ಮಧ್ಯಪ್ರದೇಶ: ಕಾಂಗ್ರೆಸ್ ಸರ್ಕಾರ ಉರುಳಿಸುವಲ್ಲಿ ಮೋದಿಯದ್ದೇ ಪ್ರಮುಖ ಪಾತ್ರ: ಬಿಜೆಪಿ ಕಾರ್ಯದರ್ಶಿ
ದೇಶಾದ್ಯಂತ ಲಾಕ್‌ಡೌನ್ ಘೋಷಿಸುವುದಕ್ಕೂ ಕೆಲವೇ ದಿನಗಳ ಮುನ್ನ (ಮಾರ್ಚ್) ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವಲ್ಲಿ ಪ್ರಧಾನಿ ಮೋದಿಯವರದ್ದೇ ಪ್ರಮುಖ ಪಾತ್ರವಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರು ಹೇಳಿದ್ದಾರೆ.
ಯಾರಿಗೂ ಹೇಳಬೇಡಿ, ನಾನು ಇದನ್ನು ಇಲ್ಲಿಯವರೆಗೆ ಯಾರಿಗೂ ಹೇಳಿಲ್ಲ. ಈಗ ನಾನು ಅದನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಹೇಳುತ್ತಿದ್ದೇನೆ. ಕಮಲ್ ನಾಥ್ ಸರ್ಕಾರವನ್ನು ಉರುಳಿಸುವಲ್ಲಿ ಯಾರಾದರೂ ಪ್ರಮುಖ ಪಾತ್ರ ವಹಿಸಿದರೆ, ಅದು ನರೇಂದ್ರ ಮೋದಿ ಮಾತ್ರ, ಧರ್ಮೇಂದ್ರ ಪ್ರಧಾನ್ ಅಲ್ಲ ಎಂದು ವಿಜಯವರ್ಗಿಯಾ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕಾಂಗ್ರೆಸ್ ಸರ್ಕಾರ ಪತನವಾದಾಗಿನಿಂದಲೂ ಕಾಂಗ್ರೆಸ್ ಇದನ್ನು ಹೇಳುತ್ತಿತ್ತು. ಆದರೆ ಕಮಲ್ ನಾಥ್ ಸರ್ಕಾರದ ಪತನಕ್ಕೆ ಕಾಂಗ್ರೆಸ್ ಆಂತರಿಕ ಜಗಳ ಕಾರಣ ಎಂದು ಬಿಜೆಪಿ ದೂಷಿಸುತ್ತಿದೆ. ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರೇ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಸಂವಿಧಾನಾತ್ಮಕವಾಗಿ ಚುನಾಯಿತವಾದ ಸರ್ಕಾರಗಳನ್ನು ಅಸಂವಿಧಾನಿಕ ರೀತಿಯಲ್ಲಿ ಕೆಳಗಿಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಈಗ ಸ್ಪಷ್ಟವಾಗಿದೆ ಎಂದು ಮಧ್ಯ ಪ್ರದೇಶ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಅವರು ಟ್ವೀಟ್ ಮಾಡಿದ್ದಾರೆ.
Kailash Vijayvargiya's stunning disclosure in Indore: Narendra Modi played important role in fall of Kamal Nath government in Madhya Pradesh. @NewIndianXpress @TheMornStandard pic.twitter.com/D96fclcxhY
— Anuraag Singh (@anuraag_niebpl) December 16, 2020
ಇದನ್ನೂ ಓದಿ: PM-CARES ಸರ್ಕಾರಿಯಲ್ಲ, ಖಾಸಗೀ ನಿಧಿ: ದೇಶಕ್ಕೆ ಮಹಾನ್ ಮೋಸ ಮಾಡಿದ ಮೋದಿ!