ಅದು ಹೃದಯವಲ್ಲ ಕಲ್ಲು; ಸರ್ಕಾರಕ್ಕೆ ಜನರ ಮೇಲೆ ಪ್ರೀತಿಯಿಲ್ಲ: ಮೋದಿ ಸರ್ಕಾರದ ವಿರುದ್ದ ರಾಹುಲ್‌ ಆಕ್ರೋಶ

ದೇಶದಾದ್ಯಂತ ಕೊರೊನಾ ಎರಡನೆ ಅಲೆಯ ತೀವ್ರವಾಗಿ ಹಬ್ಬುತ್ತಿದೆ. ಸೋಂಕಿಗೆ ತುತ್ತಾದ ಹಲವಾರು ಜನರು ವೆಂಟಿಲೇಟರ್‌, ಆಕ್ಸಿಜನ್‌ ಇಲ್ಲದೇ ಸಾವನ್ನಪ್ಪುತ್ತಿದ್ದಾರೆ. ಆದರೆ, ಕೇಂದ್ರ ಮತ್ತು ಹಲವು ರಾಜ್ಯ ಸರ್ಕಾರಗಳು ಸರಿಯಾದ ರೀತಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿವೆ. ಹೀಗಾಗಿ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿರುವ ರಾಹುಲ್‌ಗಾಂಧಿ, ಅವರದ್ದು ಹೃದಯವಲ್ಲ ಕಲ್ಲು ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ನೋವು ಕೇಳಲು ಸಿದ್ದರಿಲ್ಲದ ಹೃದಯ ಹೃದಯವೇ ಅಲ್ಲ, ಅದು ಕಲ್ಲು” ಎಂದು ಗುರುವಾರ ಕುಟುಕಿದ್ದಾರೆ.

ಇದನ್ನೂ ಓದಿ: ಅಕ್ಕಿ ಕೇಳಿದ ರೈತನಿಗೆ ಸಾಯಿ ಎಂದು ಹೇಳಿದ್ದು ಉಮೇಶ್‌ ಕತ್ತಿಯವರು ಮಾನಸಿಕ ವಿಕೃತಿ: ಹೆಚ್‌ಡಿಕೆ ಆಕ್ರೋಶ

ಅವರು ಟ್ವಿಟರ್‌ನಲ್ಲಿ, “ಭಾವನೆಗಳಿಂದ ತುಂಬಿಲ್ಲದ, ನೋವು ಕೇಳಲು ಯಾರು ಸಿದ್ಧರಿಲ್ಲದ, ಹೃದಯವು ಹೃದಯವೇ ಅಲ್ಲ, ಅದು ಕಲ್ಲು. ಈ ‘ವ್ಯವಸ್ಥೆ’ಗೆ ಜನರೊಂದಿಗೆ ಪ್ರೀತಿಯೆ ಇಲ್ಲ” ಎಂದು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಶುಕ್ರವಾರ ಮತ್ತೆ ಟ್ವೀಟ್ ಮಾಡಿರುವ ಅವರು, ಚಿಕಿತ್ಸೆ ಸಿಗದೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿರುವ ಭಾರತೀಯರಿಗೆ ಸಂತಾಪ ವ್ಯಕ್ತಪಡಿಸಿದ್ದು, ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಕೊರೊನಾ ವಿರುದ್ದ ಹೋರಾಟ: ಭಾರತಕ್ಕೆ ನಾರ್ವೆಯಿಂದ 17 ಕೋಟಿ ರೂ ನೆರವು!

ಅವರು, “ಚಿಕಿತ್ಸೆಯ ಕೊರತೆಯಿಂದಾಗಿ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿರುವ ದೇಶವಾಸಿಗಳಿಗೆ ನನ್ನ ಸಂತಾಪ ಸಲ್ಲಿಸುತ್ತೇನೆ. ಈ ದುರಂತದಲ್ಲಿ ನೀವು ಒಬ್ಬಂಟಿಯಲ್ಲ. ದೇಶದ ಪ್ರತಿಯೊಂದು ರಾಜ್ಯದಿಂದಲೂ ಪ್ರಾರ್ಥನೆ ಮತ್ತು ಸಹಾನುಭೂತಿ ನಿಮ್ಮೊಂದಿಗೆ ಇರುತ್ತದೆ. ನಾವು ಒಟ್ಟಿಗೆ ಇದ್ದರೆ, ಭರವಸೆ ಇದ್ದಂತೆ” ಎಂದು ಹೇಳಿದ್ದಾರೆ.

ಇಂದು ದೇಶದಲ್ಲಿ 3.86 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಸೋಂಕಿನ ಎರಡನೆ ಅಲೆಯ ಬಗ್ಗೆ ತಜ್ಞರು ಬಿಜೆಪಿಯ ನರೇಂದ್ರ ಮೋದಿ ಸರ್ಕಾರವನ್ನು ಈ ಹಿಂದೆಯೆ ಎಚ್ಚರಿಸಿದ್ದರು. ಆದರೆ ಕೇಂದ್ರ ಸರ್ಕಾರ ಮಾತ್ರ ಯಾವುದೆ ತಯಾರಿಗಳನ್ನು ಮಾಡಿಕೊಳ್ಳಲಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: fact Check: ಕೊರೊನಾ ರೋಗಿಗಳನ್ನು ಆಸ್ಪತ್ರೆ ಸಿಬ್ಬಂದಿ ಕೊಲ್ಲುತ್ತಿದ್ದಾರೆ ಎಂಬುದು ಸುಳ್ಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights