ಫ್ಯಾಕ್ಟ್‌ಚೆಕ್: ನಟಿ ಸ್ವರಾ ಭಾಸ್ಕರ್ ರಹಸ್ಯವಾಗಿ ಮದುವೆಯಾದರು ಎಂದು ಸುಳ್ಳು ವರದಿ ಮಾಡಿದ ಉದಯವಾಣಿ

ನಟಿ ಸ್ವರಾ ಭಾಸ್ಕರ್‌ ಇದೀಗ ಮದುವೆಯಾದ ಖುಷಿಯಲ್ಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹಾದ್ ಜಿರಾರ್ ಅಹ್ಮದ್ ಅವರನ್ನು ಸ್ವರಾ ಭಾಸ್ಕರ್ ಗುರುವಾರ (ಫೆ. 16) ವಿವಾಹವಾಗಿದ್ದಾರೆ. ಈ ಜೋಡಿಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

34 ವರ್ಷದ ಬಾಲಿವುಡ್ ನಟಿ ಸ್ವರಾ ತನಗಿಂತ 4 ವರ್ಷ ಕಿರಿಯನಾದ ಸಮಾಜವಾದಿ ಪಕ್ಷದ ಫಹಾದ್ ಜಿರಾರ್ ಅಹ್ಮದ್ ಜೊತೆಗೆ ಮದುವೆ ಆಗಿರುವ ಸುದ್ದಿಯನ್ನು, ಕನ್ನಡದ ಮುಖ್ಯವಾಹಿನಿ ಮಾಧ್ಯಮವಾದ ಉದಯವಾಣಿ “ಮುಸ್ಲಿಂ ರಾಜಕಾರಣಿಯನ್ನು ರಹಸ್ಯವಾಗಿ ಮದುವೆಯಾದ ನಟಿ ಸ್ವರಾ ಭಾಸ್ಕರ್” ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ. ಹಾಗಿದ್ದರೆ ನಟಿ ಸ್ವರಾ ಭಾಸ್ಕರ್ ಯಾರಿಗೂ ತಿಳಿಯದ ಹಾಗೆ ರಹಸ್ಯವಾಗಿ ಮದುವೆಯಾದರೆ? ತಿಳಿದುಕೊಳ್ಳೋಣ.

ರಿಜಿಸ್ಟರ್ ಮದುವೆಯಾದ ನಟಿ ಸ್ವರಾ ಮತ್ತು ಫಹಾದ್ 

ಸ್ವರಾ ಮತ್ತು ಫಹಾದ್‌ ಜೋಡಿ ಕುಟುಂಬದ ಆಪ್ತರ ಸಮ್ಮುಖದಲ್ಲಿ ಸರಳ ಮದುವೆಯಾಗಿದ್ದಾರೆ. ಕೆಂಪು ಸೀರೆಯಲ್ಲಿ ಸ್ವರಾ ಕಾಣಿಸಿದರೆ, ಕೆಂಪು ಮತ್ತು ಬಂಗಾರ ವರ್ಣದ ಕುರ್ತಾದಲ್ಲಿ ಫಹಾದ್‌ ಮಿಂಚಿದ್ದಾರೆ. ಇಬ್ಬರೂ ಕೊರಳಿಗೆ ಹಾರ ಧರಿಸಿ, ಕೈ ಕೈ ಹಿಡಿದುಕೊಂಡು ಕೋರ್ಟ್‌ ಅಂಗಳದಿಂದ ಹೊರ ಬರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಬಳಿಕ ಈ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿಯೂ ಸ್ವರಾ ಹಂಚಿಕೊಂಡಿದ್ದಾರೆ. ಮದುವೆಯಾಗುವ ಬಗ್ಗೆ ಜ. 6ರಂದೇ ಈ ಜೋಡಿ ಕೋರ್ಟ್‌ಗೆ ಸೂಕ್ತ ದಾಖಲೆ ನೀಡಿತ್ತು. ಈಗ ವಿಶೇಷ ವಿವಾಹ ಕಾಯ್ದೆ ಅನುಸಾರ ಮದುವೆಯ ನೋಂದಣಿ ಮಾಡಿಸಿದ್ದಾರೆ.

ಮದುವೆ ಎಂಬುದು ಒಂದು ಖಾಸಗಿ ಸಂಗತಿ. ಗಂಡು ಮತ್ತು ಹೆಣ್ಣಿನ ಮನೆಯ ಆಪ್ತರಿಗೆ ಆಹ್ವಾನ ಇದ್ದೆ ಇರುತ್ತದೆ. ಆರೆ ಬಾಲಿವುಡ್‌ನ ವೈಭವಯುತ, ಐಷರಾಮಿ, ದುಂದುವೆಚ್ಚದ ಮದುವೆಗಳಿಗೆ ಭಿನ್ನವಾಗಿ ಸ್ವರಾ ಮತ್ತು ಫಹಾದ್ ಸರಳವಾಗಿ ರಿಜಿಸ್ಟರ್ ಮದುವೆಯಾಗಿದ್ದಾರೆ. ಅದು ಅವರ ಆಯ್ಕೆಯಾಗಿದ್ದು ಅವರು ನಂಬಿರುವ ತತ್ವಗಳಿಗೆ ಅನುಗುಣವಾಗಿದೆ.

ಸಮಾಜದಲ್ಲಿ ಒಂದು ವರ್ಗ ಸೃಷ್ಠಿಸಿರುವ ಭ್ರಮಾಲೋಕದಿಂದಾಗಿ ಸರಳವಾಗಿ ನಡೆಯಬೇಕಿದ್ದ ಮದುವೆಗಳು ಇಂದು ಆಡಂಬರ, ತೋರಿಕೆ, ಕಣ್ಣುಕುಕ್ಕುವ ಉಡುಗೆ ತೊಡುಗೆ, ಆಭರಣ, ವ್ಯರ್ಥವಾಗುವ ಆಹಾರ ಹೀಗೆ ಎಲ್ಲವೂ ತೋರಿಕೆಗಾಗಿಯೇ ನಡೆಯುವ ಶ್ರೀಮಂತಿಕೆಯ ಪ್ರದರ್ಶನವಾಗಿ ಬದಲಾಗಿವೆ. ಇಂತಹ ಸಂದರ್ಭದಲ್ಲಿ ಈ ಜೋಡಿ ಭಿನ್ನ ಹೆಜ್ಜೆ ಇಟ್ಟಿರುವುದಕ್ಕೆ ಹಲವರು ಶ್ಲಾಘಿಸಿದ್ದಾರೆ.

‘ಈ ಹೃದಯ ನಿಮ್ಮದು ಫಹಾದ್’ ಎಂದು ಟ್ವೀಟ್‌ ಮಾಡಿದ ಸ್ವರಾ

ಸ್ವರಾ ಮತ್ತು ಫಹಾದ್‌ ಇಬ್ಬರ ಮುಖಾಮುಖಿಯಾಗಿದ್ದು 2019ರಲ್ಲಿನ ಪ್ರತಿಭಟನೆಯೊಂದರಲ್ಲಿ. ಅದಾದ ಬಳಿಕ ಇಬ್ಬರ ಸ್ನೇಹ ಮುಂದುವರಿದಿತ್ತು. ಸ್ವರಾ ತನ್ನ ಭಾವನೆಗಳನ್ನ ಗೆಳೆಯ ಫಹಾದ್‌ನೊಂದಿಗೆ ಹಂಚಿಕೊಂಡ ಬಗೆ ಹೀಗಿದೆ.

‘ಕೆಲವೊಮ್ಮೆ ಪಕ್ಕದಲ್ಲೇ ಇರುವುದನ್ನು ನೀವು ಎಲ್ಲೆಲ್ಲೋ ಹುಡುಕುತ್ತೀರಿ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು. ಆದರೆ ನಮಗೆ ಸ್ನೇಹ ಮೊದಲು ಸಿಕ್ಕಿತು. ನಂತರ ನಾವು ಒಬ್ಬರನ್ನೊಬ್ಬರು ಪಡೆದುಕೊಂಡೆವು. ನನ್ನ ಹೃದಯಕ್ಕೆ ನಿಮಗೆ ಸ್ವಾಗತ ಫಹಾದ್​ ಅಹ್ಮದ್. ಈ ಹೃದಯ ತುಂಬ ಅಸ್ತವ್ಯಸ್ತವಾಗಿದೆ. ಆದರೂ ಇದು ನಿಮ್ಮದು’ ಎಂದು ಸ್ವರಾ ಭಾಸ್ಕರ್​ ಅವರು ಪೋಸ್ಟ್​ ಮಾಡಿದ್ದಾರೆ.

ವಯಸ್ಸಿನಲ್ಲಿ ತನಗಿಂತ ಆರು ವರ್ಷ ಕಿರಿಯನಾದ ರಾಜಕಾರಣಿ ಫಹಾದ್‌ ಅಹ್ಮದ್ ಜತೆ ಸ್ವರಾ ಭಾಸ್ಕರ್‌ ದಿಢೀರ್‌ ಮದುವೆ!

ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ನಮ್ಮ ಮದುವೆ ಪ್ರಕ್ರಿಯೆ ಆತಂಕಕಾರಿಯಾಗಿತ್ತು, ಆದರೆ ನಮ್ಮಿಬ್ಬರ ಮುಖದಲ್ಲಿನ ನಗು ಮದುವೆ ಸೂಸೂತ್ರವಾಗಿ ನೆರವೇರಿದೆ ಎಂಬುದನ್ನು ಸೂಚಿಸುತ್ತದೆ. ಕೋರ್ಟಿನಿಂದ ಹೊರಬರುವಾಗ ಸ್ವರ ಡ್ಯಾನ್ಸ್ ಮಾಡದಂತೆ ತಡೆಯಲಾಗಲಿಲ್ಲ, ಬದಲಿಗೆ ನಾನು ಸೇರಿ ಡ್ಯಾನ್ಸ್ ಮಾಡಿದೆ. ಖುಷಿ ಮದುವೆಯ ರಹಸ್ಯ ಅದೊಂದೆ ಎಂದು ನನಗನ್ನಿಸುತ್ತದೆ ಎಂದು ಫಹಾದ್ ಟ್ವೀಟ್ ಮಾಡಿದ್ದಾರೆ.

https://twitter.com/FahadZirarAhmad/status/1626444775984599042

ಸೆಲೆಬ್ರಿಟಿಗಳ ಮದುವೆ ಎಂದರೆ ದೊಡ್ಡ ಸುದ್ದಿ ಆಗಬೇಕು. ವಿವಾಹದ ದಿನಾಂಕ ಸಮೀಪಿಸುವುದಕ್ಕೂ ಮುನ್ನವೇ ಹತ್ತಾರು ಬಗೆಯ ವಿವರಗಳು ಹೊರಬೀಳಬೇಕು ಎಂದು ಬಯಸುವ ಒಂದು ವರ್ಗಕ್ಕೆ, ಮಾಧ್ಯಮಗಳಿಗೆ ಈ ರೀತಿ ಸರಳವಾಗಿ ಮತ್ತು ಕಾನೂನಿ ರೀತಿಯಲ್ಲಿ ರಿಜಿಸ್ಟರ್ ಮದುವೆ ಆಗುವ ಮೂಲಕ ಸ್ವರಾ ಮತ್ತು ಫಹಾದ್ ಭಿನ್ನವಾಗಿ ನಿಂತಿದ್ದಾರೆ. ಉದಯವಾಣಿ ಸುದ್ದಿ ಮಾಡಿದಂತೆ ಸ್ವರಾ ಮತ್ತು ಫಹಾದ್ ಮದುವೆ ರಹಸ್ಯವಲ್ಲ. ಫಹಾದ್ ಮುಸ್ಲಿಂ ಆದ ಕಾರಣಕ್ಕೆ ವಿಶೇಷ ವಿವಾಹ ಕಾಯ್ದೆ ಅನುಸಾರ ಮದುವೆಯಾಗಿದ್ದಾರೆ. ಇದೊಂದು ಮಾದರಿ ಮದುವೆ ಎನ್ನುತ್ತಿದ್ದಾರೆ ಸ್ವರಾ ಅವರ ಅಭಿಮಾನಿಗಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಜಗ್ಗಿ ವಾಸುದೇವ್ ಮತ್ತವರ ಮಗಳ ಫೋಟೊ ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights