FACT CHECK | EV ವಾಹನಗಳು ರಸ್ತೆಯಲ್ಲಿ ಚಲಿಸುವಾಗಲೇ ಚಾರ್ಜ್ ಆಗುವಂತ ರಸ್ತೆಗಳನ್ನು ಸ್ವೀಡನ್‌ನಲ್ಲಿ ನಿರ್ಮಿಸಲಾಗಿದೆಯೇ?

ಭಾರತದಲ್ಲಿ ಇವಿ ವಾಹನಗಳಿಗೆ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳನ್ನು ಅಳವಡಿಸಲು ಸಾಧ್ಯವಾಗುತ್ತಿಲ್ಲ. ಎಲ್ಲೆಂದರಲ್ಲಿ ವಾಹನಗಳು ಕೈಕೊಡುತ್ತವೆ. ಇದರಿಂದ ಎಲೆಕ್ಟ್ರಿಕಲ್ ವಾಹನ ಬಳಕೆದಾರರು ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ. ಆದರೆ ಸ್ವೀಡನ್‌ನಂತಹ ದೇಶದಲ್ಲಿ ಇವಿ ವಾಹನಗಳಿಗೆ  ರಸ್ತೆಯ ಮೇಲೆ ಎಲೆಕ್ಟ್ರಿಕ್ ಚಾರ್ಜಿಂಗ್‌ ವಿಧಾನವನ್ನು ಸಿದ್ದಪಡಿಸಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್‌ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಗಾಡಿ ಓಡಿಸುವಾಗಲೇ ನಿಮ್ಮ ವಾಹನ ಚಾರ್ಜ್ ಆಗುತ್ತೆ, ಸ್ವೀಡನ್‌ನಲ್ಲಿ ರಸ್ತೆ ಮೇಲೆ ಎಲೆಕ್ಟ್ರಿಕ್ ಚಾರ್ಜಿಂಗ್‌ ಲೇನ್‌ ಅನ್ನು ಅಳವಡಿಸಲಾಗಿದೆ. ವಾಹನಗಳು ಇದರ ಮೇಲೆ ಚಲಿಸುವಾಗಲೇ ವಿದ್ಯುತ್‌ ಪಾಸ್‌ ಆಗಿ ಚಾರ್ಜ್ ಆಗುತ್ತೆ”, ಎಂಬ ಹೇಳೀಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಸ್ವೀಡನ್‌ನಲ್ಲಿ ವಾಹನ ಓಡಿಸುವಾಗಲೇ ಚಾರ್ಜ್ ಆಗುವ ತಂತ್ರಜ್ಞಾನ ಈಗಾಗಲೇ ಬಂದಿದೆ ಎಂಬಂತೆ ನೀಡಿದ ಈ ಹೇಳಿಕೆ ನಿಜವೇ, ಇಂಥದ್ದೊಂದು ಜಾರಿಯಲ್ಲಿದೆಯೇ ಎಂಬುದರ ಬಗ್ಗೆ ಪೋಸ್ಟ್‌ನಲ್ಲಿ ಮಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸ್ವೀಡನ್‌ನಲ್ಲಿ ರಸ್ತೆ ಮೇಲೆ ಎಲೆಕ್ಟ್ರಿಕ್ ಚಾರ್ಜಿಂಗ್‌ ಅಳವಡಿಸಲಾಗಿದೆ ಎಂದು ಫೇಸ್‌ಬುಕ್‌ ನಲ್ಲಿ ಹೇಳಿಕೆಯೊಂದು ಹರಿದಾಡಿದೆ. ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, 16 ಮೇ 2023 ರ ಟಾಪ್‌ ಗಿಯರ್ ಲಭ್ಯವಾಗಿದೆ.

ವರದಿ ಪ್ರಕಾರ, ಸ್ವೀಡನ್‌, ವಿಶ್ವದ ಮೊದಲ ಇವಿ ಚಾರ್ಜಿಂಗ್‌ ರಸ್ತೆ ಮಾಡಲಿದೆ ಎಂದಿದೆ. ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡುವ ಇ ಮೋಟಾರು ವೇ ಇದಾಗಿದ್ದು, ಚಾರ್ಜ್ ಗಾಗಿ ದೀರ್ಘ ವಿರಾಮದ ಅಗತ್ಯವನ್ನು ತಗ್ಗಿಸುತ್ತದೆ. ವಿವಿಧ ಪ್ರಾಯೋಗಿಕ ಯೋಜನೆಗಳ ನಂತರ, ರಸ್ತೆಯ ತಾತ್ಕಾಲಿಕ ಆವೃತ್ತಿಗಳು ಮತ್ತು ಇತರ ಪರಿಹಾರಗಳನ್ನು ಪ್ರಯೋಗಿಸಿ, ರಸ್ತೆಯನ್ನು 2025 ರ ವೇಳೆಗೆ ನಿರ್ಮಿಸಲು ನಿರ್ಧರಿಸಲಾಗಿದೆ. ಆದಾಗ್ಯೂ, ಇದರ ಇಂಜಿನಿಯರ್‌ಗಳು ಯಾವ ತಂತ್ರಜ್ಞಾನ ಹೆಚ್ಚು ಸೂಕ್ತವಾಗಿರುತ್ತದೆ ಎಂಬುದರ ಕುರಿತ ಇನ್ನೂ ಕೆಲಸ ಮಾಡುತ್ತಿದ್ದಾರೆ ಎಂದಿದೆ.

Sweden will build the world’s first EV charging road | Top Gear

8 ಮೇ , 2023ರ ಆಟೋ ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಸ್ವೀಡನ್‌ 2025ರವೇಳೆಗೆ ವಿಶ್ವದ ಮೊದಲ ಇಲೆಕ್ಟ್ರಿಫೈಡ್ ರಸ್ತೆಯನ್ನು ತೆರೆಯಲಿದೆ. ಇದು ವಾಹನಗಳು ಸಂಚರಿಸುವಾಗಲೇ ಚಾರ್ಜ್ ಆಗಲು ಸಹಾಯ ಮಾಡಲಿದೆ. ಈ ಯುರೋಪಿಯನ್‌ ದೇಶವು 3 ಸಾವಿರ ಕಿ.ಮೀ.ಗಳಿಗೂ ಹೆಚ್ಚಿನ ರಸ್ತೆಯನ್ನು ಎಲೆಕ್ಟ್ರಿಫೈ ಮಾಡಲು ಉದ್ದೇಶಿಸಿದೆ ಎಂದಿದೆ.

9 ಮೇ , 2023ರ ಯೂರೋ ನ್ಯೂಸ್‌ ಪ್ರಕಾರ ಸ್ವೀಡನ್‌ ವಾಹನ ಚಾಲನೆ ವೇಳೆ ಚಾರ್ಜ್ ಆಗುವ ವಿಶ್ವದ ಮೊದಲ ಎಲೆಕ್ಟ್ರಿಫೈಡ್‌ ರಸ್ತೆಯನ್ನು ನಿರ್ಮಿಸುತ್ತಿದೆ ಎಂದಿದೆ. ಈ ವರದಿಯಲ್ಲೂ ಮೊದಲ ಹಂತ 2025ರ ವೇಳೆಗೆ ತೆರೆದುಕೊಳ್ಳಲಿದ್ದು ಸದ್ಯ ಸ್ವಾಧೀನ ಪ್ರಕ್ರಿಯೆಯಲ್ಲಿ ಜಾರಿಯಲ್ಲಿದೆ ಎಂದಿದೆ.

ಈ ವರದಿಗಳ ಪ್ರಕಾರ, ಸ್ವೀಡನ್‌ ನಲ್ಲಿ ವಿಶ್ವದ ಮೊದಲ ಚಾರ್ಜಿಂಗ್‌ ರಸ್ತೆಗೆ ಸಿದ್ಧತೆಗಳು, ನಿರ್ಮಾಣ ಕಾರ್ಯ ಆರಂಭವಾಗಿವೆ. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. 2025ರ ಹೊತ್ತಿಗೆ ಅದು ಲೋಕಾರ್ಪಣೆಯಾಗಲಿದೆ ಎಂದು ತಿಳಿದುಬಂದಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಾಕ್‌ನಲ್ಲಿ ಹೆಣ್ಣು ಶವಗಳ ಮೇಲೆ ಅತ್ಯಾಚಾರ ನಡೆಸುವುದನ್ನು ತಡೆಯಲು, ಕುಟುಂಬಸ್ಥರು ಸಮಾಧಿಗಳಿಗೆ ಬೀಗ ಹಾಕಿದ್ದಾರೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights