ಫ್ಯಾಕ್ಟ್‌ಚೆಕ್: ಪಾಕಿಸ್ತಾನದಲ್ಲಿ 50 ಮತ್ತು 200 ರೂ ಖೋಟಾ ನೋಟುಗಳ ಮುದ್ರಣ ಮಾಡಲಾಗಿದೆ ಎಂಬುದು ನಿಜವೆ?

ಹೊಸ 50 ಮತ್ತು  200 ರೂಪಾಯಿ ಮೌಲ್ಯದ ಗರಿ ಗರಿ ನೋಟುಗಳನ್ನು ಮುದ್ರಣ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೊ ದೃಶ್ಯಗಳಲ್ಲಿ ವ್ಯಕ್ತಿಯೊಬ್ಬ 50 ರೂಪಾಯಿ ನೋಟುಗಳ ಬಂಡಲ್‌ಗಳನ್ನು ಜೋಡಿಸುತ್ತಿರುವುದನ್ನು ನೋಡಬಹುದಾಗಿದೆ. ಈ ದೃಶ್ಯಗಳನ್ನು ಚಿತ್ರೀಕರಣ ಮಾಡುವ ವ್ಯಕ್ತಿಯು ಕ್ಯಾಮರಾವನ್ನು ಪ್ಯಾನ್ ಮಾಡುವಾಗ ಮುದ್ರಣ ಯಂತ್ರಗಳೊಂದಿಗೆ 200 ಮತ್ತು 50 ರೂಪಾಯಿಗಳ ನೋಟುಗಳ ರಾಶಿಯು ಕಾಣುತ್ತಿದೆ.

“ಪಾಕಿಸ್ತಾನದಲ್ಲಿ ಗುಡಿ ಕೈಗಾರಿಕೆ… ನಮ್ಮ ಭಾರತೀಯ ಕರೆನ್ಸಿಯ ಕೋಟಾ ನೋಟುಗಳನ್ನು ಮುದ್ರಿಸಿ ನಮ್ಮ ದೇಶದಲ್ಲಿ ಚಲಾವಣೆ ಮಾಡಲು ಯತ್ನಿಸುತ್ತಿದೆ, ದಯವಿಟ್ಟು ಈ ವೀಡಿಯೊವನ್ನು ಎಲ್ಲರಿಗೂ ಕಳುಹಿಸಿ, ಇಲ್ಲದಿದ್ದರೆ ರಹಸ್ಯವಾಗಿ ಈ ದೃಶ್ಯಗಳ್ನು ಸೆರೆಹಿಡಿಯುತ್ತಿರುವ ವ್ಯಕ್ತಿಯ, ಶ್ರಮ ಯಶಸ್ವಿಯಾಗುವುದಿಲ್ಲವ” ಎನ್ನುವ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ವೈರಲ್ ವಿಡಿಯೊದ ಸತ್ಯಾಸತ್ಯತೆ ಏನೆಂದು ತಿಳಿಸುವಂತೆ ಏನ್‌ಸುದ್ದಿ.ಕಾಂಗೆ ಸಂದೇಶಗಳು ಬಂದಿದ್ದು ವಿಡಿಯೊದಲ್ಲಿರುವ ದೃಶ್ಯಗಳ ನೈಜತೆ ತಿಳಿಸುವಂತೆ ವಿನಂತಿಗಳು ಬಂದಿದ್ದವು. ವೈರಲ್ ವಿಡಿಯೋದ ನೈಜತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ವಿಡಿಯೊದಲ್ಲಿರುವ ನೋಟುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವುಗಳ ಮೇಲೆ ‘ಇಂಡಿಯನ್ ಚಿಲ್ಡ್ರನ್ ಬ್ಯಾಂಕ್’ ಎಂದು ಸ್ಪಷ್ಟವಾಗಿ ಮುದ್ರಿತವಾಗಿರುವುದನ್ನು BOOM ಕಂಡುಹಿಡಿದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುದ್ರಿಸುವ ನೋಟುಗಳಿಗಿಂತ ಈ ನೋಟುಗಳು ದೊಡ್ಡದಾಗಿದೆ. ಮಕ್ಕಳು ಆಟ ಆಡಲು ಈ ನೋಟುಗಳ ಪ್ರತಿರೂಪವನ್ನು ಮುದ್ರಿಸಿ ಮಾರಾಲಾಗುತ್ತದೆ. ಈ ದೃಶ್ಯಗಳನ್ನು ಎಲ್ಲಿ ಸೆರೆಹಿಡಿಯಲಾಗಿದೆ ಎಂದು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದರೆ, ವ್ಯಕ್ತಿಯು ಮರಾಠಿಯಲ್ಲಿ ಮಾತನಾಡುವುದು ಕೇಳಿಸುತ್ತದೆ. ಹಾಗಾಗಿ ಅದು ಪಾಕಿಸ್ತಾನ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಭಾರತದ ಕರೆನ್ಸಿ ನೋಟುಗಳನ್ನು ಹೋಲುವ ವಸ್ತುಗಳನ್ನು ಹೊಂದುವುದು ಅಥವಾ ಉತ್ಪಾದಿಸುವುದು ಕಾನೂನುಬಾಹಿರ ಮತ್ತು ಭಾರತೀಯ ಕಾನೂನಿನಿಂದ ಶಿಕ್ಷಾರ್ಹವಾಗಿದೆ. ಇದೇ ರೀತಿಯ ನೋಟುಗಳು ಈ ಹಿಂದೆಯೂ ನೈಜ ನೋಟುಗಳಾಗಿ ಚಲಾವಣೆಯಾಗಿದ್ದವು. ಫೆಬ್ರವರಿ 2017 ರಲ್ಲಿ, ನವದೆಹಲಿಯ ಸಂಗಮ್ ವಿಹಾರ್‌ನಲ್ಲಿರುವ ಎಸ್‌ಬಿಐ ಎಟಿಎಂನಲ್ಲಿ ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ ನೊಂದಿಗೆ ನಕಲಿ 2000 ರೂಪಾಯಿಯ ನೋಟುಗಳನ್ನು ಚಲಾವಣೆಯಾಗುತ್ತಿವೆ ಎಂದು ವರದಿಗಳಾಗಿದ್ದವು. 2018 ರ ಜನವರಿಯಲ್ಲಿ ಅದೇ ವೀಡಿಯೊವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿತ್ತು. ಹಾಗಾಗಿ ಇದೊಂದು ಹಳೆಯ ವಿಡಿಯೊ ಆಗಿದ್ದು ಪಾಕಿಸ್ತಾನದಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ. ಹಾಗಾಗಿ ವಿಡಿಯೊದಲ್ಲಿ ಮಾಡಲಾಗಿರುವ ಪ್ರತಿಪಾನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ವಿಚಿತ್ರ ಮಗು ಜನಿಸಿದ್ದು ಉತ್ತರಪ್ರದೇಶದಲ್ಲಿ ಅಲ್ಲ, ಮಧ್ಯಪ್ರದೇಶದಲ್ಲಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights