ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಸೈಯದ್ ಶಹನವಾಜ್ ಹುಸೇನ್ ಅವರ ಪತ್ನಿಯರು ಹಿಂದೂಗಳು: ಇದೂ ಲವ್ ಜಿಹಾದ್?: ದಿಗ್ವಿಜಯ್ ಸಿಂಗ್ ಪ್ರಶ್ನೆ
ಹಿಂದೂ-ಮುಸ್ಲೀಮರ ನಡುವೆ ದ್ವೇಷ ಬಿತ್ತಲು ಬಿಜೆಪಿ ಬಳಸುತ್ತಿರುವ ಲವ್ ಜಿಹಾದ್ ಅಸ್ತ್ರವನ್ನು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಅವರು ಬಿಜೆಪಿಗೆ ತಿರುಗಿಸಿದ್ದಾರೆ. ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸೈಯದ್ ಶಹನವಾಜ್ ಹುಸೇನ್ ವಿರುದ್ಧ ‘ಲವ್ ಜಿಹಾದ್’ ಅಸ್ತ್ರ ಬಳಸಿ ಟೀಕಿಸಿದ್ದಾರೆ.
“ಮುಸ್ಲಿಂ ಹುಡುಗ ಹಿಂದೂ ಹುಡುಗಿಯನ್ನು ಮದುವೆಯಾದರೆ ಅದು ಲವ್ ಜಿಹಾದ್. ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿರುವ ನಖ್ವಿಯವರು ಹಿಂದೂ ಮಹಿಳೆಯನ್ನು ಮದುವೆಯಾಗಿದ್ದಾರೆ, ಬಿಜೆಪಿ ನಾಯಕ ಹುಸೇನ್ ಅವರ ಪತ್ನಿ ಕೂಡ ಹಿಂದೂ.. ಇದು ಕೂಡ ಲವ್ ಜಿಹಾದ್” ಎಂದು ಸಿಂಗ್ ಕೇಳಿದರು.
“ಅವರಿಗೆ (ಬಿಜೆಪಿಗೆ) ಯಾವುದೇ ಕಾರ್ಯಸೂಚಿಯಿಲ್ಲ. ಹಿಂದೂ-ಮುಸ್ಲಿಮರ ನಡುವೆ ದ್ವೇಷ ಬೆಳೆಸುವುದು ಬಿಟ್ಟರೆ ಚರ್ಚಿಸಲು ಯಾವುದೇ ವಿಷಯಗಳಿಲ್ಲ. ಅವರು ದ್ವೇಷವನ್ನು ಹರಡಲು ಮತ್ತು ಹಿಂದೂ-ಮುಸ್ಲಿಮರ ಹೆಸರಿನಲ್ಲಿ ಜನರನ್ನು ಪ್ರಚೋದಿಸಲು ಮಾತ್ರ ಬಯಸುತ್ತಾರೆ. ಇದನ್ನು ನಾವು ವಿರೋಧಿಸುತ್ತೇವೆ” ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಕನ್ನಡಿಗರ ಕೈ ತಪ್ಪುತ್ತಿವೆ ಬ್ಯಾಂಕಿಂಗ್ ಉದ್ಯೋಗಗಳು; ಮಾತು ತಪ್ಪಿದ ಕೇಂದ್ರ ಸರ್ಕಾರ: ಟಿ ಎಸ್ ನಾಗಾಭರಣ ಆರೋಪ

