fact check: ಹಿಂದೂಗಳನ್ನು ಹೊರಹಾಕಬೇಕೆಂದು ರಾಹುಲ್ ಗಾಂಧಿ ಹೇಳಿಲ್ಲ

ಹಿಂದೂಗಳು ಮತ್ತು ಹಿಂದುತ್ವವಾದಿಗಳನ್ನು ಹೊರಹಾಕಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂಬ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು  ಪರಿಶೀಲಿಸೋಣ.

ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ರನ್ ಮಾಡಿದಾಗ, ಈ ದೃಶ್ಯಗಳು ಜೈಪುರದಲ್ಲಿ (ಡಿಸೆಂಬರ್ 2021 ರಲ್ಲಿ) ನಡೆದ ರ್ಯಾಲಿಯಲ್ಲಿ ರಾಹುಲ್ ಗಾಂಧಿಯವರ ಭಾಷಣಕ್ಕೆ ಸಂಬಂಧಿಸಿವೆ ಎಂದು ಕಂಡುಬಂದಿದೆ.

ಇಡೀ ಭಾಷಣವನ್ನು ಸಬ್ ಟೈಟಲ್‌ನೊಂದಿಗೆ ಕಾಣಬಹುದು ರಾಹುಲ್ ಗಾಂಧಿಯವರ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ಕ್ಲಿಪ್ ಅನ್ನು 12:08 ನಿಮಿಷಗಳ ವೀಡಿಯೊದಲ್ಲಿ  ರಾಹುಲ್ ಗಾಂಧಿ ಹೇಳುವುದನ್ನು ನೋಡಬಹುದು – “2014 ರಿಂದ ಹಿಂದುತ್ವವಾದಿಗಳ ಆಡಳಿತವಿದೆ, ಹಿಂದೂಗಳಲ್ಲ. ನಾವು ಮತ್ತೊಮ್ಮೆ ಈ ಹಿಂದುತ್ವವಾದಿಗಳನ್ನು ಹೊರಹಾಕಬೇಕು ಮತ್ತು ಹಿಂದೂಗಳ ಆಡಳಿತವನ್ನು ಮರಳಿ ತರಬೇಕು” ಎಂದಿದ್ದಾರೆ. ರಾಹುಲ್ ಗಾಂಧಿ ತಮ್ಮ ಇಡೀ ಭಾಷಣದಲ್ಲಿ ಹಿಂದೂಗಳು ಮತ್ತು ಹಿಂದುತ್ವವಾದಿಗಳ ನಡುವೆ ಇರುವ  ವ್ಯತ್ಯಾಸದ ಬಗ್ಗೆ ಹೇಳಿದ್ದಾರೆ. ಹಿಂದುತ್ವವನ್ನು ಹಿಂದೂ ಬಲಪಂಥೀಯ ಗುಂಪುಗಳ ರಾಜಕೀಯ ಸಿದ್ಧಾಂತ ಎಂದು ರಾಹುಲ್ ಗಾಂಧಿ ಹೋಲಿಸಿದ್ದಾರೆ.

ಅಲ್ಲದೆ, 12 ಡಿಸೆಂಬರ್ 2021 ರಂದು, ‘ANI’ ಟ್ವೀಟ್ ಮಾಡಿದೆ – “ಹಿಂದುತ್ವವಾದಿಗಳು ಅಧಿಕಾರವನ್ನು ಮಾತ್ರ ಬಯಸುತ್ತಾರೆ ಮತ್ತು ಅವರು 2014 ರಿಂದ ಅಧಿಕಾರದಲ್ಲಿದ್ದಾರೆ. ನಾವು ಈ ಹಿಂದುತ್ವವಾದಿಗಳನ್ನು ಅಧಿಕಾರದಿಂದ ಹೊರಹಾಕಬೇಕು ಮತ್ತು ಹಿಂದೂಗಳನ್ನು ಮರಳಿ ಕರೆತರಬೇಕು: ಜೈಪುರದಲ್ಲಿ ಪಕ್ಷದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದಾರೆ ಎಂದು ಬರೆಯಲಾಗಿದೆ”.  ರಾಹುಲ್ ಗಾಂಧಿಯವರ ಕಾಮೆಂಟ್‌ಗಳ ಕುರಿತು ಕೆಲವು ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ರಾಹುಲ್ ಗಾಂಧಿಯವರು ರಾಜಸ್ಥಾನದ ಜೈಪುರದಲ್ಲಿ ಕಾಂಗ್ರೆಸ್ ರ್ಯಾಲಿಯಲ್ಲಿ ಮಾತನಾಡುವಾಗ – “ಹಿಂದುತ್ವವಾದಿಗಳನ್ನು ಹೊರಹಾಕಬೇಕು ಮತ್ತು ಹಿಂದೂಗಳ ಆಳ್ವಿಕೆಯನ್ನು ಮರಳಿ ತರಬೇಕು”. ಎಂಬ ಹೇಳಿಕೆಯನ್ನು.  “ಹಿಂದೂಗಳು ಮತ್ತು ಹಿಂದುತ್ವವಾದಿಗಳನ್ನು ಹೊರಹಾಕಬೇಕು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಎಡಿಟ್ ಮಾಡಿದ ವಿಡಿಯೊವನ್ನು ವೈರಲ್ ಮಾಡಿ ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ.


ಇದನ್ನು ಓದಿರಿ: Fact check: ಗ್ರೀಕ್‌ನ ಸುಂದರ ದೃಶ್ಯವನ್ನು ಉತ್ತರ ಪ್ರದೇಶದ ಹೆದ್ದಾರಿ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights