FACT CHECK | ಜನ್‌-ಧನ್ ಖಾತೆಯ ಬಳಕೆದಾರರು ಬ್ಯಾಂಕ್‌ ಹೊರಗೆ ಸಾಲುಗಟ್ಟಿ ನಿಂತ ಹಳೆಯ ವಿಡಿಯೋವನ್ನು ತಪ್ಪಾಗಿ ಹಂಚಿಕೆ

“ರಾಹುಲ್ ಗಾಂಧಿಯವರ ‘ಟಕಾಟಕ್ ಯೋಜನೆ’ ಅಡಿಯಲ್ಲಿ ತಿಂಗಳಿಗೆ ₹8500 ಪಡೆಯಲು ಅಕ್ಬರ್, ಬಾಬರ್ ಮತ್ತು ಔರಂಗಜೇಬ್ ಅವರ ಕುಟುಂಬದ ಸದಸ್ಯರು ಸರದಿಯಲ್ಲಿ ನಿಂತಿದ್ದಾರೆ” ಎಂದು ಬರಹದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಈಗ ಕಾಂಗ್ರೆಸ್‌ನ ಮಿತ್ರ ಪಕ್ಷ ಸಮಾಜವಾದಿ ಪಕ್ಷವು ಉತ್ತರ ಪ್ರದೇಶದಲ್ಲಿ ಬಹುಮತವನ್ನು ಪಡೆದುಕೊಂಡಿದೆ, ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಬ್ಯಾಂಕ್‌ಗಳ ಹೊರಗೆ ಸಾಲುಗಟ್ಟಿ ನಿಂತಿರುವ ಮಹಿಳೆಯರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಮತ್ತು ಕಾಂಗ್ರೆಸ್‌ ನೀಡಿದ್ದ ಗ್ಯಾರಂಟಿ ಭರವಸೆಗಳಿಗೆ ಟೀಕಿಸುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಈ ವೈರಲ್ ವೀಡಿಯೋ 2020 ರಲ್ಲಿ ಕೇಂದ್ರ ಸರ್ಕಾರದ ಜನ್ ಧನ್ ಯೋಜನೆಯ ಮಹಿಳಾ ಫಲಾನುಭವಿಗಳು ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಬ್ಯಾಂಕ್‌ಗಳ ಹೊರಗೆ ಸಾಲುಗಟ್ಟಿ ನಿಂತಿದ್ದ ವಿಡಿಯೋ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ.

ಸುದರ್ಶನ್ ನ್ಯೂಸ್‌ನ ಸಂಪಾದಕ ಸುರೇಶ್ ಚವ್ಹಾಂಕೆ ಅವರು ಹಂಚಿಕೊಂಡ 2021 ರ ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಬ್ಯಾಂಕಿನ ಹೊರಗೆ ಯುಪಿ ಪರವಾನಗಿ ಪ್ಲೇಟ್ ಮತ್ತು ‘ಗುರು ಗೋಬಿಂದ್ ಸಿಂಗ್ ಪಬ್ಲಿಕ್ ಸ್ಕೂಲ್’ ಎಂದು ಬರೆಯುವ ಬ್ಯಾನರ್‌ನೊಂದಿಗೆ ಬೈಕ್ ನಿಲ್ಲಿಸಿರುವುದು ಕಂಡುಬಂದಿದೆ.

 

 

 

 

 

 

 

 

 

 

 

ಸುದರ್ಶನ್ ನ್ಯೂಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದ ಸ್ಕ್ರೀನ್‌ಶಾಟ್‌ ತೆಗೆದುಕೊಂಡು ಸರ್ಚ್ ಮಾಡುವುದರ ಜೊತೆಗೆ ‘ಮುಜಫರ್‌ನಗರ ಬ್ಯಾಂಕ್‌ನ ಹೊರಗೆ ಮುಸ್ಲಿಂ ಮಹಿಳೆಯರ ಗುಂಪು’ ಎಂಬ ಕೀವರ್ಡ್‌ಗಳನ್ನು ಬಳಸಿ ಸರ್ಚ್ ಮಾಡಿದಾಗ, 20 ಏಪ್ರಿಲ್  2020 ರಂದು ನ್ಯೂಸ್ 18, ಪ್ರಕಟಿಸಿದ ವರದಿಯೊಂದು ಲಭ್ಯವಾಗಿದ್ದು, ‘ಉಳಿತಾಯ ಖಾತೆಯಿಂದ ಹಣ ಕಡಿತ ಮಾಡಲಾಗುತ್ತಿದೆ ಎಂಬ ವದಂತಿ ಹಿನ್ನಲೆ ಮುಜಾಫರ್‌ನಗರ ಬ್ಯಾಂಕ್‌ನ ಹೊರಗೆ ಕಿಕ್ಕಿರಿದು ಸೇರಿದ ಜನ ಎಂಬ ವರದಿ ಲಭ್ಯವಾಗಿದೆ.

ಈ ವರದಿಯು ವೈರಲ್ ವೀಡಿಯೊಗೆ ನಿಖರವಾಗಿ ಹೊಂದಿಕೆಯಾಗುವ ಕೆಲವು ಫಲಾನುಭವಿಗಳು ಬ್ಯಾಂಕಿನ ಹೊರಗೆ ಸಾಲುಗಟ್ಟಿ ನಿಂತಿರುವ ವೀಡಿಯೊವನ್ನು ಹೊಂದಿದೆ.

ವರದಿಯ ಪ್ರಕಾರ, ಜನ್ ಧನ್ ಯೋಜನೆಯ ಫಲಾನುಭವಿಗಳು ತಮ್ಮ ಖಾತೆಯಲ್ಲಿ ಠೇವಣಿ ಇಟ್ಟಿರುವ 500 ರೂ.ಗಳನ್ನು ಹಿಂತೆಗೆದುಕೊಳ್ಳದಿದ್ದರೆ, ಬ್ಯಾಂಕ್‌ನವರು ತಮ್ಮಷ್ಟಕ್ಕೆ ತಾವೆ ಕಡಿತ ಮಾಡಿಕೊಳ್ಳುತ್ತಾರೆ ಎಂಬ ವದಂತಿ ಹಬ್ಬಿದ್ದರಿಂದ, ತಮ್ಮ ಹಣವನ್ನು ಹಿಂಪಡೆಯಲು ಬ್ಯಾಂಕ್ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ, ಬ್ಯಾಂಕ್ ಅಧಿಕಾರಿಗಳು ಖಾತೆದಾರರ ಹಣವನ್ನು ಹಿಂಪಡೆಯುವುದಿಲ್ಲ ಮತ್ತು ಅವರ ಖಾತೆಗಳಲ್ಲಿ ಉಳಿಯುತ್ತದೆ ಎಂದು ಭರವಸೆ ನೀಡಿದರು ಎಂದು ಉಲ್ಲೇಖಿಸಲಾಗಿದೆ.

2020 ರಲ್ಲಿ, ಕೋವಿಡ್ -19 ಅವಧಿಯಲ್ಲಿ ಅನೇಕರು ಎದುರಿಸಿದ ಸವಾಲುಗಳ ನಂತರ ಜನ್ ಧನ್ ಖಾತೆದಾರರು ತಮ್ಮ ಖಾತೆಗಳಲ್ಲಿ ಮೂರು ತಿಂಗಳವರೆಗೆ ರೂ 500 ಸ್ವೀಕರಿಸುತ್ತಾರೆ ಎಂದು ಕೇಂದ್ರ ಸರ್ಕಾರ ಘೋಷಿಸಿತು.

ಇದೇ ರೀತಿಯ ವೀಡಿಯೊ ವರದಿಯನ್ನು 2020 ರಲ್ಲಿ ಸ್ಥಳೀಯ ಸುದ್ದಿ ಔಟ್ಲೆಟ್ RB ನ್ಯೂಸ್ YouTube ನಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿ ನೋಡಿ.

ಆದರೂ ಜೂನ್ 5, 2024 ರಂದು ಎಬಿಪಿ ನ್ಯೂಸ್ ಮತ್ತು ಇಂಡಿಯಾ ಟುಡೇ ಪ್ರಕಟಿಸಿದ ಹಲವಾರು ವರದಿಗಳು, ಮಹಾಲಕ್ಷ್ಮಿ ಯೋಜನೆಯಡಿ ಭರವಸೆ ನೀಡಿದ 8,500 ರೂಪಾಯಿಗಳನ್ನು ಪಡೆಯಲು ಲಕ್ನೋದಲ್ಲಿ ಮಹಿಳಾ ಮತದಾರರು ಹೇಗೆ ಕಾಂಗ್ರೆಸ್ ಕಚೇರಿಯ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂದು ವರದಿ ಮಾಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2020ರಲ್ಲಿ ಜನ್‌ದನ್‌ ಖಾತೆದಾರರ 500ರೂ ಠೇವಣೆ ಹಣವನ್ನು ಬ್ಯಾಂಕ್ ತನ್ನ ಖಾತೆಗೆ ಜಮೆ ಮಾಡಿಕೊಳ್ಳುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿದ್ದ ಪರಿಣಾಮ ಬ್ಯಾಂಕ್‌ಗೆ ಮುಗಿಬಿದ್ದ ಜನರ ವಿಡಿಯೋವನ್ನು ಕಾಂಗ್ರೆಸ್ ನೀಡಿದ ಗ್ಯಾರೆಂಟಿ ಭರವಸೆಗಳನ್ನು ನಂಬಿ ಜನರು ಬ್ಯಾಂಕ್‌ಬಳಿ ಕ್ಯೂ ನಿಂತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕಾಂಗ್ರೆಸ್‌ ಗ್ಯಾರೆಂಟಿ ಕಾರ್ಡ್ ಪಡೆಯಲು ಸರದಿ ಸಾಲಿನಲ್ಲಿ ನಿಂತ ಮಹಿಳೆ ಸಾವನಪ್ಪಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights