FACT CHECK | ಷರಿಯಾ ಕಾನೂನಿನಂತೆ ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ಥಳಿಸಲಾಗಿದೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಷರಿಯಾ ಕಾನೂನಿನ ಪ್ರಕಾರ, ಮಹಿಳೆಯ ಮೇಲೆ ಅತ್ಯಾಚಾರ ನಡೆದರೆ ಅದನ್ನು ವಿವಾಹೇತರ ಸಂಬಂಧ ಎಂದು ಪರಿಗಣಿಸಲಾಗುತ್ತದೆ ಮತ್ತು ಆಕೆಯನ್ನು ಶಿಕ್ಷೆಗೆ ಗುರಿಪಡಿಸಲು ಅರ್ಹಳಾಗಿರುತ್ತಾಳೆ. ಹೆಚ್ಚಿನ ಶರಿಯಾ ದೇಶಗಳಲ್ಲಿ, ಮಹಿಳೆಯರು r@ped ಎಂದು ವರದಿ ಮಾಡಿದರೆ ಕಲ್ಲಿನಿಂದ ಹೊಡೆದು ಸಾಯಿಸುತ್ತಾರೆ.  ಆದರೆ ಇಲ್ಲಿ ಇಷ್ಟಕ್ಕೆ ಬಿಟ್ಟಿರುವುದು ಆಕೆಯ ಅದೃಷ್ಟ ಎಂದು ಬರೆದುಕೊಂಡಿದ್ದಾರೆ.

ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮಾರ್ಚ್ 22, 2018 ರಂದು ಪ್ರಕಟವಾದ ‘ಹಿಂದೂಸ್ತಾನ್ ಟೈಮ್ಸ್ ವರದಿಯ ಲಭ್ಯವಾಗಿದೆ. ಈ ವರದಿಯ ಪ್ರಕಾರ, ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಗ್ರಾಮ ಪಂಚಾಯತ್‌ನ ಆದೇಶದ ಮೇರೆಗೆ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ, ಆಕೆಯ ಪತಿ ಸಾರ್ವಜನಿಕವಾಗಿ ಥಳಿಸಿದ್ದಾರೆ.” ಎಂದು ತಿಳಿಸಿದೆ.

ಇದಲ್ಲದೆ, 23 ಮಾರ್ಚ್, 2018 ರಂದು ಪ್ರಕಟವಾದ ‘ಇಂಡಿಯಾ ಟುಡೆ’ ವರದಿ ಲಭ್ಯವಾಗಿದ್ದು, “ಮಾರ್ಚ್ 10 ರಂದು ಲೌಂಗಾ ಗ್ರಾಮದಲ್ಲಿ, 20 ವಯಸ್ಸಿನ ಮಹಿಳೆಯನ್ನು ಮರಕ್ಕೆ ಕಟ್ಟಿ ಅವಳ ಪತಿ ಥಳಿಸಿದ್ದಾನೆ ಎಂದು ವರದಿಯಾಗಿದೆ. ಒಂದು ಗುಂಪಿನ. ಮಾಜಿ ಪ್ರಧಾನ್ ಶೇರ್ಸಿಂಗ್, ಅವರ ಪುತ್ರ ಶ್ರವಣ್ ಮತ್ತು ಮಹಿಳೆಯ ಪತಿ ಶೌದನ್ ಸಿಂಗ್ ಅವರನ್ನು ಬಂಧಿಸಲಾಗಿದೆ ಮತ್ತು ಇತರ ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಬುಲಂದ್‌ಶಹರ್ ಎಸ್‌ಪಿ ಪ್ರವೀಣ್ ರಂಜನ್ ಸಿಂಗ್ ತಿಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಮಾರ್ಚ್ 5, 2018ರಂದು ಮಹಿಳೆ ತನ್ನ ನೆರೆ ಮನೆಯ ಧರ್ಮೇಂದ್ರ ಲೋಧಿಯೊಂದಿಗೆ ಹೋಗಿದ್ದಾಗಿ ತಿಳಿಸಿದ್ದಾರೆ. ಈ ಘಟನೆ ನಂತರ ಮಹಿಳೆಯನ್ನು ಪತ್ತೆ ಮಾಡಿದ ಪತಿ ಶೌದನ್ ಸಿಂಗ್ ಪಂಚಾಯ್ತಿಗೆ ಗಮನಕ್ಕೆ ತಂದಾಗ, ಗ್ರಾಮದ ಮಾಜಿ ಪ್ರಧಾನ್ ಶೇರ್ ಸಿಂಗ್ ಮತ್ತು ಅವರ ಮಗ ಶ್ರವಣ್ ಈ ಶಿಕ್ಷೆಯನ್ನು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಅಥವಾ ಸಂತ್ರಸ್ಥೆ ಇಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಆಜ್‌ತಕ್‌ನ ಬುಲಂದ್‌ಶಹರ್ ವರದಿಗಾರ ಮುಕುಲ್ ಶರ್ಮಾ ಅವರು ಮಾರ್ಚ್ 10, 2018 ರಂದು ಸಯಾನಾ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬುಲಂದ್‌ಶಹರ್‌ನ ಲೌಂಗಾ ಗ್ರಾಮದಲ್ಲಿ ಸಾರ್ವಜನಿಕವಾಗಿ ಥಳಿಸಲಾಯಿತು ಎಂದು ದೃಢಪಡಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಸಂತ್ರಸ್ಥೆ ಮತ್ತು ಆರೋಪಿ ಇಬ್ಬರೂ ಹಿಂದೂಗಳು ಎಂದು ಅವರು ಹೇಳಿದ್ದಾರೆ, ಏಳು ಮಂದಿ ಮತ್ತು 12 ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಜನಸತ್ತಾದ ವರದಿ ಉಲ್ಲೇಖಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಗ್ರಾಮ ಪಂಚಾಯತ್‌ನ ಆದೇಶದ ಮೇರೆಗೆ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಥಳಿಸಲಾದ 2018ರ ಹಳೆಯ ಘಟನೆಯನ್ನು, ಷರಿಯಾ ಕಾನೂನಿನ ಅನ್ವಯ ಅತ್ಯಾಚಾರಕ್ಕೆ ಒಳಪಟ್ಟ ಮಹಿಳೆಯನ್ನು ಶಿಕ್ಷಿಸಲಾಗುತ್ತಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಆಂಧ್ರ ಪ್ರದೇಶದಲ್ಲಿ ಆಂಜನೇಯ ದೇವಸ್ಥಾನವನ್ನು ಧ್ವಂಸ ಮಾಡಿದ್ದು ಮುಸ್ಲಿಮರಲ್ಲ ! ಮತ್ತ್ಯಾರು ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights