ಫ್ಯಾಕ್ಟ್‌ಚೆಕ್ : ಯುವತಿ ಕೇಳಿದ ಪ್ರಶ್ನೆಗೆ ಉತ್ತರಿಲಾಗದೆ ರಾಹುಲ್ ಯುವತಿಯ ಕೆನ್ನಗೆ ಹೊಡೆದದ್ದು ನಿಜವೇ?
ರಾಹುಲ್ ಗಾಂಧಿ ಕುರಿತಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದು ವೈರಲ್ ಆಗಿದ್ದು, “5ನೇ ತರಗತಿ ಓದುತ್ತಿದ್ದ ಬಡ ವಿದ್ಯಾರ್ಥಿನಿ ರಾಹುಲ್ ಗಾಂಧಿ ಸಂದರ್ಶನದಲ್ಲಿ ಒಂದು ಪ್ರಶ್ನೆ ಮಾಡುತ್ತಾರೆ ಅದಕ್ಕಾಗಿ ಅವರ ಮೈಕ್ ಕಸಿದುಕೊಂಡು ಆ ಹುಡುಗಿಗೆ ಥಳಿಸುತ್ತಾರೆ ಎಂಬ ಬರಹದೊಂದಿಗೆ ರಾಹುಲ್ ಗಾಂಧಿ ಅವರಿಗೆ ಬಾಲಕಿಯೊಬ್ಬಳು ಎದ್ದು ನಿಂತು ಪ್ರಶ್ನಿಸುತ್ತಿರುವ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.
ಈ ವೈರಲ್ ಪೋಸ್ಟ್‌ನಲ್ಲಿ ರಾಹುಲ್ ಗಾಂಧಿ ಅವರಿಗೆ ಹಲವು ಪ್ರಶ್ನೆಗಳನ್ನೆ ಕೇಳಲಾಗಿದೆ ಆದರೆ ಅದಕ್ಕೆ ರಾಹುಲ್ ಗಾಂಧಿ ಅವರು ಉತ್ತರವನ್ನೇ ನೀಡಲಿಲ್ಲ ಎಂದು ಹಂಚಿಕೊಳ್ಳಲಾಗಿದೆ. ಇನ್ನು ಈ ಫೇಸ್‌ಬುಕ್ ಪೋಸ್ಟ್‌ಗೆ ಸಾಕಷ್ಟು ಮಂದಿ ಆಕ್ಷೇಪರ್ಹ ಕಮೆಂಟ್‌ಗಳನ್ನು ಹಾಕಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ನಡೆಸಿದಾಗ, ವೈರಲ್ ಫೋಟೋಗೆ ಹೋಲಿಕೆಯಾಗುವ ಮತ್ತೊಂದು ಫೋಟೋವನ್ನು ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು.
Rahul Gandhi interacting with tribal youth at the Jan Shakti Samvaad in Shirpur, Dhule, Maharashtra #AamchaRahul pic.twitter.com/OltS18eR7u
— Congress (@INCIndia) March 5, 2014
ರಾಹುಲ್ ಗಾಂಧಿ ವಿದ್ಯಾರ್ಥಿಗೆ ಥಳಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಬಳಕೆ ಮಾಡಿಕೊಳ್ಳಲಾದ ಚಿತ್ರ 2014ರ ಮಾರ್ಚ್ 5 ರದ್ದು ಎಂದು ಕಾಂಗ್ರೆಸ್‌ನ ಪೋಸ್ಟ್‌ನಿಂದ ತಿಳಿದು ಬಂದಿದೆ. ಆ ಎಕ್ಸ್ ಖಾತೆ ಕಾಂಗ್ರೆಸ್ ಅಧಿಕೃತ ಖಾತೆಯಾಗಿದ್ದು ಅದರಲ್ಲಿ “ಮಹಾರಾಷ್ಟ್ರದ ಧುಲೆಯ ಶಿರ್ಪುರದಲ್ಲಿ ನಡೆದ ಜನಶಕ್ತಿ ಸಂವಾದದಲ್ಲಿ ಬುಡಕಟ್ಟು ಯುವಕರೊಂದಿಗೆ ರಾಹುಲ್ ಗಾಂಧಿ ಸಂವಾದ ಎಂದು ಬರೆಯಲಾಗಿದೆ.”
ವೈರಲ್ ಪೋಸ್ಟ್‌ನಲ್ಲಿ ಪ್ರತಿಪಾದಿಸಿದಂತೆ ಯುವತಿ ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ಕೋಪಗೊಂಡು ಕೆನ್ನೆಗೆ ಹೊಡೆದು ಮೈಕ್ ಕಿತ್ತುಕೊಂಡರು ಎಂಬುದು ಸಂಪೂರ್ಣ ಸುಳ್ಳು. ಯುವತಿಗೆ ಹಲ್ಲೆ ಮಾಡಿದ್ದಾಗಲಿ ಅಥವಾ ರಾಹುಲ್ ಗಾಂಧಿ ಪ್ರಶ್ನೆಗಳಿಗೆ ಉತ್ತರ ಕೊಡದಿರುವ ಬಗ್ಗೆ ಪತ್ರಿಕೆಗಳಲ್ಲಿ ಅಥವಾ ಸುದ್ದಿ ವಾಹಿನಿಗಳಲ್ಲಿ ವರದಿಯಾಗಿದೆಯೇ ಎಂದು ಪರಿಶೀಲನೆ ನಡೆಸಿದಾಗ ಇದಕ್ಕೆ ಸಂಬಂಧಪಟ್ಟ ಯಾವುದೇ ವರದಿಗಳು ಕಂಡು ಬಂದಿಲ್ಲ. 2014ರ ಫೋಟೊವನ್ನು ಪೋಸ್ಟ್ ಮಾಡುತ್ತ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : 26ನೇ ವಯಸ್ಸಿನಲ್ಲಿ ನರೇಂದ್ರ ಮೋದಿ ಕೇದಾರನಾಥ ದೇವಾಲಯದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಹಾಕುತ್ತಿದ್ದರಂತೆ? ನಿಜವೇ?