ಅಪ್ತಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: 13 ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ

2020ರ ಮಾರ್ಚ್‌ ತಿಂಗಳಿನಲ್ಲಿ 15 ವರ್ಷದ ಬಾಲಕಿಯ ಮೇಲೆ ಒಂಬತ್ತು ದಿನಗಳ ಕಾಲ ನಿರಂತರ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 13 ಅಪರಾಧಿಗಳಿಗೆ ತಲಾ 20 ವರ್ಷ ಜೈಲು ಮತ್ತು ಇತರ ಇಬ್ಬರಿಗೆ ತಲಾ ನಾಲ್ಕು ವರ್ಷಗಳ ಶಿಕ್ಷೆಯನ್ನು ಕೋಟಾ ನ್ಯಾಯಾಲಯ ಶನಿವಾರ ವಿಧಿಸಿದೆ.

ಪ್ರಕರಣದ ವಿಚಾರಣೆ ನಡೆಸಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಶೋಕ್ ಚೌಧರಿ, ಪ್ರಕರಣದಲ್ಲಿ ಭಾಗಿಯಾಗಿ, ಬಾಲಕಿಯನ್ನು ಮನೆಯಿಂದ ಅಪಹರಿಸಿ, ಜಲಾವರ್‌ಗೆ ಕರೆದೊಯ್ದು ಆಕೆಯನ್ನು ಅತ್ಯಾಚಾರಿಗಳಿಗೆ ಮಾರಾಟ ಮಾಡಿದ್ದಕ್ಕಾಗಿ ಮಹಿಳೆಯೊಬ್ಬರಿಗೆ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ.

ಅಪರಾಧಿಗಳಿಗೆ ಶಿಕ್ಷೆ ವಿಧಿಸಿರುವ ಎಎಸ್‌ಜೆ ಚೌಧರಿ ಅವರು, 20 ವರ್ಷಗಳ ಜೈಲು ಶಿಕ್ಷೆಗೆ ಒಳಗಾದ ಅಪರಾಧಿಗಳಿಗೆ ತಲಾ 10,000 ರೂ. ಮತ್ತು ನಾಲ್ಕು ವರ್ಷಗಳ ಶಿಕ್ಷೆಗೆ ಒಳಗಾದವರಿಗೆ 7,000 ರೂ. ದಂಡ ವಿಧಿಸಿದ್ದಾರೆ.

16 ಜನರಿಗೆ ಶಿಕ್ಷೆ ವಿಧಿಸಿರುವ ನ್ಯಾಯಾಲಯವು, ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದ್ದ ಇತರ 12 ಜನರನ್ನು ಖುಲಾಸೆಗೊಳಿಸಿದೆ. ಅಲ್ಲದೆ, ನಾಲ್ವರು ಅಪ್ರಾಪ್ತ ಅಪರಾಧಿಗಳು ಇನ್ನೂ ಸ್ಥಳೀಯ ಬಾಲ ನ್ಯಾಯ ಮಂಡಳಿಯಲ್ಲಿ ಪ್ರತ್ಯೇಕವಾಗಿ ಪ್ರಕರಣದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ಈ ವರ್ಷದ ಮಾರ್ಚ್ 6 ರಂದು ಅಪ್ರಾಪ್ತ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇತ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಬಾಲಕಿಯನ್ನು ಪುಸಲಾಯಿಸಿ ಬುಲ್ಬುಲ್ ಅಲಿಯಾಸ್ ಪೂಜಾ ಜೈನ್ ಎಂಬ ಮಹಿಳೆ ಕೋಟಾದಲ್ಲಿ ಅಪಹರಿಸಿದ್ದಳು ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿತ್ತು.

ಪೂಜಾ ತನ್ನನ್ನು ಜಲಾವರ್‌ಗೆ ಕರೆದೊಯ್ದಳು. ಅಲ್ಲಿ ಒಂಬತ್ತು ದಿನಗಳ ಕಾಲ ತನ್ನನ್ನು ಒಬ್ಬರ ನಂತರ ಒಂದರಂತೆ ಹಲವಾರು ಜನರಿಗೆ ಹಸ್ತಾಂತರಿಸಿದ್ದಳು. ಎಲ್ಲರೂ ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಬಾಲಕಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ ನಂತರ, ಕೋಟಾ ಪೊಲೀಸರು ಮೇ 7 ರಂದು ನ್ಯಾಯಾಲಯಕ್ಕೆ 1,750 ಪುಟಗಳ ಚಾರ್ಜ್ ಶೀಟ್ ಅನ್ನು ಸಲ್ಲಿಸಿದ್ದರು. ಬಳಿಕ, ತ್ವರಿತವಾಗಿ ವಿಚಾರಣೆ ನಡೆಸಿದ ಕೋಟಾ ವಿಶೇಷ ಸೆಷನ್ ಕೋರ್ಟ್‌ ಶನಿವಾರ ತನ್ನ ತೀರ್ಪು ನೀಡಿದೆ ಎಂದು ಪ್ರಾಸಿಕ್ಯೂಷನ್ ವಕೀಲ ಪ್ರೇಮ್ ನಾರಾಯಣ್ ನಾಮದೇವ್ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಂಬ್‌ ಪ್ರಕರಣ; ದಂಡ ವಿಧಿಸಿದ್ದಕ್ಕೆ ಹುಸಿ ಕರೆ ಮಾಡಿದ್ದ ಕಿಡಿಗೇಡಿ ಪ್ರಯಾಣಿಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights