ಡಿವೈಎಸ್ ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣ : ಪತಿ ನವೀನ್ ಮೇಲೆ ತಂದೆ ಆರೋಪ!
ಒಳ್ಳೆ ಹುದ್ದೆಯಲ್ಲಿದ್ದರೂ ಡಿವೈಎಸ್ ಪಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಅನ್ನೋ ಅನುಮಾನ ವ್ಯಕ್ತವಾಗುತ್ತಿದ್ದಂತೆ ತಂದೆ ಅಳಿಯನ ಮೇಲೆ ಆರೋಪ ಮಾಡಿದ್ದಾರೆ. ತಮ್ಮ ಮಗಳು ಯಾವುದೇ ಖಿನ್ನತೆಗೆ ಒಳಗಾಗಿದ್ದಿಲ್ಲ. ತುಂಬಾ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎಂದಾದರೆ ಸ್ನೇಹಿತನ ಮನೆಯಲ್ಲಿ ಆತ್ಮಹತ್ಯೆಗೆ ಯಾಕೆ ಯತ್ನಿಸುತ್ತಿದ್ದರು ಎಂದು ತಂದೆ ಪ್ರಶ್ನಿಸಿ ದೂರು ಕೊಟ್ಟಿದ್ದಾರೆ.
ಹೌದು… ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಬೆಂಗಳೂರಿನ ನಾಗರಬಾವಿ ವಿನಾಯಕ ಲೇಔಟ್ ನಲ್ಲಿರುವ ಸ್ನೇಹಿತನ ಮನೆಗೆ ತೆರಳಿದ್ದ ಲಕ್ಷ್ಮಿ ಪಾರ್ಟಿ ಮಾಡಿದ್ದಾರೆ. ಮೋಜು ಮಸ್ತಿ ಬಳಿಕ ರೂಂ ಗೆ ಹೋಗಿ ನೇಣಿಗೆ ಶರಣಾಗಿದ್ದಾರೆ. ಆದರೆ ಲಕ್ಷ್ಮಿ ತಂದೆ ವೆಂಕಟೇಶ್ ದೂರಿನಲ್ಲಿ ಅಳಿಯ ನವೀನ್ ಜಗಳದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ನೇಣು ಬಿಗಿದುಕೊಂಡ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಕೌಟುಂಬಿಕ ಕಲಹವೇ ಎಂದು ತಂದೆ ದೂರಿದ್ದಾರೆ.
ಕೋಲಾರ ಮೂಲದ ಲಕ್ಷ್ಮೀ ಪ್ರೊಬೆಷನರಿ ಅವಧಿ ಮುಗಿಸಿ 2017ರಲ್ಲಿ ಡಿವೈಎಸ್ಪಿಯಾಗಿ ನೇಮಕಗೊಂಡಿದ್ದರು. ಮೊದಲ ಹುದ್ದೆಯಲ್ಲೇ ಸಿಐಡಿಯಲ್ಲಿ ನೇಮಕವಾಗಿದ್ದರು. ಬೆಂಗಳೂರಿನ ಕೋಣನಕುಂಟೆಯಲ್ಲಿ ವಾಸವಾಗಿದ್ದ ಲಕ್ಷ್ಮೀ ಗಂಡನ ಜೊತೆ ಹೊಂದಾಣಿಕೆ ಇರದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಕುಗ್ಗಿದ್ದರು.
ಪ್ರತೀ ಬಾರಿ ಪಾರ್ಟಿ ಮಾಡುತ್ತಿದ್ದ ಲಕ್ಷ್ಮೀ ಇದೇ ನಾಗರಬಾವಿ ಅಪಾರ್ಟ್ ಮೆಂಟ್ ಗೆ ಬರುತ್ತಿದ್ದರು ಎನ್ನಲಾಗಿದೆ. ತಂದೆ ದಾಖಲಿಸಿದ ಎರಡು ಪಟಗಳ ಸುದೀರ್ಘ ದೂರಿನಲ್ಲಿ ತಂದೆ ದೂರಿನಲ್ಲಿ ನನ್ನ ಮಗಳ ಕಾಲು ನೇಣಿಗೆ ಬಿಗಿದಾಗ ನೆಲಕ್ಕೆ ತಟ್ಟಿದೆ. ರೂಮ್ ನ ಕಿಟಕಿಯಲ್ಲಿ ನೇಣಿಗೆ ಶರಣಾಗಲು ಹೇಗೆ ಸಾಧ್ಯ..? ಎಂದು ಅನುಮಾನಿಸಿದ್ದಾರೆ. ಕೌಟುಂಬಿಕ ಕಲಹವೇ ಲಕ್ಷ್ಮಿ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲದೇ ಪಾರ್ಟಿವೇಳೆ ಇದ್ದ ಮನು ಮತ್ತು ಪ್ರಜ್ವಲ್ ಮೇಲೆ ಸಂದೇಹ ವ್ಯಕ್ತಪಡಿಸಿದ್ದಾರೆ.
2012ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಲಕ್ಷ್ಮಿಗೆ ಮಕ್ಕಳಾಗಿರಲಿಲ್ಲ. ಕುಡಿತದ ಚಟದಿಂದ ಬೇಸತ್ತ ಗಂಡನ ಮಧ್ಯೆಯೂ ಮನಸ್ತಾಪವಾಗಿತ್ತು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಹೈದರಾಬಾದ್ ನಲ್ಲಿ ಕೆಲಸ ಮಾಡ್ತಾಯಿದ್ರು. ಬೆಂಗಳೂರಿಗೆ ಆಗಾಗ ಬಂದು ಹೋಗ್ತಾಯಿದ್ರು. ಆದ್ರೆ ಲಕ್ಷ್ಮಿ ಅವರ ಅಧಿಕ ಕುಡಿತದ ಚಟ ಗಂಡನಿಗೂ ಬೇಸರ ತಂದಿತ್ತು ಎನ್ನಲಾಗುತ್ತಿದೆ.
ಕುಡಿತ ಚಟದಲ್ಲಿ ಬಿದ್ದ ಲಕ್ಷ್ಮಿ ಕೌನ್ಸಲಿಂಗ್ ಕೂಡ ಮಾಡಿಸಿಕೊಂಡಿದ್ದರು. ಈಕೆಯನ್ನು ಪರೀಕ್ಷಿಸಿದ ವೈದ್ಯರು ಕುಡಿತ ಬಿಡಲು ಸಲಹೆ ನೀಡಿದ್ದರೂ ಲಕ್ಷ್ಮೀ ಕುಡಿಯುವುದನ್ನ ನಿಲ್ಲಿಸಿರಲಿಲ್ಲ. ಅದೆಷ್ಟೋ ಬಾರಿ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಳು ಎನ್ನಲಾಗುತ್ತದೆ. ಕೆಲಸಕ್ಕೂ ಆಕೆ ಮಧ್ಯೆ ಸೇವಿಸ ಬರುತ್ತಿದ್ದಳು ಎನ್ನಲಾಗುತ್ತದೆ. ಸಂಸರಾದಲ್ಲಿ ಜಿಗುಪ್ಸೆ, ಮಾನಸಿಕ ಖಿನ್ನತೆಗೆ ಒಳಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೇಲ್ನೋಡಕ್ಕೆ ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ತನಿಖೆ ಮಾಡಲಾಗುತ್ತಿದೆ.