ರೈತ ಹೋರಾಟಕ್ಕೆ ಬೇಸಿಗೆ ಕಾವು; ದೆಹಲಿ ಗಡಿಯಲ್ಲಿ ಇಟ್ಟಿಗೆ ಮನೆಗಳನ್ನು ನಿರ್ಮಿಸುತ್ತಿದ್ದಾರೆ ರೈತರು!

ನವೆಂಬರ್‌ ತಿಂಗಳ ಕೊರೆಯುವ ಚಳಿಗೂ ಹೆದರದೆ ದೆಹಲಿ ಗಡಿಯಲ್ಲಿ ಅರಂಭವಾದ ಕೃಷಿ ಕಾಯ್ದೆಗಳ ವಿರುದ್ದ ರೈತ ಹೋರಾಟ 100 ದಿನಗಳನ್ನೂ ದಾಟಿದೆ. ಆದರೆ, ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸದೇ ಹಟಕ್ಕೆ ಬಿದ್ದಿದೆ. ಇದೀಗ ಬೇಸಿಗೆಯ ಬಿಸಿಲು ಆರಂಭವಾಗಿದ್ದು, ಬಿಸಿಲಿನ ಬೇಗೆಯಿಂದ ರಕ್ಷಣೆ ಪಡೆಯಲು ರೈತರು ಸಿಂಘು ಹಾಗೂ ಟಿಕ್ರಿ ಗಡಿಯಲ್ಲಿ ಇಟ್ಟಿಗೆ ಬಳಸಿಕೊಂಡು ಮನೆಗಳನ್ನು ನಿರ್ಮಿಸುತ್ತಿದ್ದಾರೆ.

ಪ್ರತಿಭಟನೆ ನಡೆಯುತ್ತಿರುವ ಸಿಂಘು ಗಡಿಯ ಕೆಲವೇ ಕಿ.ಮೀ ದೂರದಲ್ಲಿ ರೈತರು ಎರಡು ಹಂತಸ್ಥಿನ ಇಟ್ಟಿಗೆ ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಈ ಸ್ಥಳದಲ್ಲಿ ರೈತರು ಡೇರೆಗಳನ್ನು ಹಾಕಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಂಯುಕ್ತಾ ಕಿಸಾನ್ ಮೋರ್ಚಾದ (ಎಸ್‌ಕೆಎಂ) ಮಾಧ್ಯಮ ಸೆಲ್‌ನ ಮುಖ್ಯಸ್ಥರಾದ ಕರಮ್‌ಜಿತ್ ಸಿಂಗ್, “ಶುಕ್ರವಾರ ಪಂಜಾಬ್‌ನ ರೈತ ಮುಖಂಡರು ಸಿಂಘು ಗಡಿಯಲ್ಲಿ ಬೇಸಿಗೆಯ ಬಿಸಿಲಿನಿಂದ ರಕ್ಷಣೆ ಪಡೆಯಲು ಇಟ್ಟಿಗೆಗಳ ಮನೆಗಳನ್ನು ನಿರ್ಮಿಸುವ ಬಗ್ಗೆ ಚರ್ಚಿಸಿದ್ದರು. ಗಡಿಯಲ್ಲಿ ಈಗಾಗಲೆ ನಾಲ್ಕು ಮನೆಗಳನ್ನು ನಿರ್ಮಿಸಲಾಗಿದ್ದು, ಅವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಎಲ್ಲಾ ಮನೆಗಳು ಎರಡು ಅಂತಸ್ತಿನವುಗಳಾಗಿವೆ” ಎಂದು ಹೇಳಿದ್ದಾರೆ.

Farmers built pucca houses, brick and cement being used on Tikari border -  NewsBust.in

“ಗಡಿಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಇರುವುದರಿಂದ, ಎರಡು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಆಂದೋಲನವು ಒಂದು ವೇಳೆ ಮತ್ತಷ್ಟು ದೀರ್ಘ ಕಾಲ ನಡೆಯುವ ಸಾಧ್ಯತೆಯಿದ್ದರೆ, ನಮ್ಮ ಸಿದ್ಧತೆಗಳು ಕೂಡಾ ಅದಕ್ಕೆ ತಕ್ಕದಾಗಿರಬೇಕು” ಎಂದು ಅವರು ತಿಳಿಸಿದ್ದಾರೆ.

ರೈತ ಹೋರಾಟವು ಚಳಿಗಾಲದ ಸಮಯದಲ್ಲಿ ಪ್ರಾರಂಭವಾಗಿರುವುರಿಂದ, ರೈತರು ಮೊದಲಿಗೆ ಪ್ಲಾಸ್ಟಿಕ್ ಡೇರೆಗಳನ್ನು ಮಾತ್ರ ನಿರ್ಮಿಸಿದ್ದರು. ಇದೀಗ ಬೇಸಿಗೆ ಪ್ರಾರಂಭವಾಗಿರುವುದರಿಂದ ಅಂತಹ ಡೇರೆಗಳಲ್ಲಿ ಉಳಿಯುವುದು ಕಷ್ಟವಾಗುತ್ತದೆ.

ರಾತ್ರಿಯಲ್ಲಿ ಸೊಳ್ಳೆಗಳು ಮತ್ತು ಹಗಲಿನಲ್ಲಿ ಸುಡುವ ಬಿಸಿಲು ಇರುವುದರಿಂದ ರೈತರು ಇಟ್ಟಿಗೆಯ ಮನೆಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮನೆಗಳನ್ನು ನಿರ್ಮಿಸುತ್ತಿರುವ ರೈತರ ತಯಾರಿಯು ಕೇಂದ್ರ ಸರ್ಕಾರ ಮೂರು ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ತಮ್ಮ ಮನೆಗಳಿಗೆ ವಾಪಾಸಾಗುವುದಿಲ್ಲ ಎಂಬ ಬದ್ದತೆಯನ್ನು ಎತ್ತಿ ತೋರಿಸುತ್ತಿದೆ.

ಇದನ್ನೂ ಓದಿ: ಮಾರ್ಚ್‌ 26ರಂದು ಸಂಪೂರ್ಣ ಭಾರತ್‌ ಬಂದ್; ಕೃಷಿ ಕಾಯ್ದೆಗಳ ವಿರುದ್ಧ ರೈತರ ಕರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights