FACT CHECK | ರತನ್ ಟಾಟಾ ತೀರಿಕೊಂಡ ಬಳಿಕ ಅವರ ಪ್ರೀತಿಯ ಸಾಕು ನಾಯಿ ತೀರಿಕೊಂಡಿದ್ದು ನಿಜವೇ?

ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ರತನ್​ ಟಾಟಾ ಅವರು ತಮ್ಮ 86ನೇ ವಯಸ್ಸಿನಲ್ಲಿ ವಯೋಸಹಜ ಖಾಲಯಿಲೆಗಳಿಂದ ಅಕ್ಟೋಬರ್​ 09ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಉದ್ಯಮದ ಹೊರತಾಗಿ ಅನೇಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ರತನ್​ ಟಾಟಾ ತಮ್ಮ ಪ್ರಾಣಿಪ್ರೀತಿಗೆ ಹೆಸರುವಾಸಿಯಾಗಿದ್ದರು ಎಂದರೆ ತಪ್ಪಾಗಲಾರದು.

ರತನ್​ ಟಾಟಾ ಅವರ ನಿಧನದ ದಿನ ಅವರ ಸಾಕು ನಾಯಿ ಗೋವಾ ಮೃತದೇಹದ ಮುಂದೆ ಕಣ್ಣೀರು ಹಾಕಿತ್ತು. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿತ್ತು. ಇದೀಗ ರತನ್​ ಟಾಟಾ ಅವರ ಪ್ರೀತಿಯ ಶ್ವಾನ ಗೋವಾ ಮೃತಪಟ್ಟಿದೆ ಎಂಬ ವಿಚಾರ ಸೋಶಿಯಲ್ ಮೀಡಿಯಾಗಳಲ್ಲಿ​ ವೈರಲ್​ ಆಗಿದ್ದು, ಅನೇಕರು ಕಂಬನಿ ಮಿಡಿದಿದ್ಧಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಮೆಸ್ಸೇಜ್​ ನೋಡುವುದಾದರೆ ರತನ್​ ಟಾಟಾ ಅವರ ಪ್ರೀತಿಯ ಶ್ವಾನ ಗೋವಾ  ಮಾಲೀಕರ ನಿಧನದ ಆಘಾತದಿಂದ ಇಹಲೋಕ ತ್ಯಜಿಸಿದೆ ಎಂದು ಶೇರ್​ ಮಾಡಲಾಗಿದೆ. ಈ ಸುದ್ದಿ ಹೊರಬರುತ್ತಿದ್ದಂತೆ ಅನೇಕರು ಸಂತಾಪ ಸೂಚಿಸಿದ್ದು, ತನ್ನ ಮಾಲೀಕ ರತನ್ ಟಾಟಾ ಅವರನ್ನು ಕಳೆದುಕೊಂಡ ಗೋವಾ (ನಾಯಿ ಹೆಸರು) ಮೂರು ದಿನಗಳಿಂದ ಏನನ್ನೂ ತಿನ್ನದೆ  ದುಃಖದಲ್ಲಿತ್ತು ಎಂದು ಪೋಸ್ಟ್ ನಲ್ಲಿ ಪ್ರತಿಪಾದಿಸಲಾಗಿದೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಇತ್ತೀಚೆಗೆ ರತನ್ ಟಾಟಾ ನಿಧನರಾದ ನಂತರ ಮುಖ್ಯವಾಹಿನಿ ಮಾಧ್ಯಮಗಳು ಸೇರಿದಂತೆ ರತನ್ ಟಾಟಾರವರ ಸಣ್ಣ ಸಣ್ಣ ವಿಚಾರಗಳನ್ನು ಇಟ್ಟುಕೊಂಡು ಗಂಟೆ ಗಟ್ಟಲೆ ಕಾರ್ಯಕ್ರಮಗಳನ್ನು ಮಾಡಿದ್ದು, ಅದರ ಆಧಾರದಲ್ಲಿ ಟಾಟಾ ಅವರ ಸಾಕುನಾಯಿ ಗೋವಾ ನಿಧನ ಹೊಂದಿದೆ ಎಂಬ ಸುದ್ದಿ ಯಾವುದಾದರೂ ಮಾಧ್ಯಮಗಳಲ್ಲಿ ವರದಿಯಾಗಿದೆಯೇ ಎಂದು ಪರಿಶೀಲಿಸಿದಾಗ, ಇದು ಸಂಪೂರ್ಣ ನಕಲಿ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದು, ಗೋವಾ ಬದುಕಿರುವುದಾಗಿ ತಿಳಿಸಿದ್ದಾರೆ.

 

View this post on Instagram

 

A post shared by Sudhir Kudalkar (@sudhirkudalkar)

ತಮ್ಮ ಪ್ರಾಣಿಪ್ರೀತಿಯಿಂದಲೇ ಸಾಕಷ್ಟು ಖ್ಯಾತಿ ಪಡೆದಿರುವ ಮುಂಬೈ ಮೂಲದ ಹಿರಿಯ ಪೊಲೀಸ್ ಅಧಿಕಾರಿ ಸುಧೀರ್ ಕುಡಾಲ್ಕರ್ , ಈ ಬಗ್ಗೆ ಮಾತನಾಡಿದ್ದು, ಗೋವಾ ಸತ್ತಿದೆ ಎಂಬ ವಿಚಾರ ಸತ್ಯಕ್ಕೆ ದೂರವಾಗಿದ್ದು, ರತನ್​ ಟಾಟಾ ಅವರ ಸಾಕು ನಾಯಿ ಗೋವಾ ಮಾಲೀಕರ ನಿಧನದ ಮೂರು ದಿನಗಳ ನಂತರ ಸತ್ತಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಆದರೆ, ನಾನು ಸ್ವತಃ ಪರಿಶೀಲಿಸಿದ್ದು, ಗೋವಾ ಬದುಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ಧಾರೆ.

ಟಾಟಾ ಗ್ರೂಪ್‌ನ ಅಧ್ಯಕ್ಷರ ಜೊತೆಗೆ, ರತನ್ ಟಾಟಾ ಇತ್ತೀಚೆಗೆ ಮುಂಬೈನ ಮಹಾಲಕ್ಷ್ಮಿಯಲ್ಲಿ ಪ್ರಾಣಿಗಳ ಆಸ್ಪತ್ರೆಯನ್ನು ನಿರ್ಮಿಸಿದ ಪ್ರಾಣಿ ಪ್ರೇಮಿಯೂ ಆಗಿದ್ದರು. ಒಂದು ದಶಕದ ಹಿಂದೆ ಗೋವಾ ರಾಜ್ಯ ಪ್ರವಾಸದಲ್ಲಿದ್ದಾಗ ಅಲ್ಲಿನ ಬೀದಿಗಳಿಂದ ‘ಗೋವಾ’ವನ್ನು ದತ್ತು ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ. ಗೋವಾ ಹೆಸರಿನ ರತನ್ ಟಾಟಾ ರವರ ಸಾಕು ನಾಯಿ ತೀರಿಕೊಂಡಿದೆ ಎಂಬುದು ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಹ್ಯಾಕಾಶದಲ್ಲಿ ಸಿಲುಕಿದ್ದ ಸುನಿತಾ ವಿಲಿಯಮ್ಸ್ ಭೂಮಿಗೆ ಬಂದ್ರಾ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights