FACT CHECK | ಗರ್ಬಾ ನೃತ್ಯ ಮಾಡುತ್ತಿದ್ದ ಮಹಿಳೆಯರ ಮೇಲೆ ಮುಸ್ಲಿಂ ಯುವಕರು ಕಲ್ಲು ತೂರಿದ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ

ಇತ್ತೀಚೆಗೆ ದೇಶಾದ್ಯಂತ ನವರಾತ್ರಿ ಹಬ್ಬ ನಡೆದಿದ್ದು ಇದರ ಬೆನ್ನಲ್ಲೇ ಮುಸ್ಲಿಮರು ಗುಜರಾತ್ ನಲ್ಲಿ ಗರ್ಬಾ ನೃತ್ಯ ನಡೆಸುತ್ತಿದ್ದವರ ಮೇಲೆ ಕಲ್ಲು ತೂರಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳನ್ನು  ಹಂಚಿಕೊಳ್ಳಲಾಗುತ್ತಿದೆ. ಈ ಘಟನೆಯ ನಂತರ ಪೊಲೀಸರು ಆರೋಪಿಗಳನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎನ್ನಲಾಗಿದೆ. 1 ನಿಮಿಷ 16 ಸೆಕೆಂಡುಗಳ ವೀಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದೆ.

Fact Check: ಗರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಯುವಕರನ್ನು ಥಳಿಸಿದ ಹಳೆಯ ವೀಡಿಯೋ ವೈರಲ್

ವಿಡಿಯೋದಲ್ಲಿ ಕಂಡುಬರುವಂತೆ ಕೆಲ ಯುವಕರನ್ನು ಪೊಲೀಸರು ಜನರ ಸಮ್ಮುಖದಲ್ಲಿ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಇದರಲ್ಲಿರುವ ಹೇಳಿಕೆಯಲ್ಲಿ “ಗುಜರಾತ್ ನಲ್ಲಿ ಗರ್ಭ ನೃತ್ಯ ಯಾತ್ರೆ ನಡೆಯುವಾಗ ಕಲ್ಲು ಎಸೆದ ಜಿಹಾದಿಗಳಿಗೆ ಅರಬ್ ಮಾದರಿಯಲ್ಲಿ ಸಾರ್ವಜನಿಕರ ಮದ್ಯೆ ಲಾಠಿ ರುಚಿ ತೋರಿಸಿದ ಗುಜರಾತಿ ಪೊಲೀಸ್ ರು” ಎಂದಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ ಮುಸ್ಲಿಮರು ಗುಜರಾತ್ ನಲ್ಲಿ ಗರ್ಬಾ ನೃತ್ಯ ನಡೆಸುತ್ತಿದ್ದವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆಯೇ ಎಂದು ಪರಿಶೀಲಿಸಲು, ವಿಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  ಡಿಸೆಂಬರ್ 5 2022 ರಂದು ಎನ್‌ಡಿಟಿವಿ ಪ್ರಕಟಿಸಿದ ವರದಿಯಲ್ಲಿ ವೈರಲ್‌ ವಿಡಿಯೋ ಹೋಲುವ ದೃಶ್ಯಗಳು ಲಭ್ಯವಾಗಿವೆ.
ವರದಿಯ ಪ್ರಕಾರ, ಗುಜರಾತ್‌ನ ಹಳ್ಳಿಯೊಂದರಲ್ಲಿ ಮುಸ್ಲಿಮರು ಮತದಾನವನ್ನು ಬಹಿಷ್ಕರಿಸಿದ್ದಾರೆ, ಅಲ್ಲಿ ಗಾರ್ಬಾ ಸಮಯದಲ್ಲಿ ಕಲ್ಲು ತೂರಾಟದ ಆರೋಪದ ಮೇಲೆ ಪೊಲೀಸರು ಕೆಲವರನ್ನು ಸಾರ್ವಜನಿಕವಾಗಿ ಥಳಿಸಿದ್ದರು ಎಂದಿದೆ. ಈ ಬಗ್ಗೆ ಹೆಚ್ಚಿನ ಹುಡುಕಾಟ ನಡೆಸಿದಾಗ ಘಟನೆಯು 2022ರಲ್ಲಿ ನಡೆದಿದ್ದಾಗಿ ಹಲವು ವರದಿಗಳು ಲಭ್ಯವಾಗಿವೆ. ಈ ಪ್ರಕರಣವು ಗುಜರಾತ್‌ನ ಉಂಧೇಲಾ ಗ್ರಾಮದಲ್ಲಿ ನಡೆದಿದ್ದು ಗರ್ಬಾ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಕೆಲವು ಮುಸ್ಲಿಂ ಯುವಕರನ್ನು ಕಂಬಕ್ಕೆ ಕಟ್ಟಿ ಪೊಲೀಸರು ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
Fact Check: ಗರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಯುವಕರನ್ನು ಥಳಿಸಿದ ಹಳೆಯ ವೀಡಿಯೋ ವೈರಲ್


ಅಕ್ಟೋಬರ್ 4, 2022 ರಂದು  ಇಂಡಿಯಾ ಟುಡೇ ತನ್ನ ಯೂಟ್ಯೂಬ್‌ ನಲ್ಲಿ ಪ್ರಕಟಿಸಿದ ವರದಿ ಲಭ್ಯವಾಗಿದ್ದು, ಗುಜರಾತ್‌ನ ಖೇಡಾದಲ್ಲಿ ಗರ್ಬಾ ಕಾರ್ಯಕ್ರಮದ ಸಂದರ್ಭದಲ್ಲಿ ಕೋಮು ಘರ್ಷಣೆ ಸಂಭವಿಸಿದೆ ಎಂದು ಹೇಳಿದೆ. ಅನಂತರ ಗುಜರಾತ್ ಪೊಲೀಸರು ಆರೋಪಿಗಳನ್ನು ಥಳಿಸಿದ್ದಾರೆ. ಖೇಡಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಗರ್ಹಿಯಾ ಅವರು ಹೇಳುವಂತೆ “ಆರಿಫ್ ಮತ್ತು ಜಹೀರ್ ಎಂಬ ಇಬ್ಬರು ವ್ಯಕ್ತಿಗಳ ನೇತೃತ್ವದ ಜನರ ಗುಂಪು ನವರಾತ್ರಿ ಗರ್ಬಾ ಸ್ಥಳಕ್ಕೆ ಪ್ರವೇಶಿಸಿ ಗಲಾಟೆ ಮಾಡಲು ಪ್ರಾರಂಭಿಸಿತು. ಅವರು ಕಲ್ಲು ತೂರಾಟವನ್ನೂ ಮಾಡಿದರು. ಎಂದಿದೆ.

Fact Check: ಗರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಯುವಕರನ್ನು ಥಳಿಸಿದ ಹಳೆಯ ವೀಡಿಯೋ ವೈರಲ್

ವರದಿಯ ಪ್ರಕಾರ, ಅಕ್ಟೋಬರ್ 3, 2022 ರ ರಾತ್ರಿ, ಖೇಡಾದ ಉಂಧೇಲಾ ಗ್ರಾಮದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಗರ್ಬಾ ಸಮಾರಂಭದಲ್ಲಿ ಕಲ್ಲು ತೂರಾಟದ ಘಟನೆ ಬೆಳಕಿಗೆ ಬಂದಿದೆ. ಅದರ ನಂತರ ಪೊಲೀಸರು ಕಾರ್ಯಕ್ರಮದ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಒಂಬತ್ತು ಜನರನ್ನು ಬಂಧಿಸಿದರು ಮತ್ತು ಮಂಗಳವಾರ, ಅಕ್ಟೋಬರ್ 4, 2022 ರಂದು ಗ್ರಾಮಸ್ಥರ ಮುಂದೆ ಹಾಜರುಪಡಿಸಿದರು. ಅಷ್ಟರಲ್ಲಿ ಪೊಲೀಸರು ಒಂಬತ್ತು ಮಂದಿಯನ್ನು ಒಬ್ಬೊಬ್ಬರಾಗಿ ಕರೆದು ಕಂಬಕ್ಕೆ ಕಟ್ಟಿ ಎಲ್ಲರ ಮುಂದೆ ಥಳಿಸಿದ್ದಾರೆ. ಬಳಿಕ ಅಲ್ಲಿದ್ದ ಗ್ರಾಮಸ್ಥರು ‘ಗುಜರಾತ್ ಪೊಲೀಸ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದರು ಎಂದಿದೆ.

Fact Check: ಗರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಯುವಕರನ್ನು ಥಳಿಸಿದ ಹಳೆಯ ವೀಡಿಯೋ ವೈರಲ್

ಅಕ್ಟೋಬರ್ 2022 ರಲ್ಲಿ ಎನ್‌ಡಿಟಿವಿ,  ದಿ ಹಿಂದೂ  ಮತ್ತು  ವೈರ್ ಪ್ರಕಟಿಸಿದ ಘಟನೆಯ ಕುರಿತ ವರದಿಗಳು  ವೈರಲ್ ಕ್ಲಿಪ್ ಎರಡು ವರ್ಷಗಳಷ್ಟು ಹಳೆಯದು ಎಂಬುದನ್ನು ದೃಢಪಡಿಸಿವೆ. ಅಕ್ಟೋಬರ್ 10, 2022 ರಂದು ದಿ ವೈರ್ ಪ್ರಕಟಿಸಿದ ವರದಿಯ ಪ್ರಕಾರ, ಗುಜರಾತ್ ಪೊಲೀಸ್ ಉನ್ನತ ಅಧಿಕಾರಿಗಳು ಸಾರ್ವಜನಿಕವಾಗಿ ಆರೋಪಿಗಳನ್ನು ಥಳಿಸಿದ ಪೊಲೀಸರ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ ಎಂದು ಉಲ್ಲೇಖಿಸಿದೆ.

Fact Check: ಗರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಯುವಕರನ್ನು ಥಳಿಸಿದ ಹಳೆಯ ವೀಡಿಯೋ ವೈರಲ್

ಒಟ್ಟಾರೆಯಾಗಿ ಹೇಳುವುದಾದರೆ, ಗುಜರಾತ್‌ನಲ್ಲಿ ನಡೆದ ಗರ್ಬಾ ಕಾರ್ಯಕ್ರಮದಲ್ಲಿ ಕಲ್ಲು ತೂರಾಟ ನಡೆಸಿದ ಪುಂಡರಿಗೆ ಲಾಠಿ ರುಚಿ ತೋರಿಸಿದ ಹಳೆಯ 2022ರ ವಿಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಮಾಯಣ ಕಾಲದ ಕುಂಭಕರ್ಣನ ಖಡ್ಗ ಪತ್ತೆ ಎಂಬ ಪೋಸ್ಟ್‌ನ ಅಸಲೀಯತ್ತೇನು ಗೊತ್ತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights