FACT CHECK | ಬಾಬಾ ಸಿದ್ದಿಕಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಈ ವ್ಯಕ್ತಿ ಎಂಬುದು ನಿಜವೇ?

ಮಹಾರಾಷ್ಟ್ರದಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಬಾಬಾ ಸಿದ್ದಿಕಿ ಅವರ ಹತ್ಯೆಯ ನಂತರ, ಅವರ ಕೊಲೆಯನ್ನು ಸಮರ್ಥಿಸಿ ಹೇಳಿಕೆ ನೀಡುತ್ತಿರುವ ವ್ಯಕ್ತಿಯೇ ನಾಯಕ ಬಾಬಾ ಸಿದ್ದಿಕಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ..

ಬಾಬಾ ಸಿದ್ದಿಕಿ ಒಳ್ಳೆಯ ವ್ಯಕ್ತಿಯಲ್ಲ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಅವನ ವಿರುದ್ಧ MCOCA (ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.  ದಯವಿಟ್ಟು ಪೊಲೀಸ್ ಇಲಾಖೆ ಮತ್ತು ಎಲ್ಲಾ ನ್ಯಾಯಾಲಯಗಳನ್ನು ಮುಚ್ಚಿ, ಇನ್ನು ಮುಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ ಎಂಬ ಬರಹದೊಂದಿಗೆ ಎಕ್ಸ್‌ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ, ವೈರಲ್ ವಿಡಿಯೋದಲ್ಲಿ ಮಾತನಾಡುತ್ತಿರುವ ವ್ಯಕ್ತಿಯೇ ಬಾಬಾ ಸಿದ್ದಿಕಿಯನ್ನು ಹತ್ಯೆ ಮಾಡಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ, ಬಾಬಾ ಸಿದ್ದಿಕಿಯನ್ನು ಗುಂಡಿಕ್ಕಿ ಹತ್ಯೆಗೈದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡು ಎಕ್ಸ್‌ನಲ್ಲಿ ಹಂಚಿಕೊಳ್ಳುತ್ತಿರುವ ವ್ಯಕ್ತಿ ಕುರಿತು ಪರಿಶೀಲಿಸಲು, ಗೂಗಲ್ ರಿವರ್ರ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವ್ಯಕ್ತಿಯ ಕುರಿತು ಸುದ್ದಿ ವರದಿಗಳು ಲಭ್ಯವಾಗಿವೆ. ದಿ ಹಿಂದೂ ಮತ್ತು ಡೆಕ್ಕನ್ ಹೆರಾಲ್ಡ್‌ ಸುದ್ದಿ ವರದಿಗಳ ಪ್ರಕಾರ, ಯೋಗೇಶ್ ಅಲಿಯಾಸ್ ರಾಜು ಎಂಬಾತ ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿಯಾಗಿದ್ದಾನೆ . ಅವನು ಲಾರೆನ್ಸ್ ಬಿಷ್ಣೋಯ್-ಹಶೀಮ್ ಬಾಬಾ ಗ್ಯಾಂಗ್‌ನ ಅಡಿಯಲ್ಲಿ ಕಾರ್ಯನಿರ್ವಹಿಸಿದ್ದಾನೆ ಮತ್ತು ದೆಹಲಿಯ ಜಿಮ್ ಮಾಲೀಕ ನಾದಿರ್ ಶಾ ಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದಾನೆ ಎಂದು ಉಲ್ಲೇಖವಾಗಿದೆ.

ಯೋಗೇಶ್ ಕುಮಾರ್ ಬಂಧನಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳು ಲಭ್ಯವಾಗಿವೆ. ಈ ವರದಿಗಳ ಪ್ರಕಾರ, ದೆಹಲಿ ಪೊಲೀಸರ ವಿಶೇಷ ಸೆಲ್ ನಾದಿರ್ ಶಾ ಹತ್ಯೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವ ಯೋಗೇಶ್ ಕುಮಾರನಿಗಾಗಿ ಹುಡುಕಾಟ ನಡೆಸಿದಾಗ,  2024ರ ಅಕ್ಟೋಬರ್ 16ರಂದು ರಾತ್ರಿವೇಳೆ , ಅವರು ಮಥುರಾದ ರಿಫೈನರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮರುದಿನ ದೆಹಲಿ ಪೊಲೀಸರು ಮಥುರಾ ಪೊಲೀಸರೊಂದಿಗೆ ಹುಡುಕಾಟ ನಡೆಸಿದಾಗ, ಆರೋಪಿ ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಎನ್‌ಕೌಂಟರ್‌ ದಾಳಿ ಮಾಡಲಾಗಿತ್ತು. ಆಗ ಆರೋಪಿಯಾದ ಯೋಗೇಶ್ ಕುಮಾರನ ಕಾಲಿಗೆ ಗುಂಡು ತಗುಲಿ ಪೋಲಿಸರ ಕೈಗೆ ಸಿಕ್ಕ ನಂತರ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಪೊಲೀಸರು ಆತನಿಂದ ಪಿಸ್ತೂಲ್, ಏಳು ಜೀವಂತ ಕಾಟ್ರಿಡ್ಜ್‌ಗಳು ಮತ್ತು ಕದ್ದ ಮೋಟಾರ್‌ಸೈಕಲ್‌ನ್ನು ವಶಪಡಿಸಿಕೊಂಡಿದ್ದಾರೆ.

ಅಕ್ಟೋಬರ್ 17, 2024 ರ ದಿನಾಂಕದ ಎಕ್ಸ್ ಪೋಸ್ಟ್‌ನಲ್ಲಿ, ದೆಹಲಿ ಪೊಲೀಸರು ಯೋಗೇಶ್ ಬಂಧನವನ್ನು ವಿವರಿಸಿದರು, “ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಜಿಮ್ ಮಾಲೀಕನ ಹತ್ಯೆಯ ಪ್ರಮುಖ ಶೂಟರ್” ಅನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಆರೋಪಿಯಿಂದ ಒಂದು ಪಿಸ್ತೂಲ್, ಏಳು ಜೀವಂತ ಕಾಟ್ರಿಡ್ಜ್‌ಗಳು ಮತ್ತು ಕದ್ದ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.

ಮುಂಬೈನಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆಗೆ ಸಂಬಂಧಿಸಿದಂತೆ 10 ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಇತ್ತೀಚಿನ ವರದಿಗಳು ಸೂಚಿಸುತ್ತವೆ. ನವಿ ಮುಂಬೈನಲ್ಲಿ ಸ್ಕ್ರ್ಯಾಪ್ ಡೀಲರ್ ಆಗಿರುವ ಭಗವಂತ್ ಓಂಸಿಂಗ್ ಈ ಪ್ರಕರಣದಲ್ಲಿ ಇತ್ತೀಚಿನ ಬಂಧನ.

ಶೂಟರ್‌ಗಳಿಗೆ ಬಂದೂಕು ಮತ್ತು ವ್ಯವಸ್ಥಾಪನಾ ನೆರವು ನೀಡಿದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ. ಇವರನ್ನು ನಿತಿನ್ ಗೌತಮ್ ಸಪ್ರೆ, ಸಂಭಾಜಿ ಕಿಸಾನ್ ಪಾರ್ಧಿ, ಪ್ರದೀಪ್ ದತ್ತು ಥಾಂಬ್ರೆ, ಚೇತನ್ ದಿಲೀಪ್ ಪಾರ್ಧಿ ಮತ್ತು ರಾಮ್ ಫುಲ್‌ಚಂದ್ ಕನೂಜಿಯಾ ಎಂದು ಗುರುತಿಸಲಾಗಿದೆ. ಈ ಹಿಂದೆ ಕೊಲೆ ಪ್ರಕರಣದಲ್ಲಿ ಗುರ್ಮೈಲ್ ಬಲ್ಜಿತ್ ಸಿಂಗ್, ಧರ್ಮರಾಜ್ ಕಶ್ಯಪ್, ಹರೀಶ್ ಕುಮಾರ್ ನಿಸಾದ್ ಮತ್ತು ಪ್ರವೀಣ್ ಲೊಂಕರ್ ಅವರನ್ನು ಪೊಲೀಸರು ಬಂಧಿಸಿದ್ದರು. ಸಿಂಗ್, ಕಶ್ಯಪ್ ಮತ್ತು ಬೇಕಾಗಿರುವ ಆರೋಪಿ ಶಿವಕುಮಾರ್ ಗೌತಮ್ ಗುಂಡಿನ ದಾಳಿ ನಡೆಸಿದ್ದರು. ಗೌತಮ್‌ಗೆ ಬಂದೂಕುಗಳನ್ನು ಹೇಗೆ ನಿರ್ವಹಿಸುವುದು ಎಂದು ತಿಳಿದಿದ್ದರಿಂದ ಅವರನ್ನು “ಮುಖ್ಯ ಶೂಟರ್” ಆಗಿ ನೇಮಿಸಲಾಗಿದೆ ಎಂದು ವರದಿಯಾಗಿದೆ ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ಜಿ ಅವರ ವಿಚಾರಣೆಯನ್ನು ಉಲ್ಲೇಖಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಬಾ ಸಿದ್ದಿಕ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಶೂಟರ್‌ಗೂ  ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ವ್ಯಕ್ತಿಗೂ ಸಂಬಂಧವಿಲ್ಲ. ಈತನನ್ನು ಯೋಗೇಶ್ ಎಂದು ಗುರುತಿಸಲಾಗಿದ್ದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ. ಆದರೆ ಎನ್‌ಸಿಪಿ ನಾಯಕನ ಹತ್ಯೆ ಪ್ರಕರಣದಲ್ಲಿ ಆತ ಆರೋಪಿಯಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಶಿವಸೇನೆಗೆ ಸೇರಿದ ರೂ 5ಕೋಟಿ ಹಣ ಜಪ್ತಿ ಮಾಡಲಾಗಿದೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights