ಫ್ಯಾಕ್ಟ್‌ಚೆಕ್: ಹಿಜಾಬ್ ಪರ ವಾದಿಸಿದ ವಕೀಲರಿಗೆ ನ್ಯಾಯಾಧೀಶರು ವಾಗ್ದಂಡನೆ ವಿಧಿಸಿದ್ದು ನಿಜವೆ?

ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶವನ್ನು ನಿರಾಕರಿಸಲಾಗಿತ್ತು ನಂತರ ಉಡುಪಿ ಕಾಲೇಜಿನ  ಆರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದರೆ ಕಾಲೇಜಿಗೆ  ಪ್ರವೇಶವನ್ನು ನಿಷೇಧಿಸುವ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ನಂತರ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ರಾಜ್ಯದಲ್ಲಿ ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು.

ಕೆಲವರು ಹಿಜಾಬ್ ಅವರ ಮೂಲಭೂತ ಹಕ್ಕು ಎಂದು ಮುಸ್ಲಿಂ ವಿದ್ಯಾರ್ಥಿನಿರ ಪರವಾಗಿ ವಾದಿಸಿದರೆ , ನಾವೂ ಕೂಡ ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬರುವದಾಗಿ ಮತ್ತೊಂದು ವಿದ್ಯಾರ್ಥಿಗಳ ಗುಂಪು  ಪ್ರತಿಭಟನೆ ನಡೆಸಿತ್ತು. ವಿವಾದ ಭುಗಿಲೆದ್ದ ಬೆನ್ನಲ್ಲೆ ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿತ್ತು. ಹೈಕೋರ್ಟ್ನಲ್ಲಿ ಒಂದು ತಿಂಗಳ ವಿಚಾರಣೆಯ ನಂತರ ನ್ಯಾಯಾಲಯವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಬಾರದು ಎಂದು ತೀರ್ಪು ನೀಡಿತ್ತು. ಕೋರ್ಟ್‌ನ  ಈ ಆದೇಶಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಸ್ಲಿಂ ಸಮುದಾಯವೂ ರಾಜ್ಯದಲ್ಲಿ ಬಂದ್‌ಗೆ ಕರೆ ನೀಡಿತ್ತು.

ಈ ವಿವಾದದ ನಡುವೆ ಹಿಜಾಬ್ ಧರಿಸಲು ಅವಕಾಶ ಕೊಡಬೇಕೆಂದು ಅರ್ಜಿದಾರರ ಪರ ವಾದಿಸುತ್ತಿದ್ದ ವಕೀಲರನ್ನು ಕರ್ನಾಟಕ ಹೈಕೋರ್ಟ್ ಕಿತ್ತೆಸೆದಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗಿದೆ. ಈ 45-ಸೆಕೆಂಡ್‌ಗಳ ಅವದಿಯ ವೀಡಿಯೊ ರೆಕಾರ್ಡಿಂಗ್‌ನಲ್ಲಿ,  ಗೌರವಾನ್ವಿತ ನ್ಯಾಯಾಲಯದ ಪರಿಮಿತಿಯನ್ನು ಉಲ್ಲಂಗಿಸಿದ ಕಾರಣಕ್ಕೆ ಮುಖ್ಯ ನ್ಯಾಯಾಧೀಶರು ವಕೀಲರನ್ನು ಛೀಮಾರಿ ಹಾಕುವುದನ್ನು ಕಾಣಬಹುದು ಎಂದು ಹೇಳಲಾಗಿದೆ.

“ಹಿಜಾಬ್ ಪ್ರಕರಣದ ಅರ್ಜಿದಾರರ ಪರ ವಾದಿಸುತ್ತಿದ್ದ ವಕೀಲರನ್ನು ನ್ಯಾಯಾಲಯ (ಕಿತ್ತೆಸೆದಿದೆ) ವಾಗ್ದಂಡನೆ ವಿಧಿಸಿದೆ. ಈ ವಿಷಯ ಎಷ್ಟು ಗಂಭೀರವಾಗಿದೆ ಮತ್ತು ಇದನ್ನು ಸಿಜೆಐ ಕರ್ನಾಟಕಕ್ಕೆ ತರಲು ವಕೀಲರು ಎಷ್ಟು ಮೂರ್ಖರಾಗಿದ್ದಾರೆ ಎಂಬುದು ಜನರಿಗೆ ತಿಳಿದಿರಬೇಕು.” ಎಂಬ ಹೇಳಿಕೆಯೊಂದಿಗೆ ಟ್ವಿಟ್ ಮಾಡಲಾಗಿದೆ.

ಅದೇ ಹೇಳಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ವಿಡಿಯೋ ಕೂಡ ವೈರಲ್ ಆಗಿದೆ.

ಫ್ಯಾಕ್ಟ್‌ಚೆಕ್:

ಸಾಮಾಇಕ ಮಾಧ್ಯಮದ್ಲಿ ವೈರಲ್ ಆಗಿರುವ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ವಿಡಿಯೊದಲ್ಲಿರುವ ನ್ಯಾಯಾಧೀಶರಲ್ಲಿ ಒಬ್ಬರು ಕಪ್ಪು ಮಾಸ್ಕ್ ಧರಿಸಿರುವುದನ್ನು ಗಮನಿಸಿದ್ದೇವೆ ಮತ್ತು ಗಡಿಯಾರದಲ್ಲಿ ಸಮಯ 11:20 AM ಆಗಿದೆ, ವೀಡಿಯೊದಲ್ಲಿ ಮತ್ತೊಬ್ಬ ನ್ಯಾಯಾಧೀಶರು ಅವರ ಮುಖ ಚಹರೆಯಲ್ಲಿ ದಾಡಿ ಮತ್ತು ಮೀಸೆ ಇರುವದನ್ನು ಕಣಬಹುದು.

ಇವೆಲ್ಲವನ್ನೂ ಕ್ಲೂಗಳಾಗಿ ತೆಗೆದುಕೊಂಡು, ಕರ್ನಾಟಕ ಹೈಕೋರ್ಟ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿರುವ ವೀಡಿಯೊಗಳನ್ನು ಗೂಗಲ್ ಮಾಡಿ ಮೂಲ ವೀಡಿಯೊವನ್ನು ಕಂಡುಕೊಂಡಿದ್ದೇವೆ. ವಿಚಾರಣೆಯನ್ನು ಮಾರ್ಚ್ 3, 2022 ರಂದು ಲೈವ್-ಸ್ಟ್ರೀಮ್ ಮಾಡಲಾಗಿದೆ. ವೈರಲ್ ಬಿಟ್ 36:00 ನಿಮಿಷಕ್ಕೆ ಪ್ರಾರಂಭವಾಗುತ್ತದೆ.

ವೀಡಿಯೊ ಸ್ಟ್ರೀಮ್‌ನಲ್ಲಿ ಇಬ್ಬರು ನ್ಯಾಯಾಧೀಶರನ್ನು ಮಾತ್ರ ಕಾಣುತ್ತಿದ್ದಾರೆ . ಈ ವಿಡಿಯೋದಲ್ಲಿ ಕಾಣುವ ನ್ಯಾಯಾಧೀಶರು ಹಿಜಾಬ್ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡು, ಮೂವರು ನ್ಯಾಯಾಧೀಶರ ಪೀಠವು ಮುನ್ನಡೆಸಿತು. ಆದರೆ ವೈರಲ್ ಆಗಿರುವ ವಿಡಿಯೊ  ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿಲ್ಲ ಎಂದು ಸೂಚಿಸುತ್ತದೆ.

ಕರ್ನಾಟಕ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕರಣವನ್ನು ಪರಿಶೀಲಿಸಲಾಗಿದ್ದು ಮತ್ತು ವೈರಲ್ ವೀಡಿಯೊದಲ್ಲಿ ದಾಖಲಿಸಲಾದ ನ್ಯಾಯಾಲಯದ ಕಲಾಪವು ಹಿಜಾಬ್ ಗೆ  ಸಂಬಂಧಿಸಿಲ್ಲ. ಬದಲಿಗೆ ಆಕ್ಟ್ 1996 ಸೆಕ್ಷನ್ 37ರ ಮಧ್ಯಸ್ಥಿಕೆ ಮತ್ತು ರಾಜಿ ಕಾಯಿದೆಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ,

 

ಇದಲ್ಲದೆ, ವಕೀಲರನ್ನು “ಕಲಾಪದಿಂದ ವಜಾ ಮಾಡಲಾಗಿದೆ” ಎಂಬ ಹೇಳಿಕೆಯು ಸಹ ತಪ್ಪಾಗಿದೆ ಏಕೆಂದರೆ ತೀರ್ಪಿನ ಆದೇಶದಲ್ಲಿ ನ್ಯಾಯಾಲಯವು ವಕೀಲರ ಚಿಕ್ಕ ವಯಸ್ಸನ್ನು ಪರಿಗಣಿಸಿ ಯಾವುದೇ ಕ್ರಮಗಳನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವಾಣಿಜ್ಯ ಮೇಲ್ಮನವಿಯಲ್ಲಿ ನಡೆದ ಬೇರೆ ಕಲಾಪದಲ್ಲಿ  ನ್ಯಾಯಾಲಯವು ವಕೀಲರನ್ನು ವಾಗ್ದಂಡನೆ ಹುರಿ ಮಾಡಿತ್ತು, ಈ ವೀಡಿಯೊವನ್ನು ತಿರುಚಿ ಹಿಜಾಬ್ ಗೆ ಸಂಬಂಧಿಸಿದ ವಿಡಿಯೋ  ಎಂದು ತಪ್ಪು ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗುತ್ತಿದೆ.

ಕೃಪೆ: ಆಲ್ಟ್‌ನ್ಯೂಸ್


ಇದನ್ನು ಓದಿರಿ: Fact check:ಪಾಕಿಸ್ತಾನದ ಸಂಸತ್‌ನಲ್ಲಿ ‘ಮೋದಿ ಜಿಂದಾಬಾದ್‌’ ಎಂದು ಘೋಷಣೆ ಕೂಗಿಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights