77,000 ಕೊರೊನಾ ಸೋಂಕಿತರು ಗುಣಮುಖ : ಒಂದೇ ದಿನದಲ್ಲಿ ಸುಧಾರಣೆಗೆ ಸಾಕ್ಷಿಯಾದ ಭಾರತ!
ಕೊರನಾವೈರಸ್ ಇಂದಿನ ಸೋಂಕಿತ ಪ್ರಕರಣಗಳನ್ನು ಹೋಲಿಸಿದರೆ ಭಾರತ ವಿಶ್ವದ ಅತಿ ಹೆಚ್ಚು ಚೇತರಿಕೆಯೊಂದಿಗೆ ತೀವ್ರ ಸುಧಾರಣೆಗೆ ಸಾಕ್ಷಿಯಾಗಿದೆ. ಮಾತ್ರವಲ್ಲದೇ ಭಾರತ ಸಾಂಕ್ರಾಮಿಕ ರೋಗವನ್ನು ಮತ್ತಷ್ಟು ನಿಯಂತ್ರಣಕ್ಕೆ ತರಲು, ಕನಿಷ್ಠ 25 ಕೋಟಿ ಜನರಿಗೆ ಚುಚ್ಚುಮದ್ದು ನೀಡಲು ಜುಲೈ 2021 ರೊಳಗೆ 50 ಕೋಟಿ ಡೋಸ್ ಕೊರೊನಾವೈರಸ್ ಲಸಿಕೆ ಪಡೆಯುವ ಗುರಿ ಹೊಂದಿದೆ ಎಂದು ಸರ್ಕಾರ ಈಗ ಘೋಷಿಸಿದೆ.
ಮುಂದಿನ ವರ್ಷ ಜುಲೈ ವೇಳೆಗೆ ಭಾರತದಲ್ಲಿ ಜನರಿಗೆ ಲಭ್ಯವಿರುವ ಮೊದಲ ಲಸಿಕೆಗಳನ್ನು ನೀಡಬಹುದು ಎಂದು ಸೂಚಿಸಲಾಗುತ್ತಿದೆ. ಲಸಿಕೆ ಸ್ವೀಕರಿಸಲು ಆದ್ಯತೆಯ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸಲು ರಾಜ್ಯಗಳಿಗೆ ಅಕ್ಟೋಬರ್ ಅಂತ್ಯದವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಸರ್ಕಾರ ಉಲ್ಲೇಖಿಸಿದೆ. ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡಲು ಭಾರತ ವಿಸ್ತಾರವಾದ ಯೋಜನೆಯನ್ನು ಸಿದ್ಧಪಡಿಸುತ್ತಿದೆ ಎಂದು ತೋರುತ್ತದೆಯಾದರೂ, ಹೆಚ್ಚಿನ ಸಂಖ್ಯೆಯ ದೈನಂದಿನ ವರದಿ ಪ್ರಕರಣಗಳು ಕಳವಳಕಾರಿಯಾಗಿ ಉಳಿದಿವೆ.
ಭಾರತ ವಿಶ್ವದಲ್ಲೇ ಅತಿ ಹೆಚ್ಚು ದೈನಂದಿನ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡುತ್ತಿದೆ. ಪ್ರಕರಣಗಳ ವಿಷಯದಲ್ಲಿ ಯುಎಸ್ಗೆ ಎರಡನೆಯ ಸ್ಥಾನದಲ್ಲಿದೆ.

