ಶಾಮಿಯಾನ ಹಾಕುವಾಗ ವಿದ್ಯುತ್ ತಗುಲಿ ನಾಲ್ವರು ಸ್ಥಳದಲ್ಲೇ ದುರ್ಮರಣ..!

ಶಾಮಿಯಾನ ಹಾಕುವಾಗ ವಿದ್ಯುತ್ ತಗುಲಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಅತ್ತಿಬೆಲೆ ಪೋಲಿಸ್ ಠಾಣೆ ವ್ಯಾಪ್ತಿಯ ಇಂಡ್ಲಬೆಲೆ ಗ್ರಾಮದ ಬಳಿ ನಡೆದಿದೆ.
ಸಾವನ್ನಪ್ಪಿದ್ದ ವ್ಯಕ್ತಿಗಳು ಆಕಾಶ್ (30) ಗುಲ್ಬರ್ಗಾ, ಮಹಾದೇವ್ (35), ಹನೂರು, ವಿಷಕಂಠ (35) ಟಿ.ನರಸಿಪುರ ಮತ್ತು ವಿಜಯ್ (30) ಜಾಕ್ ಕಾಂಡ ವಾಸಿಗಳು ಎನ್ನಲಾಗಿದೆ.

ಇಂಡ್ಲಬೆಲೆ ಸಮೀಪದಲ್ಲಿ ಜಿಆರ್ ಸಂಸ್ಕೃತಿ ಅಪಾಟ್ ಮೆಂಟ್ ನೂತನವಾಗಿ ನಿರ್ಮಾಣವಾಗುತ್ತಿದ್ದು ನಾಳೆ ಗುದ್ದಲಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಅದರ ಪೂರ್ವಕವಾಗಿ ಇಂದು ಉಷಾ ಕಿರಣ್ ಎಂಬ ಟೆಂಟ್ ವತಿಯಿಂದ ಶಾಮಿಯಾನ ಮತ್ತು ಲೈಟಿಂಗ್ ಹಾಕಲು ಮುಂದಾಗಿದ್ದರು ಎನ್ನಲಾಗಿದೆ, ಈ ನಾಲ್ವರು ಶಾಮಿಯಾನದ ಉದ್ದದ ಕಂಬವೊ0ದನ್ನು ನೇರವಾಗಿ ನಿಲ್ಲಿಸುವ ಸಂದರ್ಭದಲ್ಲಿ ಕಂಬ ಕರೆಂಟ್ ವೈರ್ ಗೆ ತಗುಲಿದೆ, ನಂತರ ನಾಲ್ವರ ಮೇಲೆ ಕರೆಂಟ್ ಹರಿದಿದ್ದು, ಈ ನಾಲ್ವರು ಸಹ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಸ್ಥಳಿಯರು ನಾಲ್ವರನ್ನು ಉಳಿಸುವ ಪ್ರಯತ್ನಕ್ಕೆ ಬಂದರು ಸಹ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಅತ್ತಿಬೆಲೆ ಪೊಲೀಸರು ಮತ್ತು ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಅತ್ತಿಬೆಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights