Fact check: ಅನೀಲ್ ಉಪಾಧ್ಯಾಯ ಎಂಬ ಕಾಂಗ್ರೆಸ್ ಶಾಸಕ ಜಿಂಕೆಯನ್ನು ಗುಂಡಿಕ್ಕಿ ಹತ್ಯೆಗೈದ ಸುದ್ದಿ ನಿಜವೆ?

ವನ್ಯಜೀವಿಗಳನ್ನು ಭೇಟೆ ಆಡುವುದು ಕಾನೂನು ಬಾಹಿರ ಎಂದು ಗೊತ್ತಿದ್ದರು ಇದನ್ನು ಉಲ್ಲಂಗಿಸಿ ವನ್ಯಜೀವಿಗಳನ್ನು ಭೇಟಿಯಾಡುವುದು ವರದಿಯಾಗುತ್ತಿರುತ್ತವೆ. ಈಗ ಅಂತದ್ದೆ  ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಅನಿಲ್ ಉಪಾಧ್ಯಾಯ ಅವರು ಉದ್ಯಾನವನದಲ್ಲಿ ಜಿಂಕೆಗೆ ಗುಂಡು ಹಾರಿಸುತ್ತಿರುವ ದೃಶ್ಯಗಳು ಎಂದು ಹೇಳುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, 2019 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಒಂದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊಗಳು ಲಭ್ಯವಾಗಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಅಂತಹ ವೀಡಿಯೊಗಳಲ್ಲಿ ಒಂದಕ್ಕೆ ಪ್ರತಿಕ್ರಿಯಿಸುವಾಗ, ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ವೀಡಿಯೊ ಬಾಂಗ್ಲಾದೇಶದಿಂದ ಬಂದಿದೆ ಮತ್ತು ಚಿತ್ತಗಾಂಗ್‌ನ ಹಿಲ್ಸ್‌ಡೇಲ್ ಫಾರ್ಮ್‌ನಲ್ಲಿರುವ ವ್ಯಕ್ತಿಯನ್ನು ಮೊಯಿನ್ ಉದ್ದೀನ್ ಎಂದು ಗುರುತಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ವಿವರಗಳಿಗಾಗಿ ಸರ್ಚ್ ಮಾಡಿದಾಗ, 12 ಜುಲೈ 2015 ರಂದು ‘ಡೈಲಿ ಸ್ಟಾರ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ದೃಶ್ಯವುಳ್ಳ ಫೋಟೋ ಕಂಡುಬಂದಿದೆ. ಲೇಖನದ ಪ್ರಕಾರ ಮೊಯಿನ್ ಉದ್ದೀನ್ ಎಂಬ ವ್ಯಕ್ತಿಯು  ಆಸ್ಟ್ರೇಲಿಯಾ ಮೂಲದ ಬಾಂಗ್ಲಾದೇಶಿ ನಿವಾಸಿ. ಆತ ಚಿತ್ತಗಾಂಗ್‌ನಲ್ಲಿರುವ ತನ್ನ ಹಿಲ್ಸ್‌ಡೇಲ್ ಫಾರ್ಮ್‌ನಲ್ಲಿ ಜಿಂಕೆಯನ್ನು ಬಂದೂಕಿನಿಂದ ಹತ್ಯೆಗೈಯುವ  ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿತ್ತು.

ಈ ಘಟನೆ ಜೂನ್ 2015 ರಲ್ಲಿ ನಡೆದಿದೆ ಎಂದು ವರದಿಯಾಗಿದೆ.ಈ ವಿಡಿಯೊ ನೋಡಿದ ನೆಟ್ಟಿಗರಿಂದ  ಟೀಕೆಗಳ ಸುರಿಮಳೆಯೇ ವ್ಯಕ್ತವಾಗಿತ್ತು.  ನಂತರ ಚಿತ್ತಗಾಂಗ್ ಅರಣ್ಯ ಅಧಿಕಾರಿಗಳು ಮೊಯಿನ್ ಉದ್ದೀನ್ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದರು ಮತ್ತು ಅವರ ಜಮೀನಿನಿಂದ 16 ಜಿಂಕೆಗಳನ್ನು ವಶಪಡಿಸಿಕೊಂಡರು ಎಂದು ವರದಿಯಾಗಿದೆ.

ಹಲವು ಸುದ್ದಿ ವೆಬ್‌ಸೈಟ್‌ಗಳು 2015 ರಲ್ಲಿ ಈ ಘಟನೆಯನ್ನು ಕುರಿತು ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. 13 ಜುಲೈ 2015 ರಂದು, ಮೊಯಿನ್ ಉದ್ದೀನ್ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಂಡ ವೀಡಿಯೊ ಹಳೆಯದು ಮತ್ತು ಬಾಂಗ್ಲಾದೇಶದ್ದು ಎಂದು ಖಾತ್ರಿಯಾಗಿದೆ.

‘ಅನಿಲ್ ಉಪಾಧ್ಯಾಯ’ ಕುರಿತು ‘ಮೈ ನೇತಾ’ ವೆಬ್‌ಸೈಟ್‌ನಲ್ಲಿ ಸರ್ಚ್ ಮಾಡಿದಾಗ, ‘ಅನಿಲ್ ಉಪಾಧ್ಯಾಯ’ ಎಂಬ ಹೆಸರಿನ ಕಾಂಗ್ರೆಸ್ ಶಾಸಕ ಯಾರೂ ಇಲ್ಲದಿರುವುದು ಕಂಡುಬಂದಿದೆ.  ಆ ಹೆಸರಿನ ಇಬ್ಬರು ವ್ಯಕ್ತಿಗಳಿದ್ದಾರೆ ಆದರೆ ಅವರಿಬ್ಬರೂ INC (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಗೆ ಸೇರಿಲ್ಲ.

ಈ ಹಿಂದೆಯೂ  ‘ಬಿಜೆಪಿ ಶಾಸಕ ಅನಿಲ್ ಉಪಾಧ್ಯಾಯ’ ಮತ್ತು ‘ಕಾಂಗ್ರೆಸ್ ಶಾಸಕ ಅನಿಲ್ ಉಪಾಧ್ಯಾಯ’ ಎಂಬ ಹೆಸರಿಗೆ ಸಂಬಂಧಿಸಿದಂತೆ  ಕೆಲವು  ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಫ್ಯಾಕ್ಟ್ಲಿ ಅವುಗಳನ್ನು ತಳ್ಳಿಹಾಕಿದೆ. ಫ್ಯಾಕ್ಟ್‌ಚೆಕ್‌ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ವ್ಯಕ್ತಿಯೊಬ್ಬ ಜಿಂಕೆಯನ್ನು ಗುಂಡಿಕ್ಕಿ ಹತ್ಯೆ ಮಾಡುವ ಹಳೆಯ ವೀಡಿಯೊವನ್ನು ಇಲ್ಲದೆ ಇರುವ ಅನಿಲ್ ಉಪಾಧ್ಯಾಯ ಎಂಬ ಹೆಸರಿನ ಕಾಲ್ಪನಿಕ ರಾಜಕಾರಣಿ ಹೆಸರಿನಲ್ಲಿ ಸುಳ್ಳು  ಹಂಚಿಕೊಳ್ಳಲಾಗಿದೆ.

   ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಿಜಾಬ್ ಧರಿಸಿದ ಕಾರಣಕ್ಕೆ ಹಿಂದೂ ಕಾರ್ಯಕರ್ತರು ಮಹಿಳೆಯನ್ನು ಬಸ್ಸಿನಿಂದ ಹೊರಗೆ ತಳ್ಳಿದ್ದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights