ಮಾರುಕಟ್ಟೆಯಲ್ಲಿ ಈರುಳ್ಳಿಗೆ ದಾಖಲೆ ಮಟ್ಟದ ದರ ನಿಗಿದಿ : ಬೆಳೆಗಾರ ಫುಲ್ ಖುಷ್

ಈಗ ದೇಶದಾದ್ಯಂತ ಈರುಳ್ಳಿ ದರದ್ದೆ ತೀವ್ರ ಚರ್ಚೆ, ರಾಯಚೂರು ಮಾರುಕಟ್ಟೆ ಭಾರಿ ಪ್ರಮಾಣದ ಈರುಳ್ಳಿ ಬಂದಿದೆ, ಅದರೊಂದಿಗೆ ದಾಖಲೆ ಮಟ್ಟದ ದರ ನಿಗಿದಿಯಾಗಿದೆ, ಇದರಿಂದ ಈರುಳ್ಳಿ ಬೆಳೆದ ರೈತ ಫುಲ್ ಖುಷ್ ಆಗಿದ್ದಾರೆ.

ಹೌದು… ೧೨೨೦೦ ರೂಪಾಯಿಯು ಈರುಳ್ಳಿ ಮಾರಾಟವಾಗಿದ್ದು ರಾಯಚೂರು ಎಪಿಎಂಸಿ ಇತಿಹಾಸದಲ್ಲಿಯೇ ಅತ್ಯಂತ ದುಬಾರಿಯಾಗಿರುವ ದರ, ಕೆಂಪು ಬಣ್ಣದ ಈರುಳ್ಳಿಯು ಈಗ ಭಾರಿ ಬೇಡಿಕೆ ಇದ್ದು ರಾಯಚೂರು ಮಾರುಕಟ್ಟೆಗೆ ಪಕ್ಕದ ಆಂಧ್ರ, ತೆಲಂಗಾಣ, ದೇವದುರ್ಗಾ ಹಾಗು ಲಿಂಗಸಗೂರು ಭಾಗದಿಂದ ಈಗ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ, ಒಂದೇ ದಿನ ೩೬೮೧ ಚೀಲ ಈರುಳ್ಳಿ ಮಾರುಕಟ್ಟೆಗೆ ಬಂದಿದ್ದು ೨೦೦೦ ರಿಂದ ೧೨೧೫೩ ರೂಪಾಯಿ ದರವಾಗಿದೆ, ಇಷ್ಟು ಪ್ರಮಾಣದ ದರವಾಗಿದ್ದು ಪ್ರಥಮವಾಗಿದೆ, ಇದಕ್ಕೆ ಕಾರಣ ಈರುಳ್ಳಿ ಬೆಳೆ ಇಲ್ಲದ್ದು, ಇನ್ನೊಂದು ಈರುಳ್ಳಿ ಸೀಜನ್ ಮುಗಿಯುತ್ತಾ ಬಂದಿರೋದು ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ.

ಈಗ ಸಿಗುತ್ತಿರುವದರಿಂದ ರೈತ ಫುಲ್ ಖುಷ್ ಆಗಿದ್ದು, ಬಯ್ಯಾಪುರತಾಂಡದಿಂದ ಈರುಳ್ಳಿ ತಂದಿದ್ದ ರೈತ ಖುಷ್ ಗೊಂಡಿದ್ದಾನೆ, ೧೧ ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದು ಒಟ್ಟು ೩೦ ಲಕ್ಷ ರೂಪಾಯಿ ಈರುಳ್ಳಿ ಮಾರಾಟದಿಂದ ಆದಾಯ ಪಡೆದಿದ್ದಾನೆ, ರೈತನಿಗೆ ಇಷ್ಟು ಪ್ರಮಾಣದ ದರ ಸಿಕ್ಕರೆ ಬೆಳೆದ ರೈತ ಖುಷ್ ಆಗಿರುತ್ತಾನೆ ಈರುಳ್ಳಿ ಬೆಳೆದ ರೈತ ಮಹಾಂತೇಶ.

ಒಮ್ಮೊಮ್ಮೆ ಈರುಳ್ಳಿ ಬೆಳೆದ ರೈತನಿಗೆ ಸೂಕ್ತ ಬೆಲೆ ಸಿಗದೆ ಕಣ್ಣೀರು ಹಾಕುವುದೆ ಹೆಚ್ಚಾಗಿರುವಾಗ ಈಗ ಈರುಳ್ಳಿ ದರ ರೈತನಲ್ಲಿ ಖುಷಿ ಕೊಟ್ಟಿದೆ, ಆದರೆ ಗ್ರಾಹಕನ ಜೇಬಿಗೆ ಅಧಿಕ ಹೊರೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights