‘ಲಸಿಕೆ ತೆಗೆದುಕೊಂಡವರಿಗೆ ಕೊರೊನಾದಿಂದಾಗಿ ಸಾವು ಬರುವುದಿಲ್ಲ’- ಡಾ.ಕೆ ಸುಧಾಕರ್

‘ಕೊರೊನಾ ಲಸಿಕೆ ತೆಗೆದುಕೊಂಡವರಿಗೆ ಕೊರೊನಾದಿಂದ ಸಾವು ಬರುವುದಿಲ್ಲ’ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ಧಾರೆ.

ಹೌದು..  ರಾಜ್ಯದಲ್ಲಿ ಕೊರೊನಾ ಉಲ್ಬಣಗೊಳ್ಳುತ್ತಿರುವುದರಿಂದ ಬೆಂಗಳೂರಿನಲ್ಲಿ ಇಂದು ಉನ್ನತ ಮಟ್ಟದ ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಕೆ. ಸುಧಾಕರ್, ‘ ಕೊರೊನಾ ಲಸಿಕೆ ತೆಗೆದುಕೊಂಡವರಿಗೆ ಸಾವು ಬರುವುದಿಲ್ಲ. ಐಸಿಯುಗೆ ಹೋಗುವುದಿರೋದಿಲ್ಲ. ಇವತ್ತು ಲಸಿಕೆ ಪಡೆದರೆ ಮುಂದಾಗೋ ಅಪಾಯಗಳನ್ನು ತಪ್ಪಿಸಬಹುದು’ ಎಂದು ಹೇಳಿದ್ದಾರೆ.

ಸಿಎಂ ತುರ್ತು ಸಭೆ ಬಳಿಕ ಮಾತನಾಡಿದ ಅವರು, ‘ ಕೊರೊನಾ ರೋಗಿಗಳಿಗೆ ಆಸ್ಪತ್ರೆ ಕೊರತೆ ಉಂಟಾಗದಂತೆ ಸ್ಟಾರ್ ಹೋಟೆಲ್ ಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾದೆ. ಹೊಟೆಲ್ ಗಳನ್ನೇ ತಾತ್ಕಾಲಿ ಆಸ್ಪತ್ರೆಗಳಾಗಿ ಬದಲಾಗಿಸಲಾಗುತ್ತದೆ. ಮೈಲ್ಡ್ ರೋಗಿಗಳಿಗೆ ಅಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ಕೊರೊನಾ ಲಕ್ಷಣವಿಲ್ಲದೇ ಬೆಡ್ ಬೇಕು ಅನ್ನ ಬೇಡಿ. ಇದರಿಂದ ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಬೆಡ್ ಕೊರತೆಯಾಗುತ್ತದೆ. ಇದು ಕ್ಯಾನ್ಸರ್ ಗಿಂತ ದೊಡ್ಡ ರೋಗವಲ್ಲ. ಮನವಿ ಮಾಡುತ್ತೇನೆ ಅನಗತ್ಯ ಗೊಂದಲಕ್ಕೊಳಗಾಗಬೇಡಿ’ ಎಂದಿದ್ದಾರೆ.

ರಾಜ್ಯದಲ್ಲಿ ಕೊರೊನಾ ನಿರ್ಧಾರಗಳನ್ನು ಕೈಗೊಳ್ಳಲು ಇದೇ ಭಾನುವಾರ ಸಂಜೆ 4 ಗಂಟೆಗೆ ಸರ್ವಪಕ್ಷ ಸಭೆ ಕರೆಯಲಾಗಿದ್ದು ಸಭೆಯಲ್ಲಿ ಚರ್ಚೆ ಬಳಿಕ ನಿರ್ಧಾ ತೆಗೆದುಕೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ.

ಆಸ್ಪತ್ರೆಗಳ ಅಭಿವೃದ್ಧಿ ಮಾಡಲು ಯೋಚನೆ ಮಾಡಲಾಗಿದೆ. ಶೇ95 ಜನರಿಗೆ ಆಸ್ಪತ್ರೆಯ ಅವಶ್ಯಕತೆ ಇಲ್ಲ. ತುಂಬಾ ತುರ್ತು ಪರಿಸ್ಥಿತಿ ಇದ್ದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಗಂಭೀರ ಸ್ಥಿತಿ ಇಲ್ಲದವರು ಹೊಟೆಲ್ ನಲ್ಲೇ ಚಿಕಿತ್ಸೆ ಪಡೆಯಿರಿ.  ಸೋಂಕಿತರಿಗೆ ಸೀಲ್ ಹಾಕಲಾಗುವುದು. ಚಿಕಿತ್ಸೆ ಕೋವಿಡ್ ಟೆಸ್ಟ್ ಹೆಚ್ಚಿಸಲಾಗುತ್ತದೆ. ವೈದ್ಯಕೀಯ ಕಾಲೇಜು ಹಾಸಿಗೆ ನಿರ್ಮಾಣ ಮಾಡಲಾಗುತ್ತದೆ. 49 ಶ್ರದ್ದಾಂಜಲಿ ವ್ಯಾನ್ ಗಳು ಉಚಿತ ಸೇವೆಯಲ್ಲಿರುತ್ತವೆ. ಹಣ ಕೊಡಬೇಕಾಗಿಲ್ಲ’ ಎಂದಿದ್ದಾರೆ.

ಅನಗತ್ಯ ಗುಂಪು ನಿಷೇಧ ಮಾಡಲಾಗಿದೆ. ಮದುವೆ ಸಮಾರಂಭಗಳಲ್ಲಿ ಒಳಾಂಗಣದಲ್ಲಿ 100 ಜನರಿಗಿಂತ ಹೆಚ್ಚು ಜನರಿಗೆ ಅವಕಾಶ ಇಲ್ಲ. ಹೊರಗಡೆ ಸಮಾರಂಭದಲ್ಲಿ 200 ಜನರು ಸೇರಲು ಮಾತ್ರ ಮಿತಿ ಗೊಳಿಸಲಾಗಿದೆ ಎಂದರು.

ಟೆಸ್ಟ್ ಮಾಡಿಸಿ ಪಾಸಿಟಿವ್ ಬಂದವರಿಗೆ ಸಹಾಯವಾಣಿ ನಂಬರ್ ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಪರಣಿತ ವ್ಯಕ್ತಿಯನ್ನೇ ಕಾಲ್ ಸೆಂಟರ್ ಹೆಲ್ಪ್ ಲೈನ್ ನಲ್ಲೇ ಕೂರಿಸಲಾಗುತ್ತದೆ ಎಂದಿದ್ದಾರೆ.

ಹೀಗಾಗಿ ನಿಮಗೆ ನೀವೆ ನಿರ್ಬಂಧ ಹಾಕಿಕೊಳ್ಳಿ. ಸಾಮಾಜಿ ಅಂತರ ಕಾಯ್ದುಕೊಳ್ಳಿ. ಮಾಸ್ಕ್ ಧರಿಸಿ. ಗುಂಪುಗಾರಿಕೆ ಬೇಡ. ನಿಮಗೆ ನೀವೆ ಜನತಾ ಕರ್ಫ್ಯೂ ವಿಧಿಸಿಕೊಂಡರೆ ಈ 2ನೇ ಅಲೆಯನ್ನು ಆದಷ್ಟು ಬೇಗ ಗೆಲ್ಲುತ್ತೇವೆ ಎಂದು ಮನವಿ ಮಾಡಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights