ಪಶ್ಚಿಮ ಬಂಗಾಳ: ಮೂವರು ಬಿಜೆಪಿ ಸಂಸದರಿಗೆ ಹೀನಾಯ ಸೋಲು!

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಐದು ಹಾಲಿ ಸಂಸದರ ಪೈಕಿ ಮೂವರು ಸಂಸದರು ಹೀನಾಯವಾಗಿ ಸೋಲನುಭವಿಸಿದ್ದಾರೆ.

ಬಿಜೆಪಿ ಸಂಸದರು ಹಾಗೂ ಪಕ್ಷದ ಸ್ಟಾರ್‌ ಅಭ್ಯರ್ಥಿಗಳಿದ್ದ ಸ್ವಪನ್ ದಾಸಗುಪ್ತಾ, ಲಾಕೆಟ್ ಚಟರ್ಜಿ ಹಾಗೂ ಬಾಬುಲ್ ಸುಪ್ರಿಯೋ ಅವರು ಟಿಎಂಸಿ ಅಭ್ಯರ್ಥಿಗಳ ವಿರುದ್ದ ಭಾರೀ ಅಂತರದಲ್ಲಿ ಸೋತಿದ್ದಾರೆ. ಈ ಮೂಲಕ ಬಂಗಾಳದ ಮತದಾರರು ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನೂ ತಿರಸ್ಕರಿಸಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿ ಸಂಸದರಾದ ಸ್ವಪನ್ ದಾಸಗುಪ್ತಾ, ಲಾಕೆಟ್ ಚಟರ್ಜಿ, ಬಾಬುಲ್ ಸುಪ್ರಿಯೋ, ನಿಶಿತ್ ಪ್ರಮಾಣಿಕ್ ಮತ್ತು ಜಗನ್ನಾಥ್‌ ಸರ್ಕಾರ್‌ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದರು.

ಈ ಐವರ ಪೈಕಿ, ಸ್ವಪನ್ ದಾಸಗುಪ್ತಾ ಅವರು ಹೂಗ್ಲಿ ಜಿಲ್ಲೆಯ ತಾರಕೇಶ್ವರ್ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿ ರಮೇಂದು ಸಿನ್ಹರಯ್ ಅವರ ಎದುರು 7,484 ಮತಗಳ ಅಂತರದಲ್ಲಿ ಸೋತಿದ್ದಾರೆ. ಹೂಗ್ಲಿ ಕ್ಷೇತ್ರದ ಸಂಸದರಾಗಿದ್ದ ಲಾಕೆಟ್ ಚಟರ್ಜಿ ಅವರು ಚಿನ್ಸುರಾಹ್ ಕ್ಷೇತ್ರದಲ್ಲಿ ಟಿಎಂಸಿಯ ಅಸಿತ್ ಮಜುಮ್ದಾರ್ ಅವರ ಎದುರು 18,417 ಮತಗಳ ಅಂತರದಿಂದ ಸೋಲನುಭವಿದ್ದಾರೆ. ಅಸನ್ಸೋಲ್ ಸಂಸದರಾಗಿದ್ದ ಬಾಬುಲ್ ಸುಪ್ರಿಯೋ ಅವರು ಟಿಎಂಸಿಯ ಅರೂಪ್ ಬಿಸ್ವಾಸ್ ಅವರ ಎದುರು 50,080 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಉಳಿದಂತೆ ನಿಶಿತ್ ಪ್ರಮಾಣಿಕ್ ಅವರು ಟಿಎಂಸಿಯ ಉದಯನ್ ಗುಹಾ ಅವರೆದುರು ಕೇವಲ 57 ಮತಗಳ ಅಂತರದಿಂದ ಗೆದ್ದಿದ್ದರೆ, ಸರ್ಕಾರ್ ಅವರು ಟಿಎಂಸಿಯ ಅಜೊಯ್ ದೇ ಅವರೆದುರು ಶಾಂತಿಪುರ ಕ್ಷೇತ್ರದಿಂದ 15,878 ಮತಗಳ ಅಂತರದಿಂದ ಗೆದ್ದಿದ್ದಾರೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಗೆದ್ದರೂ ಬಿಜೆಪಿಗೆ ಬಿಕ್ಕಟ್ಟು; ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಗ್ಗ ಜಗ್ಗಾಟ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights