ಗುರಗಾಂವ್ ಯುವತಿ ಗ್ಯಾಂಗ್ ರೇಪ್ ಪ್ರಕರಣ : ತನಿಖೆಯಿಂದ ಕ್ರೂರ ಸತ್ಯ ಬಯಲು!
ಉತ್ತರಪ್ರದೇಶದಲ್ಲಿ ಇತ್ತೇಚೆಗೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು. ಯುವತಿಯರ ಮೇಲೆ ಕ್ರೂರವಾಗಿ ಅತ್ಯಾಚಾರ ಎಸಗಲಾಗುತ್ತಿದೆ. ಹತ್ರಾಸ್ ಪ್ರಕರಣದ ಬಳಿಕ ಗುರಗಾಂವ್ ಅತ್ಯಾಚಾರ ಪ್ರಕರಣ ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಗುರ್ಗಾಂವ್ನಲ್ಲಿ 25 ವರ್ಷದ ಯುವತಿಯ ಮೇಲೆ ನಾಲ್ಕು ಪುರುಷರು ಅತ್ಯಾಚಾರ ಮಾಡಿ ಕ್ರೂರವಾಗಿ ಥಳಿಸಿದ್ದಾರೆ ವಿಚಾರ ತನಿಖೆಯಿಂದ ಬಯಲಾಗಿದೆ. ಇದರಿಂದಾಗಿ ತಲೆಗೆ ತೀವ್ರವಾದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧದ ಕೆಲವೇ ಗಂಟೆಗಳಲ್ಲಿ 20 ರಿಂದ 25 ವರ್ಷದೊಳಗಿನ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.
ಗುರಗಾಂವ್‌ನ ಡಿಎಲ್‌ಎಫ್ ಹಂತ 2 ರಲ್ಲಿ ಈ ಘಟನೆ ನಡೆದಿದೆ ಎಂದು ಡಿಎಲ್‌ಎಫ್‌ನ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಕರಣ್ ಗೋಯಲ್ ದೂರವಾಣಿ ಮೂಲಕ ತಿಳಿಸಿದ್ದಾರೆ. ನಾಲ್ವರು ಆರೋಪಿಗಳಲ್ಲಿ ಮೂವರು ಡೆಲಿವರಿ ಹುಡುಗರು ಎಂದು ಹೇಳಲಾಗುತ್ತಿದೆ.
ಗುರ್ಗಾಂವ್‌ನ ಸಿಕಂದರ್‌ಪುರ ಮೆಟ್ರೋ ನಿಲ್ದಾಣದ ಬಳಿ ಶನಿವಾರ ರಾತ್ರಿ ನಾಲ್ವರು ಆರೋಪಿಗಳಲ್ಲಿ ಒಬ್ಬನು ಯುವತಿಯನ್ನು ಭೇಟಿಯಾಗಿ ರಿಯಾಲ್ಟರ್ ಕಚೇರಿಗೆ ಕರೆದೊಯ್ದಿದ್ದನು. ಅಲ್ಲಿ ಈ ಕೃತ್ಯ ಎಸಗಲಾಗಿದೆ. ಈ ವ್ಯಕ್ತಿಯೊಂದಿಗೆ ಇತರ ಮೂವರು ಆರೋಪಿಗಳು ಅತ್ಯಾಚಾರದಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳಲ್ಲಿ ಒಬ್ಬರು ರಿಯಾಲ್ಟರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಯುವತಿ ವಿರೋಧಿಸಿದಾಗ ಆರೋಪಿಗಳು ಆಕೆಯನ್ನು ಕ್ರೂರವಾಗಿ ಥಳಿಸಿದ್ದಾರೆ. ಗೋಡೆಗೆ ಆಕೆಯ ತಲೆಯನ್ನು ಹೊಡೆದಿದ್ದಾರೆ. ಅಪರಾಧ ಎಸಗಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.ಯುವತಿಯ ಕೂಗು ಕೇಳಿದ ಕಾಂಪ್ಲೆಕ್ಸ್‌ನ ಭದ್ರತಾ ಸಿಬ್ಬಂದಿಯೊಬ್ಬರು ಸ್ಥಳಕ್ಕೆ ಪೊಲೀಸರನ್ನು ಕರೆಸಿದ್ದಾನೆ. ಅಷ್ಟರಲ್ಲಾಗಲೇ ಉಳಿದ ಆರೋಪಿಗ ಆಕೆಯ ತಲೆಗೆ ತೀವ್ರವಾಗಿ ಪಟ್ಟುಬಿದ್ದು ಅತ್ಯಾಚಾರಿಗಳು ಗುರಗಾಂವ್ನಲ್ಲಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಅಪರಾಧದ ನಡೆದ ಕೆಲವೇ ಗಂಟೆಗಳಲ್ಲಿ ಸಿಕ್ಕಿಬಿದ್ದ ಆರೋಪಿಗಳ ವಿರುದ್ಧ ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

