ಬೀಚ್ ಸ್ವಚ್ಚಗೊಳಿಸಲು ಹನಿಮೂನ್ ಕ್ಯಾನ್ಸಲ್ ಮಾಡಿದ ನವಜೋಡಿ..!

ಹೊಸದಾಗಿ ಮದುವೆಯಾದವರಿಗೆ ಜೀವನದಲ್ಲಿ ಹಲವಾರು ಆಸೆಗಳು ಇರುತ್ತವೆ. ತಮ್ಮ ಸಂಗಾತಿಯೊಂದಿಗೆ ಏಕಾಂತದಲ್ಲಿ ಕಾಲಕಳೆಯುವ ಮನಸ್ಸು ಇರುತ್ತದೆ. ಒಬ್ಬೊರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಮದುವೆ ನಂತರದ ಸಮಯ ಮುಡುಪಾಗಿಡಲಾಗಿರುತ್ತೆ. ಆದರೆ ಇಲ್ಲೊಂದು ನವಜೋಡಿ ಇಂಥಹ ಆಸೆಗಳಿಗೆ ಬ್ರೇಕ್ ಹಾಕಿ ಪರಿಸರ ಸಂರಕ್ಷಣೆಗೆ ಕೈಹಾಕಿದೆ.

ಹೌದು.. ಹೊಸದಾಗಿ ಮದುವೆಯಾದ ದಂಪತಿಗಳು ಹನಿಮೂನ್ ರದ್ದುಗೊಳಿಸಿ ಬೀಚ್ ಸ್ವಚ್ಚಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕರ್ನಾಟಕದ ಅನುದೀಪ್ ಹೆಗ್ಡೆ ಮತ್ತು ಮಿನುಶಾ ಕಾಂಚನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು ವೈರಲ್ ಆಗಿದೆ.

ಅನುದೀಪ್ ಹೆಗ್ಡೆ ಯಾರು?

ಕರ್ನಾಟಕದ ಬೈನ್‌ಡೂರ್ ಮೂಲದ ಅನುದೀಪ್ ಹೆಗ್ಡೆ ಡಿಜಿಟಲ್ ಮಾರಾಟಗಾರರಾಗಿದ್ದು ಪ್ರಕೃತಿ ಸಂರಕ್ಷಣೆಯಲ್ಲಿ ತೀವ್ರ ಆಸಕ್ತಿ ಹೊಂದಿದವರಾಗಿದ್ದಾರೆ. ಮದುವೆಯ ನಂತರ ಅನುದೀಪ್ ಮತ್ತು ಮಿನುಷಾ ಕರ್ನಾಟಕದಲ್ಲಿ ಸಮಯ ಕಳೆದು ಸೋಮೇಶ್ವರ ಬೀಚ್‌ಗೆ ಭೇಟಿ ನೀಡಿದ್ದರು.

ಕಡಲತೀರ ಕಸದ ರಾಶಿಯಾಗಿ ಮಾರ್ಪಟ್ಟು ತ್ಯಾಜ್ಯ ಮತ್ತು ಪ್ಲಾಸ್ಟಿಕ್ ವಸ್ತುಗಳಿಂದ ತುಂಬಿದ್ದನ್ನು ಅನುದೀಪ್ ಮತ್ತು ಮಿನುಶಾ ನೋಡಿ ಬೀಚ್ ಸ್ವಚ್ಚಗೊಳಿಸುವ ನಿರ್ಧಾರ ಮಾಡಿದರು. ಆದ್ದರಿಂದ ದಂಪತಿಗಳು ತಮ್ಮ ಹನಿಮೂನ್ ಹೋಗುವುದನ್ನು ನಿಲ್ಲಿಸಿ ಬೀಚ್ ಅನ್ನು ಸ್ವಚ್ಚಗೊಳಿಸಿದ್ದಾರೆ.

ಅನುದೀಪ್ ತಮ್ಮ ಸಂಪೂರ್ಣ ಪ್ರಯಾಣವನ್ನು ಹಲವಾರು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೆ 800 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪನ್ನಗಳನ್ನು ಬೀಚ್‌ನಿಂದ ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ. ದಂಪತಿಗಳ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

“ಸೋಮೇಶ್ವರ ಕಡಲತೀರದಿಂದ ತ್ಯಾಜ್ಯವನ್ನು ತೆರವುಗೊಳಿಸಲು 10 ದಿನಗಳ ಸತತ ಪ್ರಯತ್ನ ಮಾಡಿ ಇಲ್ಲಿಯವರೆಗೆ 800 ಕಿ.ಗ್ರಾಂ ತ್ಯಾಜ್ಯವನ್ನು ಬೀಚ್‌ನಿಂದ ತೆಗೆದುಹಾಕಲಾಗಿದೆ” ಎಂದು ಅನುದೀಪ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಬರೆದಿದ್ದಾರೆ. ಮತ್ತೊಂದರಲ್ಲಿ, “ಇದು ತುಂಬಾ ವಿನಮ್ರ ಅನುಭವ ಮತ್ತು ಮಾನವೀಯತೆಯ ಬಗ್ಗೆ ನನ್ನ ನಂಬಿಕೆ ಪುನಃಸ್ಥಾಪನೆಯಾಗಿದೆ. ನಾವೆಲ್ಲರೂ ಒಂದೇ ವಿಷಯವನ್ನು ಬಯಸುತ್ತೇವೆ. ಪ್ರೇರೇಪಿಸಲು ಮತ್ತು ಜಾಗೃತಿ ಮೂಡಿಸಲು ನಮಗೆ ಯಾರಾದರೂ ಬೇಕು. ಒಟ್ಟಿಗೆ ನಾವು ತುಂಬಾ ವ್ಯತ್ಯಾಸವನ್ನು ತರಬಹುದು . ”

ಅನುದೀಪ್ ಅವರ ಪೋಸ್ಟ್‌ಗಳನ್ನು ಇಲ್ಲಿ ನೋಡಿ:

ಇಂಟರ್ನೆಟ್ ರಿಯಾಕ್ಟ್ ಹೇಗೆ?

ಸೋಮೇಶ್ವರ ಬೀಚ್ ಅನ್ನು ಸ್ವಚ್ಚಗೊಳಿಸಲು ಅನುದೀಪ್ ಮತ್ತು ಅವರ ಪತ್ನಿ ಮಾಡಿದ ಪ್ರಯತ್ನದಿಂದ ಇಂಟರ್ನೆಟ್ ಸಂತೋಷವಾಗಿದೆ ಮತ್ತು ಅವರನ್ನು ಶ್ಲಾಘಿಸಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights