ಸಕ್ಕರೆನಾಡಲ್ಲಿ ಮತ್ತೆ ರೌಡಿಗಳ ಹಾವಳಿ : ಲಾಂಗು, ಮಚ್ಚು,ಚೂರಿ ಬೀದಿಯಲ್ಲಿ…!

ಇದುವರೆಗೂ ಶಾಂತವಾಗಿದ್ದ ಸಕ್ಕರೆನಾಡು ಮಂಡ್ಯದಲ್ಲಿ ಮತ್ತೆ ರೌಡಿಗಳ ಹಾವಳಿ ಹೆಚ್ಚಾಗ್ತಿದೆ. ಹಾಡುಹಗಲೇ ಲಾಂಗು, ಮಚ್ಚು,ಚೂರಿ ಬೀದಿಯಲ್ಲಿ ಓಡಾಡ್ತಿವೆ . ಅದ್ರಲ್ಲೂ ಯುವ ಪೀಳಗೆಯ ಕೈಯಲ್ಲಿ ಈ ಮಾರಕಾಸ್ತ್ರಗಳು ಜಳಪಿಸ್ತಿದ್ದು ಕೊಲೆ,ಸುಲಿಗೆ ಪ್ರಕರಣ ಹೆಚ್ಚಾಗ್ತಿದ್ದು ಸಕ್ಕರೆ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಹೌದು! ಸಕ್ಕರೆನಾಡು ಅಂತಾ ಕರೆಸಿಕೊಳ್ಳೊ ಮಂಡ್ಯ ಜಿಲ್ಲೆಯಲ್ಲಿ ರೌಡಿಗಳ ಹಾವಳಿ ಹೆಚ್ಚಾಗ್ತಿದೆ. ಇದುವರೆಗೂ ಶಾಂತವಾಗಿದ್ದ ಜಿಲ್ಲೆಯಲ್ಲಿ ಪುಡಿರೌಡಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಹಾಡುಹಗಲೇ ಕೈಲಿ ಲಾಂಗು ಮಚ್ಚು ಹಿಡಿದು ಕೊಲೆ ಸುಲಿಗೆ ಮಾಡ್ತಿರೋ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗ್ತಿದೆ. ಇದ್ರಿಂದ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ,ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗ್ತಿದೆ. ನೆನ್ನೆ ಕೆ.ಆರ್.ಪೇಟೆಯ ಚಂದಗೋಳಮ್ಮ ದೇವಾಲಯದ ಬಳಿಯ ಬಾರ್ ವೊಂದಕ್ಕೆ ನುಗ್ಗಿದ ಯುವಕನೊಬ್ಬ ಕೈಲಿ ಲಾಂಗ್ ಹಿಡಿದು ಬಾರ್ ಗೆ ನುಗ್ಗಿ ದರೋಡೆ ನಡೆಸಿದ್ದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಹೆಸರು ಮಾಡಲು ಯುವಕನೊಬ್ಬ ಬೇಕರಿಗೆ ನುಗ್ಗಿ ಲಾಂಗ್ ನಿಂದ ಅಂಗಡಿ ಮಾಲೀಕನ‌ ಮೇಲೆ ಹಲ್ಲೆ ನಡೆಸಿರೋ ಪ್ರಕರಣ ಕೂಡ ನಡೆದಿದ್ದು ಆ ದೃಶ್ಯವು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಜಿಲ್ಲೆಯ ಜನ್ರಲ್ಲಿ ಆತಂಕ ಮೂಡಿಸಿದೆ. ಈಗಲಾದ್ರು ಪೊಲೀಸ್ ಇಲಾಖೆ ಇಂತಹ ರೌಡಿಗಳ ಹೆಡಿಮುರಿ ಕಟ್ಟಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡ್ತಿದ್ದಾರೆ.

ಇನ್ನು ಇದಿಷ್ಟೆ ಅಲ್ಲ. ಕೊಲೆ ಪ್ರಕರಣದಲ್ಲೂ ಕೂಡ ಯುವಕರು ಭಾಗಿಯಾಗಿ ಲಾಂಗು ಮಚ್ಚು ಚೂರಿ ಹಿಡಿದು ಜಳಪಿಸ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಹಲಗೂರಿನಲ್ಲಿ ಕಳೆದ ಆಗಷ್ಟ್ ತಿಂಗಳಿನಲ್ಲಿ ಯುವ ರೌಡಿಗಳ ತಂಡವೊಂದು ಅಂಗಡಿಯಲ್ಲಿದ್ದ ವ್ಯಕ್ತಿಯೋರ್ವರನ್ನು ಹಾಡು ಹಗಲೇ ಲಾಂಗು‌ಮಚ್ಚು ಹಿಡಿದು ಕೊಚ್ಚಿ ಹಾಕಿತ್ತು. ಆದಾದ ಬಳಿಕ‌ ಮಂಡ್ಯ ನಗರ ಸಂಜಯ ವೃತ್ತದ‌ ಬಳಿ ಯುವಕನೋರ್ವ ಹಾಡು ಹಗಲೇ ಚೂರಿ ಹಿಡಿದು ಮಂಡ್ಯದ ಸಂಜಯ್ ವೃತ್ತದ ಬಳೊ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ಎಲ್ಲಾ ಘಟನೆಗಳಲ್ಲಿ ಬಹುತೇಕರು ಯುವಕರೇ ಭಾಗೀಯಾಗಿರೋದು ಸ್ಪಷ್ಟವಾಗಿದೆ. ಈಗಾಗಲೇ ಪೊಲೀಸ್ ಇಲಾಖೆ‌ ಇಂತವರ ಮೇಲೆ ಪ್ರಕರಣ ದಾಖಲಿಸಿದ್ದು , ಇಂತಹ ಪ್ರಕರಣ ನಮ್ಮ‌ ಗಮನಕ್ಕೆ ಬಂದಿದ್ದು ಇಂತಹವರನ್ನು ನಮ್ಮ ಪೊಲೀಸರು ಜೈಲಿಗಟ್ಟುವ ಕೆಲಸ ಮಾಡಿದ್ದಾರೆ. ಅಲ್ದೆ ಇಂತಹ ಘಟನೆ ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವುದಾಗಿ‌ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.‌

ಒಟ್ಟಾರೆ ಇದುವರೆಗೂ ಶಾಂತವಾಗಿದ್ದ ಸಕ್ಕರೆನಾಡಲ್ಲಿ ಕೆಲ ಪುಡಿ ರೌಡಿಗಳು ರೌಡಿಸಂ ಹೆಸರಲ್ಲಿ ಲಾಂಗು ಮಚ್ಚು ಹಿಡಿದು ಮುಂಚೂಣಿಗೆ ಬರುವ ಪ್ರಯತ್ನ‌ ಮಾಡ್ತಿದೆ.‌ ಜಿಲ್ಲಾ ಪೊಲೀಸ್ ಇಲಾಖೆ ಇಂತಹ ಪುಡಿರೌಡಿಗಳನ್ನು ಆರಂಭದಲ್ಲೆ ಹೆಡಿಮುರಿ‌ಕಟ್ಟಿ ಸಕ್ಕರೆ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಬೇಕಿದೆ.‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights