ಕರ್ನಾಟಕದಲ್ಲಿ ಪ್ರತಿ 46 ನಿಮಿಷಕ್ಕೆ ಒಂದು ಆತ್ಮಹತ್ಯೆ; 5 ವರ್ಷದಲ್ಲಿ 56,000 ಜನ ಬಲಿ

ರಾಜ್ಯದಲ್ಲಿ ಆತ್ಮಹತ್ಯೆಗಳನ್ನು ತಗ್ಗಿಸಲು ನಾನಾ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಪ್ರತಿ 46 ನಿಮಿಷಕ್ಕೆ ಒಬ್ಬರು ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ ಎಂದು ವರದಿಯಾಗಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ದಳ (ಎ.ಸಿ.ಸಿ.ಆರ್.ಬಿ)ದ ವರದಿಯ ಪ್ರಕಾರ,

2015-2019ರ ನಡುವೆ 5 ವರ್ಷದಲ್ಲಿ 54,038 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ, ಕೊರೊನಾ ಆಕ್ರಮಣದ ನಂತರ ಸಾಮೂಹಿಕ (ಕುಟುಂಬ ಸಮೇತ) ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ ದಿನಕ್ಕೆ ಸರಾಸರಿ 31 ಜನರು ಮಾನಸಿಕ ಖಿನ್ನತೆ, ಕೌಟುಂಬಿಕ ಸಮಸ್ಯೆ, ಪ್ರೇಮ ವೈಫಲ್ಯ ಸೇರಿದಂತೆ ವಿವಿಧ ಸಮಸ್ಯೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಐದು ವರ್ಷಗಳಲ್ಲಿ ಮಾನಸಿಕ ಖಿನ್ನತೆಯ ಕಾರಣದಿಂದಾಗಿ ಅತಿ ಹೆಚ್ಚು ಆತ್ಮಹತ್ಯೆಗಳಾಗಿವೆ. 5 ವರ್ಷದ ಆತ್ಮಹತ್ಯೆ ಮಾಡಿಕೊಂಡ 54,038 ಜನರಲ್ಲಿ 40,481 ಪುರುಷರು, 15,551 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಮಾನಸಿಕ ಖಿನ್ನತೆಗೆ 13,990, ಕೌಟುಂಬಿಕ ಸಮಸ್ಯೆಗಳಿಗೆ 10,727, ದಿವಾಳಿತನದ ಆತಂಕದಲ್ಲಿ 5,987, ಮದುವೆ ವಿಚಾರಕ್ಕೆ 2,338, ಪರೀಕ್ಷಾ ಸಮಯದಲ್ಲಿ ಅನುತ್ತೀರ್ಣ 1,298, ಪ್ರೀತಿ ವೈಪಲ್ಯ 1,791, ನಿರುದ್ಯೋಗ 1,782, ಭವಿಷ್ಯದ ಚಿಂತನೆಯಲ್ಲಿ 1,106 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಳಿದಂತೆ 10,205 ರೈತರು, 9,323 ಸ್ವ-ಉದ್ಯೋಗಿಗಳು, 7,748 ಗೃಹಿಣಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಳಿದ ಆತ್ಮಹತ್ಯೆಗೆ ನಿಖರ ಕಾರಣಗಳೇ ತಿಳಿದುಬಂದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights