ದೇಶದ 7 ಮಿಲಿಯನ್ ಜನರ ಉದ್ಯೋಗ ಕಸಿದುಕೊಂಡ 2ನೇ ಅಲೆ ಕೊರೊನಾ..!

ಭಾರತದಲ್ಲಿ ಕೊರೊನಾ 2ನೇ ಅಲೆಗೆ ಜನ ಬೇಸತ್ತು ಹೋಗಿದ್ದಾರೆ. ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಾತ್ರವಲ್ಲದೇ 7 ಮಿಲಿಯನ್ ಜನರಿಗೆ ಉದ್ಯೋಗವಿಲ್ಲದಂತಾಗಿದೆ.

ಕೊರೊನಾ ವೈರಸ್ ನಿಯಂತ್ರಣಕ್ಕೆ ತರಲು ಭಾರತದಲ್ಲಿ ಲಾಕ್ ಡೌನ್ ಜಾರಿಗೊಳಿಸಿದಾಗಿನಿಂದಲೂ ನಿರುದ್ಯೋಗಿಗಳ ಸಂಖ್ಯೆಯೂ ಬೆಳೆಯುತ್ತಾ ಹೋಗುತ್ತಿದೆ.

ಖಾಸಗಿ ಸಂಶೋಧನಾ ಸಂಸ್ಥೆಯಾದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈ.ಲಿ.ನ ಅಂಕಿಅಂಶಗಳ ಪ್ರಕಾರ, ನಿರುದ್ಯೋಗವು ಮಾರ್ಚ್ನಲ್ಲಿ 6.5% ರಿಂದ 7.97% ಕ್ಕೆ ಏರಿಕೆ ಕಂಡಿದೆ. ಕಳೆದ ತಿಂಗಳು ಏಳು ದಶಲಕ್ಷಕ್ಕೂ ಹೆಚ್ಚು ಉದ್ಯೋಗ ಕಳೆದುಕೊಂಡಿದ್ದಾರೆ.

“ಲಭ್ಯವಿರುವ ಉದ್ಯೋಗಗಳಲ್ಲಿ ಕುಸಿತವಿದೆ. ಇದು ಲಾಕ್‌ಡೌನ್‌ಗಳಿಂದಾಗಿರಬಹುದು” ಎಂದು ಸಿಎಮ್‌ಐಇ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ದೂರವಾಣಿ ಮೂಲಕ ತಿಳಿಸಿದ್ದಾರೆ. “ವೈರಸ್ ಇನ್ನೂ ಸಾಕಷ್ಟು ತೀವ್ರವಾಗಿರುವುದರಿಂದ ಮತ್ತು ವೈದ್ಯಕೀಯ ಆರೋಗ್ಯ-ಸೇವೆಗಳ ವಿಷಯದಲ್ಲಿ ನಾವು ಒತ್ತು ನೀಡುತ್ತಿರುವುದರಿಂದ, ಮೇ ತಿಂಗಳಿನಲ್ಲಿಯೂ ಪರಿಸ್ಥಿತಿ ಉದ್ವಿಗ್ನವಾಗಿ ಉಳಿಯುವ ಸಾಧ್ಯತೆಯಿದೆ” ಎಂದಿದ್ದಾರೆ.

2020 ರ ಮಾರ್ಚ್‌ನಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ, ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈಗ ಅಂತಹ ಕ್ರಮಗಳನ್ನು ಕೊನೆಯ ಅಸ್ತ್ರವಾಗಿ ಮಾತ್ರ ಬಳಸುವಂತೆ ರಾಜ್ಯಗಳನ್ನು ಒತ್ತಾಯಿಸುತ್ತಿದ್ದಾರೆ. ಇದು ಹೊಸ ಆರ್ಥಿಕ ಚೇತರಿಕೆಗೆ ಅಪಾಯವನ್ನುಂಟುಮಾಡುತ್ತಿದೆ.

bpc5fd6

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights