FACT CHECK | ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದೃಶ್ಯಗಳನ್ನು ರಾಹುಲ್ ಗಾಂಧಿ ವೀಕ್ಷಿಸಿದ್ದು ನಿಜವೇ?

9 ಜೂನ್ 2024 ಭಾನುವಾರದಂದು ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಪ್ರಮಾಣವಚನ ಸ್ವೀಕರಿಸುತ್ತಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವೀಕ್ಷಿಸುತ್ತಿದ್ದರು ಎಂದು ಹೇಳಲಾದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

Rahul Gandhi

ಇದೇ ರೀತಿಯ ಪೋಸ್ಟ್‌ಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮೂರನೇ ಅವದಿಗೆ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾರ್ಯಕ್ರಮವನ್ನು ರಾಹುಲ್ ಗಾಂಧಿ ವೀಕ್ಷಿಸಿದ್ದಾರೆ ಎಂಬ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, ರಾಹುಲ್ ಗಾಂಧಿಯವರ ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್‌ನ ಹಿಂಭಾಗದಲ್ಲಿರುವ ಎಲ್‌ಸಿಡಿ ಡಿಸ್‌ಪ್ಲೇಯಲ್ಲಿ ಪ್ರದರ್ಶಿಸಲಾದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನದ ದೃಶ್ಯಗಳು 2019ರ ಪ್ರಮಾಣ ವಚನ ಸಮಾರಂಭದದ ವಿಡಿಯೋ ಎಂದು ತಿಳಿದು ಬಂದಿದೆ.

ರಿಪಬ್ಲಿಕ್‌ ದುನಿಯಾದ ವಿಡಿಯೋದ ಸ್ಕ್ರೀನ್‌ಶಾಟ್‌
ರಿಪಬ್ಲಿಕ್‌ ದುನಿಯಾದ ವಿಡಿಯೋದ ಸ್ಕ್ರೀನ್‌ಶಾಟ್‌

ರಾಹುಲ್ ಗಾಂಧಿಯವರ ವೈರಲ್ ಫೂಟೇಜ್‌ನ್ನು ಗೂಗಲ್‌ ಲೆನ್ಸ್‌ ಮೂಲಕ ಸರ್ಚ್ ಮಾಡಿದಾಗ, 6 ಮೇ 2024ರ ‘ರಿಪಬ್ಲಿಕ್‌ ದುನಿಯಾ‘ದ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋ ಲಭ್ಯವಾಗಿದೆ. ಇದರಲ್ಲಿ ಇದೇ ವಿಡಿಯೋ ಇದೆ. ಆದರೆ, ಎದುರಿಗಿರುವ ಎಲ್‌ಸಿಡಿ ಡಿಸ್ಪ್ಲೇ ಮಾತ್ರ ಆಫ್‌ ಆಗಿದೆ!

ರಾಹುಲ್‌ ಗಾಂಧಿ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನ ಸ್ಟ್ರೀನ್‌ಶಾಟ್‌
ರಾಹುಲ್‌ ಗಾಂಧಿ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನ ಸ್ಟ್ರೀನ್‌ಶಾಟ್‌

ಇದಲ್ಲದೆ, ಮೂಲ ವಿಡಿಯೋವನ್ನು ಏಪ್ರಿಲ್ 17, 2024ರಂದು ರಾಹುಲ್‌ ಗಾಂಧಿ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿಯೂ ಹಂಚಿಕೊಳ್ಳಲಾಗಿದೆ. “ಭಾರತದ ಬಗ್ಗೆ ಯೋಚನೆ, ಭಾರತಕ್ಕಾಗಿ ಹುಡುಕಾಟ!” ಎಂದು ಇದರಲ್ಲಿ ಹಿಂದಿಯಲ್ಲಿ ಬರೆಯಲಾಗಿದೆ. ಇದನ್ನೇ ರಾಹುಲ್‌ ಗಾಂಧಿ ಅವರ ಫೇಸ್‌ಬುಕ್‌ ಖಾತೆಗೂ ಅಪ್‌ಲೋಡ್ ಮಾಡಲಾಗಿದೆ.

 

ಅಮರ್‌ ಪ್ರಸಾದ್‌ ರೆಡ್ಡಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋದ ಸ್ಕ್ರೀನ್‌ಶಾಟ್‌
ಅಮರ್‌ ಪ್ರಸಾದ್‌ ರೆಡ್ಡಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋದ ಸ್ಕ್ರೀನ್‌ಶಾಟ್‌

ವೈರಲ್ ಫೂಟೇಜ್‌ ‘@amarprasadreddy’ ಎಂಬ ವಾಟರ್‌ಮಾರ್ಕ್ ಹೊಂದಿದ್ದು, ಇದನ್ನು ಪರಿಶೀಲಿಸಿದಾಗ ಅಮರ್‌ ಪ್ರಸಾದ್‌ ರೆಡ್ಡಿ (@amarprasadreddy) ಬಿಜೆಪಿಯ ಪದಾಧಿಕಾರಿ ಎಂದು ತನ್ನ ಭಯೋದಲ್ಲಿ ಅಪ್‌ಡೆಟ್ ಮಾಡಿಕೊಂಡಿದ್ದಾನೆ. ಈ ಪೋಸ್ಟ್‌ ಮೂಲಕ ರಾಹುಲ್ ಗಾಂಧಿಯನ್ನು ವ್ಯಂಗ್ಯ ಮಾಡಲು ಜೂನ್ 9 ರಂದು ಮಧ್ಯಾಹ್ನ 1:39 ಕ್ಕೆ ಪೋಸ್ಟ್‌ಅನ್ನು ಹಂಚಿಕೊಂಡು,ಇದು ಇಂದು ಸಂಜೆಯ ದೃಶ್ಯಗಳು ಎಂದು ಗೇಲಿ ಮಾಡುವ ಉದ್ದೇಶದಿಂದ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದನ್ನು ನೋಡುತ್ತಿರುವ ವೈರಲ್‌ ವಿಡಿಯೋವನ್ನು ಡಿಜಿಟಲ್ ಮೂಲಕ ಎಡಿಟ್‌ ಮಾಡಿ, ಲೋಕಸಭೆ ಚುನಾವಣೆಯ ಫಲಿತಾಂಶಗಳ ಬಗ್ಗೆ ಕಾಂಗ್ರೆಸ್ ನಾಯಕರನ್ನು ವ್ಯಂಗ್ಯ ಮಾಡುವ ಉದ್ದೇಶದಿಂದ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹಿಂದೂ ಧರ್ಮದ ವ್ಯಕ್ತಿಯೊಬ್ಬನನ್ನು ತನ್ನ ಮಕ್ಕಳ ಮುಂದೆಯೇ ಮುಸ್ಲಿಂ ವ್ಯಕ್ತಿ ಹತ್ಯೆ ಮಾಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights