ದೆಹಲಿ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಯುವ ವೈದ್ಯ ಆತ್ಮಹತ್ಯೆಗೆ ಶರಣು!

ಟಾಪ್ ದೆಹಲಿ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಡಾಕ್ಟರ್ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಡಾ. ವಿವೇಕ್ ರೈ ಅವರು ಕಳೆದ ಒಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳನ್ನು ನೋಡಿಕೊಳ್ಳುತ್ತಿದ್ದರು. ಮಾತ್ರವಲ್ಲದೇ ಪ್ರತಿದಿನ ಏಳರಿಂದ ಎಂಟು ರೋಗಿಗಳ ಪ್ರಾಣ ಕಾಪಾಡುವಲ್ಲಿ ಹೋರಾಡುತ್ತಿದ್ದರು ವ್ಯವಹರಿಸುತ್ತಿದ್ದರು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಹೆಚ್ಚು ಹೆಚ್ಚು ಜನರು ಸಾಯುತ್ತಲೇ ಇದ್ದಿದ್ದರಿಂದ ಯುವ ವೈದ್ಯರು ಖಿನ್ನತೆಗೆ ಒಳಗಾಗಿದ್ದರು.

ಕೊರೊನಾ ಮಧ್ಯೆ ತೀವ್ರ ಒತ್ತಡದಿಂದಾಗಿ ದೆಹಲಿಯ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉನ್ನತ ವೈದ್ಯಕೀಯ ಸಂಸ್ಥೆಯ ಮಾಜಿ ಮುಖ್ಯಸ್ಥರು ಟ್ವೀಟ್ ಮಾಡಿದ್ದಾರೆ.

“ಅವರು ಗೋರಖ್‌ಪುರದ (ಉತ್ತರ ಪ್ರದೇಶದ) ಅತ್ಯಂತ ಅದ್ಭುತ ವೈದ್ಯರಾಗಿದ್ದರು. ಸಾಂಕ್ರಾಮಿಕ ಸಮಯದಲ್ಲಿ ನೂರಾರು ಜೀವಗಳನ್ನು ಉಳಿಸಲು ಸಹಾಯ ಮಾಡಿದರು” ಎಂದು ಮಾಜಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮುಖ್ಯಸ್ಥ ಡಾ.ರವಿ ವಾಂಖೇಡ್ಕರ್ ಟ್ವೀಟ್ ಮಾಡಿದ್ದಾರೆ.

ಡಾ. ವಿವೇಕ್ ರೈ ಅವರು ಕಳೆದ ಒಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ಮಾಜಿ ಐಎಂಎ ಮುಖ್ಯಸ್ಥರು ತಿಳಿಸಿದ್ದಾರೆ. ಅವರು ಪ್ರತಿದಿನ ಏಳರಿಂದ ಎಂಟು ರೋಗಿಗಳ ಪ್ರಾಣ ಕಾಪಾಡುವಲ್ಲಿ ಹೋರಾಡುತ್ತಿದ್ದರು ವ್ಯವಹರಿಸುತ್ತಿದ್ದರು ಎಂದು ಡಾ. ವಾಂಖೇಡ್ಕರ್ ಹೇಳಿದರು, ಹೆಚ್ಚು ಹೆಚ್ಚು ಜನರು ಸಾಯುತ್ತಲೇ ಇದ್ದಿದ್ದರಿಂದ ಯುವ ವೈದ್ಯರು ಖಿನ್ನತೆಗೆ ಒಳಗಾಗಿದ್ದರು.

“ಈ ನಿರಾಶೆಯಿಂದ ಅವರು ಮರಣ ಹೊಂದಿದ ಜನರ ನೋವು ಮತ್ತು ಭಾವನೆಗಳೊಂದಿಗೆ ಬದುಕುವುದಕ್ಕಿಂತ ತಮ್ಮ ಜೀವನವನ್ನು ಕೊನೆಗೊಳಿಸುವ ಉತ್ತಮ ಎಂದು ನಿರ್ಧಾರಿಸಿದ್ದಾರೆ” ಎಂದು ಡಾ. ವಾಂಖೇಡ್ಕರ್ ಹೇಳಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights