರಚಾರ ನಡೆಸುತ್ತಿವೆ. ಆದರೂ ಈ ಚುನಾವಣೆಯು ಬಿಜೆಪಿ ಮುಳುವಾಗಬಹುದು ಎಂಬ ಸಾಧ್ಯತೆಗಳನ್ನು ಹುಟ್ಟುಹಾಕಿದೆ.

ಏಪ್ರಿಲ್‌ 17ರಂದು ಬೆಳಗಾವಿ ಲೋಕಸಭಾ ಹಾಗೂ ಮಸ್ಕಿ-ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಆದರೆ, ಈಗ ಬಿಜೆಪಿಯೊಳಗೆ ಹೊಗೆಯಾಡುತ್ತಿದ್ದ ಆಂತರಿಕ ಬಿಕ್ಕಟ್ಟು ಇದೀಗ ಬಹಿರಂಗಗೊಂಡಿದೆ. ಸಚಿವ ಈಶ್ವರಪ್ಪ ಮತ್ತು ಶಾಸಕ ಯತ್ನಾಳ್‌ ಅವರು ಮುಖ್ಯಮಂತ್ರಿ ವಿರುದ್ದ ಸಿಡಿದೆದ್ದಿದ್ದಾರೆ. ಇದಲ್ಲದೆ ಟಿಕೆಟ್‌ ಹಂಚಿಕೆಯ ವಿಚಾರದಲ್ಲಿಯೂ ಹಲಾವರು ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ. ಇವು ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದು ಹೇಳಲಾಗಿದೆ.

ಅಲ್ಲದೆ, ಅಸಮಾಧಾನಗೊಂಡವರ ಪೈಕಿ ಕೆಲವರು ಬಿಜೆಪಿ ವಿರುದ್ದ ಬಂಡಾಯ ಎದ್ದಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಬಸವಕಲ್ಯಾಣದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಬಸವ ಕಲ್ಯಾಣದಿಂದ ಬಿಜೆಪಿ ಅಭ್ಯರ್ಥಿಯ ವಿರುದ್ಧಕ್ಕೆ ಕಣಕ್ಕಿಳಿದಿದ್ದಾರೆ. ಇದು ಬಿಜೆಪಿಯ ಮತಗಳನ್ನು ಒಡೆಯುವ ಸಾಧ್ಯತೆ ಇದೆ.

ಇವೆಲ್ಲವುಗಳ ನಡುವೆ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಬಿಜೆಪಿ ಸ್ಪಂಧಿಸದೇ ಇರುವುದು, ಆ ಸಮುದಾಯ ಬಿಜೆಪಿ ವಿರುದ್ದ ಸಿಟ್ಟಾಗಿದೆ. ಪಂಚಮಸಾಲಿಗಳೇ ಪ್ರಬಲವಾಗಿರುವ ಬೆಳಗಾವಿಯಲ್ಲಿ ಬಿಜೆಪಿ ಸೋಲಿಗೆ ಇದು ಕಾರಣವಾಗಬಹುದಾದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಹೇಳಲಾಗಿದೆ.

ಬೆಳಗಾವಿಯ ಒಟ್ಟು ಮತದಾರರ ಶೇ.25 ಹಾಗೂ ಲಿಂಗಾಯತ ಮತಗಳ ಪೈಕಿ ಶೇ.75ರಷ್ಟು ಮತದಾರರು ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದಾರೆ. ಈ ಮತಗಳು ಕಳೆದೆರಡು ದಶಕಗಳಿಂದ ಬಿಜೆಪಿಯ ಬುಟ್ಟಿಯಲ್ಲಿದ್ದವು. ಆದರೆ ಈ ಬಾರಿ ಪಂಚಮಸಾಲಿಗಳು ಬಿಜೆಪಿ ವಿರುದ್ಧ ಮತದಾನ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಮರಾಠಿ ಮತಗಳು ವಿಭಜನೆಗೊಂಡು ಪಂಚಮಸಾಲಿ ಮತಗಳೂ ಕಾಂಗ್ರೆಸ್‍ನತ್ತ ವಾಲಿದರೇ ಬಿಜೆಪಿಗೆ ಸೋಲಾಗಬಹುದು ಎಂಬ ಲೆಕ್ಕಾಚಾರ ಸ್ಥಳೀಯ ಮಟ್ಟದಲ್ಲಿ ಇದೆ.

ಇದನ್ನೂ ಓದಿ: ರೈತ ಹೋರಾಟದ ನಡುವೆ ಪಂಜಾಬ್‌ ಚುನಾವಣೆ: BJPಗೆ ಸೋಲೆಂದು ಕೇಸರಿ ಮುಖಂಡರ ಸ್ವತಂತ್ರ ಸ್ಪರ್ಧೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights