ಫ್ಯಾಕ್ಟ್‌ಚೆಕ್ : RSS 52 ವರ್ಷ ರಾಷ್ಟ್ರ ಧ್ವಜ ಹಾರಿಸದಿರಲು ನೆಹರು ಕಾರಣವಂತೆ ? ಹೌದೇ ?

RSS ಏಕೆ 52 ವರ್ಷಗಳ ಕಾಲ ತನ್ನ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲಿಲ್ಲ ಎಂದು ಪ್ರಶ್ನಿಸುವ ಗುಲಾಮರಿಗೆ, ಧ್ವಜ ಸಂಹಿತೆ ಜಾರಿಗೆ ತಂದು ಖಾಸಗಿ ಸ್ಥಳದಲ್ಲಿ ಧ್ವಜ ಹಾರಿಸಬಾರದೆಂದು ನಿಯಮ ಮಾಡಿದ್ದು ನಿಮ್ಮದೇ ನೆಹರೂ ಸರ್ಕಾರವಲ್ಲವೇ? ಎಂಬ ಹೇಳಿಕೆಯಿರುವ ಪೋಸ್ಟ್‌ಅನ್ನು ಕನ್ನಡದ ಬಲಪಂಥೀಯ ಸಾಮಾಜಿಕ ಮಧ್ಯಮವಾದ ಪೋಸ್ಟ್‌ಕಾರ್ಡ್ ಕನ್ನಡ ಹಂಚಿಕೊಂಡಿದೆ.

ಮತ್ತೊಂದು ಬಲಪಂಥೀಯ ಸಾಮಾಜಿಕ ಮಾಧ್ಯಮವಾದ ಸಮುದ್ರಗುಪ್ತ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಇಂಹದ್ದೇ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದ್ದು ಪೋಸ್ಟ್‌ ಈ ಕೆಳಗಿನಂತಿದೆ.

RSS ಏಕೆ 52 ವರ್ಷ ರಾಷ್ಟ್ರ ಧ್ವಜ ಹಾರಿಸಲಿಲ್ಲ? ಎಂಬ ಪ್ರಶ್ನೆಯೊಂದಿಗೆ ಕಾರಣಗಳನ್ನು ನೀಡಿದೆ. RSS ತನ್ನ ಮುಖ್ಯ ಕಚೇರಿ ನಾಗ್ಪುರದಲ್ಲಿ 1947 ಭಾರತದ ಸ್ವಾತಂತ್ರ ದಿನದಂದು ಮತ್ತು 1950 ಜನವರಿಯಲ್ಲಿ ರಾಷ್ಟ್ರಧ್ವಜ ಹಾರಿಸಿತ್ತು.

ಆದರೆ ನಂತರದ ದಿನದಲ್ಲಿ ನೆಹರೂರವರು ಧ್ವಜ ಸಂಹಿತೆಯನ್ನು ಜಾರಿಗೆ ತಂದು ಖಾಸಗಿ ಸ್ಥಳಗಳಲ್ಲಿ ಧ್ವಜವನ್ನು ಹಾರಿಸಿದರೆ 6 ತಿಂಗಳ ಕಾಲ ಜೈಲು ಶಿಕ್ಷೆಯೆಂಬ ಕಾನೂನು ಜಾರಿಗೆ ತಂದಿದ್ದರು. ಈ ಕಾನೂನನ್ನು 2002ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ತಿದ್ದಪಡಿ ಮಾಡಿ ನಾಗರಿಕರು ಮತ್ತು ಖಾಸಗಿ ಸಂಸ್ಥೆಗೂ ರಾಷ್ಟ್ರಧ್ವಜವನ್ನು ಹಾರಿಸಲು ಅನುಮತಿ ನೀಡಲಾಯಿತು. 52 ವರ್ಷದ ಬಳಿಕ RSS ಕೂಡ ರಾಷ್ಟ್ರಧ್ವಜವನ್ನು ಹಾರಿಸಿತು ಎಂಬ ಕಾರಣಗಳನ್ನು ನೀಡಿ ಪೋಸ್ಟ್‌ಅನ್ನು ಹಂಚಿಕೊಂಡಿದೆ. ಹಾಗಿದ್ದರೆ RSS ಧ್ವಜವನ್ನು ಹಾರಿಸದಿರಲು ನೀಡುರುವ ಕಾರಣದಲ್ಲಿ ಸತ್ಯಾಂಶವಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

RSS ಏಕೆ 52 ವರ್ಷ ತ್ರಿವರ್ಣ ಧ್ವಜವನ್ನು ಹಾರಿಸಲಿಲ್ಲ ಎಂಬುದರ ಬಗ್ಗೆ ಸತ್ಯಾಂಶ ತಿಳಿಯುವ ಮುನ್ನ, ಬಲಪಂಥೀಯ ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಏಕೆ  RSS ಮತ್ತು ರಾಷ್ಟ್ರಧ್ವಜದ ಕುರಿತು ಚರ್ಚೆಯನ್ನು ಆರಂಭಿಸಿವೆ ಎಂದು ಅವಲೋಕಿಸುವುದಾದರೆ, ಕಾರಣ ಸ್ಪಷ್ಟಗುತ್ತದೆ. ಇತ್ತೀಚೆಗೆ ಮಂಡ್ಯದ ಕೆರೆಗೋಡಿನಲ್ಲಿ ನಡೆದ ಹುನುಮ ಧ್ವಜದ ವಿವಾದ ಈ ಇಂತಹ ಪೋಸ್ಟ್‌ಗೆ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.

ಏನಿದು ಕೆರೆಗೋಡು ಧ್ವಜ ವಿವಾದ?

ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಹನುವ ಧ್ವಜ ಹಾರಿಸಿದ ಸಂಬಂಧ ರಾಜಕೀಯ ಕೋಲಾಹಲ ಸೃಷ್ಟಿಯಾಗಿತ್ತು. ಪ್ರಶಾಂತವಾಗಿದ್ದ ಗ್ರಾಮದಲ್ಲಿ ಅಶಾಂತಿ ಸೃಷ್ಟಿಯಾಗಿತ್ತು. ರಾಷ್ಟ್ರಧ್ವಜ ಅಥವಾ ಕನ್ನಡ ಧ್ವಜ ಹಾರಿಸ್ತೀವಿ, ಯಾವುದೇ ಧರ್ಮದ ಧ್ವಜವನ್ನ  ಹಾರಿಸುವುದಿಲ್ಲ ಎಂದು ಅನುಮತಿ ಪಡೆದು ಕೇಸರಿ ಧ್ವಜವನ್ನು (ಹನುಮ ಧ್ವಜ) ಹಾರಿಸಲಾಗಿತ್ತು.

ಸರ್ಕಾರದಿಂದ ಅನುಮತಿ ಪಡೆದು ಕೆರಗೋಡು ಗ್ರಾಮದ ಗೌರಿಶಂಕರ ಸೇವಾ ಟ್ರಸ್ಟ್ ಸ್ಥಾಪಿಸಲಾಗಿದ್ದ ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಿಸಿದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಗ್ರಾಮದಲ್ಲಿ ಹಾರಿಸಲಾಗಿದ್ದ ಕೇಸರಿ ಧ್ವಜವನ್ನು ತಾಲೂಕು ಪಂಚಾಯತಿ ಅಧಿಕಾರಿಗಳು ತೆರವುಗೊಳಿಸಲು ಮುಂದಾದಾಗ, ಅಡ್ಡಿ ಪಡಿಸಿದ ಹಿಂದುತ್ವವಾದಿ ಕಾರ್ಯಕರ್ತರು ದಾಂಧಲೆ ನಡೆಸಿದ್ದರು, ಇದರ ಪರಿಣಾಮ ಪೊಲೀಸರು ಲಾಠಿಚಾರ್ಜ್‌ ಮಾಡಿ, ಗ್ರಾಮದಲ್ಲಿ 144 ಸೆಕ್ಷನ್‌ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಲಾಗಿತ್ತು.

ಇದೇ ಹಿನ್ನಲೆಯಲ್ಲಿ ಧ್ವಜ ಸ್ತಂಭದಲ್ಲಿದ ರಾಷ್ಟ್ರ ಧ್ವಜವನ್ನು ತೆರವುಗೊಳಿಸಿ ಕೇಸರಿ ಧ್ವಜವನ್ನು ಏರಿಸಿದ್ದರ ಹಿಂದೆ ಸಂಘ ಪರಿವಾರ ಹುನ್ನಾರಗಳು ಇವೆ ಎಂಬ ಮಾತುಗಳು ಕೇಳಲಾರಂಭಿಸಿದ್ದವು. ಸಂಘಪರಿವಾರಕ್ಕೆ ರಾಷ್ಟ್ರಧ್ವಜಕ್ಕಿಂತ ಕೇಸರಿ ಧ್ವಜ ಮುಖ್ಯವೇ ಎಂಬ ಟೀಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕವಾಗಿ ವ್ಯಕ್ತವಾಗಿದ್ದವು. BJP ನಾಯಕ ಸಿಟಿ ರವಿ ಭಾರತದ ಧ್ವಜವನ್ನು ಅವಮಾನಿಸುವ ರೀತಿಯಲ್ಲಿ ಆಡಿದ ತಾಲಿಬಾನ್ ಧ್ವಜ ಎಂಬ ಹವಹೇಳನಕಾರಿ ಮಾತುಗಳು ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಟೀಕೆಗೆ ಒಳಗಾಗಿದ್ದವು.

ಕೆರೆಗೊಡು ಪ್ರಕರಣದಲ್ಲಿ ಸಂಘ ಪರಿವಾರಕ್ಕೆ  ಆಗಿರುವ ಮುಜುಗರವನ್ನು ಮರೆಮಾಚಲು ಸುಳ್ಳಿನ ಸರಮಾಲೆಯನ್ನೆ ಪೋಣಿಸಿ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿರುವುದು ಈ ಪೋಸ್ಟ್‌ಗಳಿಂದ ಸ್ವಷ್ಟವಾಗುತ್ತದೆ.

2002 ತಿದ್ದುಪಡಿಗೂ ಮೊದಲು ಧ್ವಜ ಸಂಹಿತೆಯಲ್ಲಿ ಏನಿತ್ತು?

ನೆಹರೂ ಜಾರಿಗೆ ತಂದರು ಎನ್ನಲಾದ ಧ್ವಜ ಸಂಹಿತೆ ಕಾನೂನಿನಿಂದಾಗಿ RSS 52 ವರ್ಷ ರಾಷ್ಟ್ರ ಧ್ವಜವನ್ನು ಹಾರಿಸಲಿಲ್ಲ ಎಂಬ ವಾದದಲ್ಲಿ ಸತ್ಯಾಂಶ ಇದೆಯೇ ಎಂದು ಪರಿಶೀಲಿಸೋಣ.

2002ರಲ್ಲಿ ಅಟಲ್ ಬಿಹಾರಿ ವಾಜವೇಯಿ ಧ್ವಜ ಸಂಹಿತೆಗೆ ತಿದ್ದುಪಡಿ ತಂದ ನಂತರ RSS ರಾಷ್ಟ್ರ ಧ್ವಜ ಹಾರಿಸಲು ಪ್ರಾರಂಭಿಸಿತು ಎಂದು ಹೇಳಿಕೊಂಡಿದೆ. ಅದಕ್ಕೂ ಮೊದಲು ರ್ಧವಜ ಸಂಹಿತೆಯಲ್ಲಿ ಅಂತಾದ್ದೇನಿತ್ತು ಎಂದು ನೋಡುವುದಾದರೆ, ಸಂಘ ಪರಿವಾರದವರು ಆರೋಪಿಸಿಸುವಂತಾದ್ದು ಏನು ಇರಲಿಲ್ಲ.

ಜನವರಿ 26, ಆಗಸ್ಟ್ 15 ಮತ್ತು ಅಕ್ಟೋಬರ್ 2 ರಂತಹ ವಿಶೇಷ ಸಂದರ್ಭಗಳಲ್ಲಿ ಹೊರತುಪಡಿಸಿ, ನಾಗರಿಕರಿಗೆ ಅಥವಾ ಖಾಸಗಿ ಸಂಸ್ಥೆಗಳಿಗೆ ರಾಷ್ಟ್ರಧ್ವಜವನ್ನು ಹಾರಿಸಲು ಅವಕಾಶವಿರಲಿಲ್ಲ. ಜುಲೈ 20, 2022 ರಂದು ತಂದ ಮತ್ತೊಂದು ತಿದ್ದುಪಡಿಯಲ್ಲಿ, ರಾಷ್ಟ್ರೀಯ ಧ್ವಜವನ್ನು ತೆರೆದ ಅಥವಾ ಸಾರ್ವಜನಿಕರು ಮನೆಯಲ್ಲಿ ಪ್ರದರ್ಶಿಸ ಬಯಸಿದರೆ ಅದನ್ನು ಹಗಲು ಮತ್ತು ರಾತ್ರಿಯಲ್ಲಿ ಹಾರಿಸಲು ಕೇಂದ್ರವು ಅನುಮತಿಸಿದೆ. ಹಿಂದಿನ ನಿಯಮಗಳ ಪ್ರಕಾರ, ತ್ರಿವರ್ಣ ಧ್ವಜವನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಮಾತ್ರ ಹಾರಿಸಬಹುದಾಗಿತ್ತು.

ಪಂಜಾಬ್ ಸರ್ಕಾರದ ವೆಬ್‌ಸೈಟ್‌ನಲ್ಲಿ 1982 ರ ಪ್ರೋಟೋಕಾಲ್ ಕೈಪಿಡಿಯಲ್ಲಿ 2002 ರ ಮೊದಲು ಪ್ರಚಲಿತದಲ್ಲಿದ್ದ ಫ್ಲ್ಯಾಗ್ ಕೋಡ್ ಅನ್ನು ಕಂಡುಹಿಡಿಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ . 6 ಭಾಗದ ಕೈಪಿಡಿಯಲ್ಲಿ, ನಾಲ್ಕನೇ PDF ಫೈಲ್ PDF ಫೈಲ್‌ನ ಪುಟ 12 ರಲ್ಲಿ ಫ್ಲ್ಯಾಗ್ ಕೋಡ್ ಅನ್ನು ಹೊಂದಿದೆ. ಈ ಸಂದರ್ಭದಲ್ಲಿ ಅನ್ವಯವಾಗುವ ಫ್ಲ್ಯಾಗ್ ಕೋಡ್‌ನ ಸಂಬಂಧಿತ ವಿಭಾಗವು ಪುಟ 14 ರಲ್ಲಿದೆ, ಅದರ ಕ್ಲಿಪ್ಪಿಂಗ್ ಅನ್ನು ಕೆಳಗೆ ನೋಡಬಹುದು.

 

ಗಣರಾಜ್ಯ ದಿನದ ರಾಷ್ಟ್ರೀಯ ವಾರ, ಸ್ವಾತಂತ್ರ್ಯ ದಿನ ಮತ್ತು ಮಹತಾ ಗಾಂಧಿಯವರ ಜನ್ಮದಿನದಂದು ಅನಿಯಂತ್ರಿತ ಪ್ರವೇಶ ಲಭ್ಯವಿದೆ ಎಂದು ತಿಳಿಸುವ ಧ್ವಜ ಕೋಡ್-ಭಾರತ

ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ ಮತ್ತು ಮಹಾತ್ಮ ಗಾಂಧಿಯವರ ಜನ್ಮದಿನದಂದು ರಾಷ್ಟ್ರ ಧ್ವಜವನ್ನು ಹಾರಿಸಲು ಅವಕಾಶ ಕಲ್ಪಿಸಲಾಗಿದೆ. ಇದರರ್ಥ ಈ ದಿನಗಳಲ್ಲಿ ಯಾವುದೇ ನಾಗರಿಕ ಅಥವಾ ಖಾಸಗಿ ಸಂಸ್ಥೆಗೆಳು ಧ್ವಜವನ್ನು  ಹಾರಿಸಬಹುದು ಎಂದು ನಿಯ ಜಾರಿಯಲ್ಲಿತ್ತು. ಗೃಹ ಸಚಿವಾಲಯದ 15-06-1971 ರ ಎರಡನೇ ಪತ್ರವೂ ಇದೇ ವಿಷಯವನ್ನು ಹೇಳುತ್ತದೆ.

1971 ಅಕ್ಷರದ ಧ್ವಜವನ್ನು ವಿಶೇಷ ಸಂದರ್ಭಗಳಲ್ಲಿ ಯಾರಾದರೂ ಹಾರಿಸಬಹುದು

26 ಜನವರಿ 2002 ರಿಂದ ವರ್ಷದ ಎಲ್ಲಾ ದಿನಗಳಲ್ಲಿ ನಾಗರಿಕರು ರಾಷ್ಟ್ರಧ್ವಜವನ್ನು ಹಾರಿಸಲು ಮುಕ್ತರಾಗಿರುತ್ತಾರೆ ಎಂದು ಘೋಷಿಸಿತು.

ಅಂದರೆ 2002ಕ್ಕೂ ಮೊದಲು ಪ್ರತಿ ನಾಗರಿಕರು ಮತ್ತು ಸಂಘ ಸಂಸ್ಥೆಗಳು ಗಣರಾಜ್ಯೋತ್ಸವ, ಸ್ವಾತಂತ್ರ ದಿನಾಚರಣೆ ಮತ್ತು ಗಾಂಧಿ ಜಯಂತಿಯಂದು ತ್ರಿವರ್ಣ ಧ್ವಜವನ್ನು ಸೂರ್ಯೋದಯ ನಂತರ ಹಾರಿಸಿ ಮತ್ತು ಸೂರ್ಯಾಸ್ತದ ಒಳಗೆ ಇಳಿಸಿ ಜೋಪಾನವಾಗಿಡಬೇಕು ಎಂಬ ನಿಯಮ ಜಾರಿಲ್ಲಿ ಇತ್ತು. ಈ ಸಂದರ್ಭದಲ್ಲೂ RSS  ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ.

ಜನವರಿ 26, ಆಗಸ್ಟ್ 15 ಮತ್ತು ಅಕ್ಟೋಬರ್ 2 ರಂದು ರಾಷ್ಟ್ರಧ್ವಜವನ್ನು ಹಾರಿಸಲು ಅನುಮತಿ ನೀಡಿದ್ದರೂ, RSS 52 ವರ್ಷಗಳ ಕಾಲ ಹಾಗೆ ಮಾಡದಿರಲು ನಿರ್ಧರಿಸಿತು. ಅದಕ್ಕೆ ನೀಡಿದ ಕಾರಣ ಖಾಸಗಿ ಸ್ಥಳಗಳಲ್ಲಿ ಧ್ವಜವನ್ನು ಹಾರಿಸಿದರೆ 6 ತಿಂಗಳ ಕಾಲ ಜೈಲು ಶಿಕ್ಷೆಯೆಂಬ ಕಾನೂನು ಜಾರಿಗೆ ತಂದಿದ್ದರು ಎಂಬುದಾಗಿತ್ತು. ಈ ಕಾನೂನು ಈಗಲೂ ಜಾರಿಯಲ್ಲಿದ್ದು, ಧ್ವಜ ಸಂಹಿತೆ ಉಲ್ಲಂಘನೆಗೆ 3 ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ. ಹಾಗಾಗಿ RSS ಅಥವಾ ಪೋಸ್ಟ್‌ಕಾರ್ಡ್ ಮಾಡಿದ ಪ್ರತಿಪಾದನೆ ಸುಳ್ಳು.

ಹಾಹಿದ್ದರೆ ಪ್ರಸ್ತುತ ರಾಷ್ಟ್ರಧ್ವಜ ಸಂಹಿತೆಯಲ್ಲೇನಿದೆ?:

ಪ್ರತಿಯೊಬ್ಬ ವ್ಯಕ್ತಿಯೂ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದನ್ನು ಕಡ್ಡಾಯಗೊಳಿಸಲು ಪ್ರತ್ಯೇಕ ರಾಷ್ಟ್ರಧ್ವಜ ಸಂಹಿತೆ ಜಾರಿಗೊಳಿಸಲಾಗಿದೆ. ಇದರ ಅನುಸಾರ ಪ್ರತಿ ಧ್ವಜವು 3:2 ಅಳತೆಯ ಅನುಪಾತವನ್ನು ಹೊಂದಿರಬೇಕು. ಮೇಲ್ಭಾಗದಿಂದ ಕೆಳಕ್ಕೆ ಸಮಾನವಾಗಿ ಕೇಸರಿ-ಬಿಳಿ-ಹಸಿರು ಬಣ್ಣಗಳ ನಡುವೆ 24 ಗೆರೆಗಳನ್ನು ಹೊಂದಿದ ಅಶೋಕ ಚಕ್ರವಿರಬೇಕು. ಧ್ವಜ ಹಾರಿಸುವಾಗ ವೇಗವಾಗಿ ಹಾಗೂ ಇಳಿಸುವಾಗ ನಿಧಾನದ ಕ್ರಮಗಳನ್ನು ಅನುಸರಿಸಬೇಕು. ಹರಿದ, ಮಾಸಿದ, ಸುಕ್ಕಾದ, ಬಣ್ಣಗಳು ಮತ್ತು ನೀಲಿಚಕ್ರವು ಸರಿಯಾಗಿ ಮುದ್ರಿತವಾಗದ ಧ್ವಜಗಳನ್ನು ಹಾರಿಸಬಾರದು. ಈ ಧ್ವಜ ಸಂಹಿತೆ ಉಲ್ಲಂಘನೆಗೆ 3 ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ. ದೇಶದ ವಿವಿಧ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಹೊಂದಿದ ಎಲ್ಲ ಜನರನ್ನು ಒಂದೇ ಧ್ವಜದಡಿ ನಿಲ್ಲಿಸಿ ಸಮಾನತೆ ಸಾರುವ ಪ್ರತೀಕವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, RSS ಹುಸಿ ದೇಶ ಪ್ರೇಮದ ಹೆಸರಿನಲ್ಲಿ ಮುಗ್ದ ಜನರನ್ನು ದಾರಿತಪ್ಪಿಸುತ್ತಾ, ಪಂಡಿತ್ ಜವಾಹರಲಾಲ್ ನೆಹರು ಅವರನ್ನು ಟಾರ್ಗೆಟ್‌ ಮಾಡಿ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಹಾಗಾಗಿ RSS  ಬಗ್ಗೆ ಸಾರ್ವಜನಿಕರು ಸದಾ ಎಚ್ಚರಿಕೆಯಿಂದ ಇರಬೇಕಾಗಿದೆ. ಹಾಗಾಗಿ 52 ವರ್ಷಗಳ ನಂತರ ವಿಧಿ ಇಲ್ಲದೆ ಅವರು ಧ್ವಜವನ್ನು ಹಾರಿಸಲು ಪ್ರಾರಂಭಿಸಿದ್ದಾರೆಯೇ ಹೊರತು ಬೇರೇನು ಅಲ್ಲ. ಅವರಿಗೆ ರಾಷ್ಟ್ರ ಧ್ವಜಕ್ಕಿಂತ ಭಗಾಧ್ವಜದ ಮೇಲೆ ನಂಬಿಕೆ ಹೆಚ್ಚು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights