ಸಿಡಿಲು ಬಡಿದು 22 ಆನೆಗಳ ದಾರುಣ ಸಾವು

ಮಳೆಯ ಅಬ್ಬರದ ನಡುವೆ ಸಿಡಿಲು ಬಡಿದು ಅಸ್ಸಾಂನ ನಾಗೋನ್ ಜಿಲ್ಲೆಯಲ್ಲಿ 22 ಆನೆಗಳು ಮೃತಪಟ್ಟಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

“ಬುಧವಾರ ರಾತ್ರಿ ಖಂಡಾಲಿ ಅಭಯಾರಣ್ಯ ಪ್ರದೇಶದಲ್ಲಿದ್ದ ಆನೆಗಳಿಗೆ ಸಿಡಿಲು ಬಡಿದು ಅವು 22 ಆನೆಗಳು ಮೃತಪಟ್ಟಿವೆ ಎಂದು” ಎಂದು ವನ್ಯಜೀವಿ ವಿಭಾಗದ ಮುಖ್ಯ ಸಂರಕ್ಷಣಾಧಿಕಾರಿ ಅಮಿತ್ ಶಾಯ್ ಮಾಹಿತಿ ನೀಡಿದ್ದಾರೆ.

“ಘಟನೆ ನಡೆದ ಪ್ರದೇಶ ದುರ್ಗಮವಾಗಿದ್ದು, ಗುರುವಾರ ಮಧ್ಯಾಹ್ನದ ತನಕ ನಮ್ಮ ತಂಡ ಅಲ್ಲಿಗೆ ತಲುಪಲು ಸಾಧ್ಯವಾಗಿಲ್ಲ. ಬೆಟ್ಟಪ್ರದೇಶವೊಂದರ ಮೇಲೆ 14, ಕೆಳಗೆ 8 ಆನೆಗಳ ಶವಗಳು ಪತ್ತೆಯಾಗಿದೆ” ಎಂದು ಅಮಿತ್ ಶಾಯ್ ವಿವರಣೆ ನೀಡಿದ್ದಾರೆ.

“ಪ್ರಾಥಮಿಕ ಮಾಹಿತಿಯಂತೆ ಆನೆಗಳು ಸಿಡಿಲು ಬಡಿದು ಮೃತಪಟ್ಟಿವೆ. ಶುಕ್ರವಾರ ಮೃತಪಟ್ಟ ಆನೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಖಚಿತ ಮಾಹಿತಿ ತಿಳಿಯಲಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ನೀಚತನ ಬಹಿರಂಗವಾಗಿದೆ; ಮರೆಮಾಚಲು ಬಿಜೆಪಿಗರು ಹರಸಾಹಸ ಪಡುತ್ತಿದ್ದಾರೆ: ಕಾಂಗ್ರೆಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights