ಇಂದು ಮತ್ತು ನಾಳೆ ನಗರದಲ್ಲಿ ನೀರು ಸರಬರಾಜು ವ್ಯತ್ಯಯ : ಎಲ್ಲೆಲ್ಲಿ ಇಲ್ಲಿದೆ ಮಾಹಿತಿ..

ಟಿ.ಕೆ ಹಳ್ಳಿಯ ಪೈಪ್​ಲೈನ್​ನಲ್ಲಿ ಸೋರಿಕೆ ಉಂಟಾಗಿರುವುದರಿಂದ  ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ (ಫೆ. 6) ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಹೌದು… ಗುರುವಾರ ರಾತ್ರಿಯಿಂದಲೇ ಕೆಲ ಏರಿಯಾಗಳಲ್ಲಿ ನೀರಿನ ಸರಬರಾಜು ಸ್ಥಗಿತಗೊಂಡಿದ್ದು, ಬಹುತೇಕ ಕಡೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಇಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಹಲವೆಡೆ ನೀರು ಸರಬರಾಜು ಇರುವುದಿಲ್ಲ.

ಹೆಚ್​ಆರ್​ಬಿಆರ್ ಲೇಔಟ್, ದಾಸರಹಳ್ಳಿ, ಚಂದ್ರಾ ಲೇಔಟ್, ಕೆಂಗೇರಿ, ಕೆ.ಆರ್ ಪುರಂ, ಬಾಣಸವಾಡಿ, ಅಂಜನಾಪುರ, ಜಂಬು ಸವಾರಿ ದಿಣ್ಣೆ, ಕುತ್ತನೂರು ದಿಣ್ಣೆ, ಕೋಡಿಚಿಕ್ಕನಹಳ್ಳಿ, ಬೊಮ್ಮನಹಳ್ಳಿ, ಕೂಡ್ಲು, ಹೊಂಗಸಂದ್ರ, ಮಂಗಮ್ಮನಪಾಳ್ಯ, ಮಾರತ್ತಹಳ್ಳಿ, ಹೂಡಿ, ನಾರಾಯಣಪುರ, ಬೆಂಗಳೂರಿನ ಆರ್​.ಆರ್​ ನಗರ, ನಂದಿನಿ ಲೇಔಟ್, ರಾಜಾಜಿನಗರ, ನಾಗರಬಾವಿ, ಯಲಹಂಕ, ಬ್ಯಾಟರಾಯನಪುರ, ರಾಮಮೂರ್ತಿ ನಗರ, ವೈಟ್​ಫೀಲ್ಡ್, ಸಿ.ವಿ ರಾಮನಗ ನಗರ, ಹಳೇ ಏರ್​ಪೋರ್ಟ್​ ರಸ್ತೆ, ರಾಮಯ್ಯ ಲೇಔಟ್ ಸುತ್ತಮುತ್ತ ಇಂದು ನೀರಿನ ಸರಬರಾಜು ಇರುವುದಿಲ್ಲ.

ಜೊತೆಗೆ ನಾಳೆಯೂ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಜಯನಗರ, ಆಡುಗೋಡಿ, ಕೋರಮಂಗಲ, ಎಂಜಿ ರಸ್ತೆ, ಹಲಸೂರಿನ ಸುತ್ತಮುತ್ತ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಶನಿವಾರ ಬೆಳಗ್ಗೆ 8 ರಿಂದ ಸಂಜೆ 6ರವರೆಗೆ ನೀರಿನ ಸರಬರಾಜು ಇರುವುದಿಲ್ಲ. ಪಂಪಿಂಗ್ ಸ್ಟೇಷನ್ ಉನ್ನತೀಕರಿಸುತ್ತಿರುವ ಕಾರಣ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಇದರ ಜೊತೆಗೆ ಗುರುರಾಜ ಲೇಔಟ್, ವಿವೇಕಾನಂದ ನಗರ, ಕತ್ರಿಗುಪ್ಪೆ, ತ್ಯಾಗರಾಜನಗರ, ನೀಲಸಂದ್ರ, ಆಸ್ಟಿನ್ ಟೌನ್, ಬಸವನಗುಡಿ, ಶಾಸ್ತ್ರಿನಗರ, ಎನ್‌ಆರ್ ಕಾಲೋನಿ, ಮೌಂಟ್ ಜಾಯ್ ಎಕ್ಸ್‌ಟೆನ್ಷನ್, ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಔಟ್, ವಿಠ್ಠಲನಗರ, ಶಾಂತಲಾ ನಗರ, ಅಂಬೇಡ್ಕರ್ ನಗರ, ಜಯನಗರ, ತಿಲಕ್ ನಗರ, ಎಸ್‌ಆರ್ ನಗರ, ಆಡುಗೋಡಿ, ನೇತಾಜಿನಗರ, ಕೆಪಿ ಅಗ್ರಹಾರ, ನ್ಯೂ ಬಿನ್ನಿ ಲೇಔಟ್, ರಾಘವೇಂದ್ರ ಕಾಲೋನಿ, ಟಿಪ್ಪು ನಗರ, ಚಾಮರಾಜಪೇಟೆ, ರಾಮಚಂದ್ರ ಅಗ್ರಹಾರ, ಆದರ್ಶ ನಗರ, ಪಾದರಾಯನಪುರ, ಅಂಜನಪ್ಪ ಗಾರ್ಡನ್, ಶ್ರೀನಿವಾಸನಗರ, ಬ್ಯಾಂಕ್ ಕಾಲೋನಿ, ಐಟಿಐ ಲೇಔಟ್, ಈಜಿಪುರ, ವಿವೇಕನಗರ, ಅಶೋಕ್ ನಗರ, ರಿಚ್‌ಮಂಡ್ ಟೌನ್, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಎಚ್‌ಎಎಲ್ ಎರಡನೇ ಹಂತ, ಕೋಡಿಹಳ್ಳಿ, ಹಲಸೂರು, ಜೋಗುಪಾಳ್ಯ, ರಾಜೇಂದ್ರನಗರ, ನಂಜಪ್ಪ ರೆಡ್ಡಿ ಲೇಔಟ್‌ನಲ್ಲಿ ನಾಳೆ ನೀರಿನ ಸರಬರಾಜು ಇರುವುದಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights