ವಾರ್ ಎನ್ ಟೆರರ್ ಎಂದರೆ ಬದುಕಿನ ಮೇಲೆ ಯುದ್ಧವೇ?

ಆಫ್ಘಾನಿಸ್ಥಾನದಲ್ಲಿ ತಾಲಿಬಾನ್‌ ಅಟ್ಟಹಾಸ ಮತ್ತೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಆಫ್ಘನ್ನರು ಹಲವು ರೀತಿಯ ಅಪಾಯದ ಹಂಚಿನಲ್ಲಿದ್ದಾರೆ. ಇದೆಲ್ಲರ ಆಚೆಗೂ ನಾವು ತಿಳಿಯುವುದು ಸಾಕಷ್ಟಿದೆ. ಮುಖ್ಯವಾಗಿ, “ಭಯೋತ್ಪಾದನೆಯ ಮೇಲಿನ ಯುದ್ಧ” ದ ಹೆಸರಿನಲ್ಲಿ ಅಮೇರಿಕ 2001-21ರ ನಡುವೆ ಅಫ್ಘಾನಿಸ್ತಾನದಲ್ಲಿ ಮಾಡಿರುವ ವ್ಯರ್ಥ ಸೈನಿಕ ವೆಚ್ಚವನ್ನು ಲೆಕ್ಕ ಹಾಕೋಣ ..

” ಅಮೆರಿಕವು ಅಫ್ಘಾನಿಸ್ತಾನದಲ್ಲಿ 2001-2021 ರ ನಡುವೆ ನಡೆಸಿದ war on terror ಅವಧಿಯಲ್ಲಿ ಶೇ. 90ರಷ್ಟು ಜನರ ತಲಾವಾರು ಆದಾಯ 2 ಡಾಲರ್ ಗೆ ಇಳಿಯಿತು. ಆದರೆ ಇದೆ ವಧಿಯಲ್ಲಿ ಅಮೇರಿಕ ಅಲ್ಲಿ ಮಾಡಿರುವ ತಲವಾರು ಸೈನಿಕ ವೆಚ್ಚ 22 ಡಾಲರ್ ಗೆ ಏರಿತು!!

ಅಮೇರಿಕದ ಬ್ರೌನ್ ವಿಶ್ವವಿದ್ಯಾಲಯದ Watson Institute Of International and Public affairs ನ Cost Of War Project ಯೋಜನೆಯ ಲೆಕ್ಕಾಚಾರದಂತೆ ಅಮೆರಿಕವು ಕಳೆದ 20 ವರ್ಷಗಳಲ್ಲಿ ಈ ವ್ಯರ್ಥ ಹಾಗೂ ಅಫ್ಘಾನಿಸ್ತಾನವನ್ನು ವಿನಾಶದಂಚಿಗೆ ತಂದಿಟ್ಟಿರುವ ಯುದ್ಧಕ್ಕಾಗಿ 6.4 ಟ್ರಿಲಿಯನ್ ಡಾಲರ್ ಅಂದರೆ ಅಂದಾಜು (ಡಾಲರ್ ಎಂದರೆ ಸರಾಸರಿ 70 ರೂ. ಹಾಗೂ ಒಂದು ಟ್ರಿಲಿಯನ್ ಎಂದರೆ ಒಂದು ಲಕ್ಷ ಕೋಟಿ ಎಂಬ ಲೆಕ್ಕದಲ್ಲಿ )

460 ಲಕ್ಷ ಕೋಟಿ ರೂಪಾಯಿಗಳು .. !

(https://watson.brown.edu/costsofwar/costs/economic/economy/macroeconomic)

ಈಗ ಆಫ್ಘಾನಿಸ್ತಾನದ ವಾರ್ಷಿಕ GDP, ತಲಾವಾರು ಆದಾಯ ಹಾಗೂ ಬಡತನದ ಎಷ್ಟೆಂದು ನೋಡೋಣ..

ವಿಶ್ವಬ್ಯಾಂಕಿನ ಅಂಕಿಅಂಶದ ಪ್ರಕಾರ ಅಫ್ಘಾನಿಸ್ತಾನದ GDP ಕಳೆದ ಐದು ವರ್ಷಗಳಿಂದ 20 ಬಿಲಿಯನ್ ಡಾಲರ್ ಎಂದರೆ (ಒಂದು ಬಿಲಿಯನ್ ಎಂದರೆ 100 ಕೋಟಿ, ಒಂದು ಡಾಲರ್ ಗೆ ಸರಾಸರಿ 70 ರೂ. ಎಂದಿಟ್ಟುಕೊಂಡರೆ)

2.4 ಲಕ್ಷ ಕೋಟಿಗಳು ಮಾತ್ರ!

(https://data.worldbank.org/indicator/NY.GDP.MKTP.CD?locations=AF)

ಆಫ್ಗಾನಿಸ್ತಾನವು ಬಡತನದಲ್ಲಿ ಜಗತ್ತಿನ 192ದೇಶಗಳಲ್ಲಿ 182 ನೇ ಸ್ಥಾನದಲ್ಲಿದೆ.

ಅಮೇರಿಕಾದ Borgan Project ಎಂಬ ಸಂಸ್ಥೆಯ ಮತ್ತೊಂದು ವರದಿಯ ಪ್ರಕಾರ:

2008-18 ರ ನಡುವೆ ಆಫ್ಹನಿಸ್ಥಾನದಲ್ಲಿ ಬಡತನದ ರೇಖೆಗಿಂತ ಕೆಳಗಿರುವವರ ಸಂಖ್ಯೆ ಶೇ. 60 ರಿಂದ ಶೇ. 90 ಕ್ಕೇರಿದೆ.

ಅಂದರೆ ಅಫ್ಘಾನಿಸ್ತನಾದ ಶೇ. 90 ರಷ್ಟು ಜನ ದಿನಕ್ಕೆ ಎರಡು ಡಾಲರ್ ಗಳಿಗಿಂತ ಕಡಿಮೆ ಆದಾಯವನ್ನು ಮಾತ್ರ ಗಳಿಸುತ್ತಾರೆ.

ಇಂಥಾ ದೇಶದಲ್ಲಿ 460 ಲಕ್ಷ ಕೋಟಿಯನ್ನು ಅಮೇರಿಕ ಶಾಂತಿ, ಭದ್ರತೆಯ ಹೆಸರಿನಲ್ಲಿ ವೆಚ್ಚ ಮಾಡಿದೆ.

ಅಂದರೆ ಅಫ್ಘಾನಿಸ್ತಾನದ GDP ಯಾ 200 ಪಟ್ಟು!!

ಅಫ್ಘಾನಿಸ್ತಾನದ ತಲಾವಾರು ಆದಾಯ 2 ಡಾಲರ್ ಆಗಿದ್ದರೆ
ತಲಾವಾರು ಸೈನಿಕ ವೆಚ್ಚ 22 ಡಾಲರ್!

20 ವರ್ಷದ ನಂತರ ಅದೇ ಅಶಾಂತಿ, ಅದೇ ಅಭದ್ರತೆ ಮತ್ತು ಹೆಚ್ಚಿದ ಅಫ್ಘಾನ್ನರ ಬಡತನ ..

ಹಾಗಿದ್ದಲ್ಲಿ ಈ ಯುದ್ಧದಿಂದ ಲಾಭವಾಗಿದ್ದು ಯಾರಿಗೇ?

ಬೆಂದ ಮನೆಯಲ್ಲೂ ಲಾಭ ಹಿರಿದವರಲ್ಲಿ…:

ಪಲಾಯನ ಮಾಡಿದ ಅಫ್ಘಾನ್ನಿನ ಅಧ್ಯಕ್ಷ,
ಭ್ರಷ್ಟ ಅಫ್ಘಾನ್ ಸೇನಾಧಿಕಾರಿಗಳೂ,
ಅಮೇರಿಕ ಜೊತೆ ಹೊಂದಾಣಿಕೆ ಮಾಡಿಕೊಂಡ ತಾಲಿಬಾನಿ ಕಮಾಂಡರ್ಗಳ ಜೊತೆಗೆ

…. ಅತಿ ದೊಡ್ಡ ಫಲಾನುಭವಿಗಳು ಅಮೇರಿಕಾದ ಮಿಲಿಟರಿ-ಇಂಡಸ್ಟ್ರಿಯನ್ ಕಾಂಪ್ಲೆಕ್ಸ್ ನ ಕಾರ್ಪೊರೇಟ್ ಉದ್ಯಮಪತಿಗಳು!!

ಇದು ವಾರ್ ಆನ್ ಟೆರರಿಸಂ ನ ಸೋಗಲಾಡಿತನ ಮಾತ್ರ ಅಲ್ಲ ..

ಪಶ್ಚಿಮದ ಬಂಡವಾಳಶಾಹಿ ಪ್ರಜಾತಂತ್ರಗಳ ಸೋಗಲಾಡಿತನಗಳು ಹೌದು..

ನಿನ್ನೆಯಿಂದ ಅಧಿಕಾರ ಹಿಡಿದುಕೊಂಡಿರುವ ತಾಲಿಬಾನಿಗಳ ಷರೀಯತ್ತಿನ ಮುಖವಾಡದಲ್ಲಿರುವ ಸೋಗಲಾಡಿತನವೂ ಹೌದು ..

– ಶಿವಸುಂದರ್

ಇದನ್ನೂ ಓದಿ: ತಾಲಿಬಾನ್ ಭಯೋತ್ಪಾದನೆ: ಲೈಂಗಿಕ ಗುಲಾಮಗಿರಿಯ ಅಪಾಯದಲ್ಲಿ ಆಫ್ಘಾನ್ ಮಹಿಳೆಯರು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights