ಲೇಹ್‌ಗೆ ರಕ್ಷಣಾ ಸಚಿವ ಭೇಟಿ; ರೈಫೈಲ್‌ ಹಿಡಿದು ಗುಂಡು ಹಾರಿಸಿದ ರಾಜನಾಥ್‌ ಸಿಂಗ್‌

ಚೀನಾ ವಿರುದ್ಧದ ಗಡಿ ವಿವಾದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಲಡಾಕ್​ನ ನಿಮ್ಮುವಿಗೆ ಭೇಟಿ ನೀಡಿದ್ದರು. ಸೈನಿಕರ ಜೊತೆ ಸಮಯ ಕಳಿದಿದ್ದರು. ಈಗ ಸ್ವತಃ ರಕ್ಷಣಾ ಸಚಿವರೇ ಸೇನೆಯ ಜೊತೆಗಿದ್ದಾರೆ. 2 ದಿನಗಳ ಜಮ್ಮುಕಾಶ್ಮೀರ ಪ್ರವಾಸ ಕೈಗೊಂಡಿರುವ ರಾಜನಾಥ್​ ಸಿಂಗ್​​​ ಲೇಹ್​ಗೆ ಭೇಟಿ ನೀಡಿದ್ದಾರೆ.

ಲೇಹ್​ನಲ್ಲಿ ಸೈನಿಕರ ಪ್ಯಾರಾ ಡೈವಿಂಗ್​​ ವೀಕ್ಷಿಸಿದ ಸಚಿವರು ನಂತರ ಸೇನಾ ಕಸರತ್ತು ವೀಕ್ಷಿಸಿದರು. ಜೊತೆಗೆ ರಕ್ಷಣಾ ಸಾಮಾಗ್ರಿಗಳ ಪರೀಕ್ಷೆ ಕೂಡ ನಡೆಸಿದ್ರು. ಸ್ವತಃ ರಾಜನಾಥ್​ ಸಿಂಗ್​ ರೈಫಲ್​ಗಳನ್ನು ಕೈಯಲ್ಲಿ ಹಿಡಿದು ಗುರಿ ಪರೀಕ್ಷೆ ಕೂಡ ನಡೆಸಿದ್ದಾರೆ.

ರಕ್ಷಣಾ ಸಚಿವರ ಈ ಪ್ರವಾಸದ ವೇಳೆ ಮೂರೂ ಸೇನೆಗಳ ಮುಖ್ಯಸ್ಥರಾಗಿರುವ ಬಿಪಿನ್​ ರಾವತ್​​​, ಸೇನಾ ಮುಖ್ಯಸ್ಥ ಎಂ.ಎಂ.ನರವಾಣೆ ಜೊತೆಗಿರಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights