ಫ್ಯಾಕ್ಟ್ಚೆಕ್ : ಉದ್ಯಮಿ ರತನ್ ಟಾಟಾ ಸ್ಪೋಟಕ ನಿರೋಧಕ ಬಸ್ಅನ್ನು ಭಾರತೀಯ ಸೇನೆಗೆ ನೀಡಿದ್ದು ನಿಜವೇ?
ಭಾರತೀಯ ಸೇನೆಗೆ ಉದ್ಯಮಿ ರತನ್ ಟಾಟಾರವರು ಬುಲೆಟ್ ಮತ್ತು ಸ್ಪೋಟಕ (ಬಾಂಬ್) ನಿರೊಧಕ ಬಸ್ಅನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
#RatanTata made the #IndianArmy bullet proof And provided bomb proof buses…#RatanTatabirthday #picoftheday #photoofday #TataMotors pic.twitter.com/uO9MGsWK2y
— I -N- D- I -A (@IamMitesh86) December 28, 2023
“ಇತ್ತೀಚೆಗೆ ರತನ್ ಟಾಟಾ ಅವರು ಭಾರತೀಯ ಸೇನೆಗೆ ಬುಲೆಟ್ ಮತ್ತು ಬಾಂಬ್ ಪ್ರೂಫ್ ಬಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರ ಈ ಕಾರ್ಯಕ್ಕೆ ಮೆಚ್ಚುಗೆ ಇರಲಿ” ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಸಾಕಷ್ಟು ಮಂದಿ ರತನ್ ಟಾಟಾ ಅವರು ಭಾರತೀಯ ಸೇನೆಗಾಗಿ ಹಲವು ರೀತಿಯ ಉಡುಗೊರೆಯನ್ನು ನೀಡಲಿದ್ದಾರೆ ಎಂಬ ರೀತಿಯಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ರತನ್ ಟಾಟಾ ಅವರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಸ್ನ ಚಿತ್ರದೊಂದಿಗೆ ಪ್ರಸಾರ ಮಾಡಲಾಗುತ್ತಿದೆ. ರತನ್ ಟಾಟಾ ಅವರು ಭಾರತೀಯ ಸೇನೆಗೆ ಬುಲೆಟ್ ಪ್ರೂಫ್ ಮತ್ತು ಬಾಂಬ್ ಪ್ರೂಫ್ ಬಸ್ ಗಳನ್ನು ಒದಗಿಸಿದ್ದಾರೆ ಎಂದು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್ನಲ್ಲಿ ಮಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, 2017ರಲ್ಲಿ ಮಿಧಾನಿ ಎಂಬ ಸಂಸ್ಥೆಯು ಸಿಆರ್ಪಿಎಫ್ಗಾಗಿ ಬುಲೆಟ್ ಪ್ರೂಫ್ ಮತ್ತು ಬಾಂಬ್ ಪ್ರೂಫ್ ಬಸ್ ಗಳನ್ನು ಒದಗಿಸಿದೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ಅನ್ನು ಹಂಚಿಕೊಂಡಿದೆ.
https://twitter.com/crpfindia/status/905796170756354048
ಸಿಆರ್ಪಿಎಫ್ ತಂಡಕ್ಕೆ 2017ರಲ್ಲಿ ಮಿಧಾನಿ ( ಮಿಶ್ರ ಧಾತು ನಿಗಮ ಲಿಮಿಟೆಡ್) ಸಂಸ್ಥೆಯು ಈ ವಾಹನವನ್ನು ಉಡುಗೊರೆಯಾಗಿ ನೀಡಿದೆ ಎಂಬುದು ಖಚಿತವಾಗಿದೆ. ಇನ್ನು ಈ ಕುರಿತು ಈಟಿವಿ ತೆಲಂಗಾಣ ಸುದ್ದಿ ಸಂಸ್ಥೆ ಕೂಡ ವರದಿಯನ್ನು ಮಾಡಿದೆ. ವರದಿಯ ಪ್ರಕಾರ, 7 ಸೆಪ್ಟೆಂಬರ್ 2017 ರಂದು, ಭಾಭಾ ಕವಚ್ ಜೊತೆಗೆ ಶಸ್ತ್ರಸಜ್ಜಿತ ಬಸ್ ಮತ್ತು ಮಿಧಾನಿ ತಯಾರಿಸಿದ ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್ ಅನ್ನು CRPF ಗೆ ಹಸ್ತಾಂತರಿಸಲಾಯಿತು.
https://twitter.com/AeroResearch1/status/1223902401326804998
ವೈರಲ್ ಫೋಟೋವನ್ನು CRPF ನ ಅಧಿಕೃತ X ಹ್ಯಾಂಡಲ್ನಲ್ಲಿ 7 ಸೆಪ್ಟೆಂಬರ್ 2017 ರಂದು ಪೋಸ್ಟ್ ಮಾಡಲಾಗಿದೆ. ಈ ವರದಿಗಳಲ್ಲಿ ಅಥವಾ CRPF ನ ಪೋಸ್ಟ್ಗಳಲ್ಲಿ ಎಲ್ಲಿಯೂ ರತನ್ ಟಾಟಾ ಅವರು ಬಸ್ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಉಲ್ಲೇಖವಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ರತನ್ ಟಾಟಾ ಅಥವಾ ಟಾಟಾ ಗ್ರೂಪ್ ಭಾರತೀಯ ಸೇನೆಗೆ ಕೆಲವು ಆಧುನಿಕ ಮೋಟಾರು ಸಾಮಗ್ರಿಗಳನ್ನು ಒದಗಿಸುತ್ತದೆಯಾದರೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಸ್ ರತನ್ ಟಾಟಾ ಕಂಪನಿ ನೀಡಿಲ್ಲ. ಚಿತ್ರದಲ್ಲಿರುವ ಕಂಡುಬರುವ ಬಸ್ ಅನ್ನು ವಾಸ್ತವವಾಗಿ ಮಿಧಾನಿ ಎಂಬ ಕಂಪನಿಯು CRPF ಗೆ ಒದಗಿಸಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಯುವತಿ ಕೇಳಿದ ಪ್ರಶ್ನೆಗೆ ಉತ್ತರಿಲಾಗದೆ ರಾಹುಲ್ ಯುವತಿಯ ಕೆನ್ನಗೆ ಹೊಡೆದದ್ದು ನಿಜವೇ?

