Fact check: ಮೊದಲ ಹೆಣ್ಣು ಬೊಂಬೆಯನ್ನು ಚೀನಾ ನಿರ್ಮಿಸಿದೆ ಎಂಬುದು ನಿಜವೆ?

ಚೀನಾ ತಯಾರಿಸಿದ ಮೊದಲ ಹೆಣ್ಣು ಬೊಂಬೆ, ಆರ್ಟೀಫೀಷಿಯಲ್ ಹ್ಯೂಮನ್ ರೋಬೋಟ್  ಎಂದು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆತ್ಮವನ್ನು ಹೊರತುಪಡಿಸಿ ಮನೆಕೆಲಸಗಳನ್ನು ಮಾಡಲು, ನೋಡಲು ಮತ್ತು ಸಾಮಾನ್ಯ ಮನುಷ್ಯನಂತೆ ಮಾತನಾಡಲು ಸಾಧ್ಯವಾಗುವ ಮೊದಲ ಮಾನವ ನಿರ್ಮಿತ ಕೃತಕ ಮಾನವ ಇದು ಎಂದು ಹೇಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್:

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ರನ್ ಮಾಡಿದಾಗ, ಅನೇಕ ರೀತಿಯ ವೀಡಿಯೊಗಳು ಕಂಡುಬಂದಿವೆ. ಅದೇ ವೀಡಿಯೊವನ್ನು ಮೇ 2018 ರಲ್ಲಿ ‘ಪ್ಲೇಸ್ಟೇಷನ್’ ಯೂಟ್ಯೂಬ್ ಚಾನೆಲ್ ಪ್ರಕಟಿಸಿರುವುದನ್ನು ನೋಡಬಹುದು – “ಡೆಟ್ರಾಯಿಟ್: ಬಿಕಮ್ ಹ್ಯೂಮನ್ – ಶಾರ್ಟ್ಸ್: ಕ್ಲೋಯ್ | PS4″. ಆಟಕ್ಕೆ ಸಂಬಂಧಿಸಿದ ಹೆಚ್ಚಿನ ದೃಶ್ಯಗಳನ್ನು ಇಲ್ಲಿ ವೀಕ್ಷಿಸಬಹುದು.

ಅಲ್ಲದೆ, ‘ಡೆಟ್ರಾಯಿಟ್: ಬಿಕಮ್ ಹ್ಯೂಮನ್’ ನ ಅಧಿಕೃತ ಟ್ವಿಟರ್  ಅಕೌಂಟ್ ವಿವರಣೆಯೊಂದಿಗೆ ಇದೇ ರೀತಿಯ ವೀಡಿಯೊಗೆ ಲಿಂಕ್ ಅನ್ನು ಪೋಸ್ಟ್ ಮಾಡಿದೆ – “ಸೈಬರ್‌ಲೈಫ್ ನಿರ್ಮಿಸಿದ ಮೊಟ್ಟಮೊದಲ ವೈಯಕ್ತಿಕ ಸಹಾಯಕ ಆಂಡ್ರಾಯ್ಡ್ ಕ್ಲೋಯ್.” ಆದ್ದರಿಂದ, ಇದು ನಿಜವಾದ ರೋಬೋಟ್ ಅಲ್ಲ, ಆದರೆ ಆಟದಲ್ಲಿ ‘ಕ್ಲೋಯ್’ ಎಂಬ ರೋಬೋಟ್ ಪಾತ್ರ. ಆಟದಲ್ಲಿನ ‘ಕ್ಲೋ’ ಪಾತ್ರದ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಕಾಣಬಹುದು.

ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ವೀಡಿಯೊದಲ್ಲಿನ ದೃಶ್ಯಗಳು ಪ್ಲೇ-ಸ್ಟೇಷನ್ ಆಟಕ್ಕೆ ಸಂಬಂಧಿಸಿವೆ – ‘ಡೆಟ್ರಾಯಿಟ್: ಬಿಕಮ್ ಹ್ಯೂಮನ್’. ಪೋಸ್ಟ್ ಮಾಡಿದ ವೀಡಿಯೊದಲ್ಲಿ ತೋರಿಸಿರುವ ಹೆಣ್ಣು ನಿಜವಾದ ರೋಬೋಟ್ ಅಲ್ಲ, ಆದರೆ ಆಟದಲ್ಲಿ ‘ಕ್ಲೋ’ ಎಂಬ ರೋಬೋಟ್ ಪಾತ್ರ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿರಿ: Fact check: ರಾಖೀ ಸಾವಂತ್ ಹಿಜಾಬ್ ಧರಿಸಿ ‘ಕರ್ನಾಟಕದ ವಿದ್ಯಾರ್ಥಿನಿಯರಿಗೆ’ ಬೆಂಬಲ ಸೂಚಿಸಿದ್ದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights