FACT CHECK | ಪ್ರವಾದಿ ಮುಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದಕ್ಕೆ ವಿದೇಶದಲ್ಲಿ ಯತಿ ನರಸಿಂಹಾನಂದನ ವಿರುದ್ದ ಪ್ರತಿಭಟನೆ ನಡೆದಿದ್ದು ನಿಜವೇ?

ದಾಸ್ನಾ ದೇವಾಲಯದ ಪೀಠಾಧಿಪತಿ ಯತಿ ನರಸಿಂಹಾನಂದ ಪ್ರವಾದಿ ಮುಹಮ್ಮದ್ ಮತ್ತು ಕುರಾನ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಯತಿ ನರಸಿಂಹಾನಂದ ಅವರನ್ನು ಬಂಧಿಸುವಂತೆ ಒತ್ತಾಯಿಸಿ ವಿದೇಶದಲ್ಲಿ ಮುಸ್ಲಿಮರು ಬೃಹತ್ ಪ್ರತಿಭಟನೆ ನಡೆಸಿದ ದೃಶ್ಯಗಳು ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ದಾಸ್ನಾ ದೇವಾಲಯದ ಪೀಠಾಧಿಪತಿ ಯತಿ ನರಸಿಂಹಾನಂದ ಮಹಾರಾಜ್ ಅವರು ಕಳೆದ ತಿಂಗಳು ದೇವಸ್ಥಾನವೊಂದರಲ್ಲಿ ಪ್ರವಚನ ನೀಡುವ ವೇಳೆ ಪ್ರವಾದಿ ಮತ್ತು ಕುರಾನ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಹಾಗಿದ್ದರೆ ಯತಿ ನರಸಿಂಹಾನಂದ ವಿರುದ್ದ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ದಾಸ್ನಾ ದೇವಾಲಯದ ಪೀಠಾಧಿಪತಿ ಯತಿ ನರಸಿಂಹಾನಂದ ವಿರುದ್ದ ವಿದೇಶದಲ್ಲಿ ಮುಸ್ಲಿಮರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿರುವುದು ನಿಜವೇ ಎಂದು ಪರಿಶೀಲಿಸಲು, “ಯೆಮೆನ್ ಪ್ರತಿಭಟನೆ ಯತಿ ನರಸಿಂಗಾನಂದ” ಎಂಬ ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಾಂತಹ ಪ್ರರತಿಭಟನೆ ಬಗ್ಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳನ್ನು ಲಭ್ಯವಾಗಿಲ್ಲ.


ನಂತರ ಕೀಫ್ರೇಮ್‌ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 23, 2024 ರಂದು ಜೋರ್ಡಾನ್ ಮೂಲದ ರೋಯಾ ನ್ಯೂಸ್ ಇಂಗ್ಲಿಷ್‌ನ ಈ ಯುಟ್ಯೂಬ್ ವಿಡಿಯೋ ಲಭ್ಯವಾಗಿದೆ.  “ಯೆಮೆನ್‌ನ ಹೌತಿಗಳು ಸನಾ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡ ಹಿನ್ನಲೆಯಲ್ಲಿ ದಶಮಾನೋತ್ಸವ ಆಚರಿಸಿ ಮಿಲಿಟರಿ ಮೆರವಣಿಗೆಯನ್ನು ನಡೆಸುತ್ತಾರೆ.” ಎಂದು ಉಲ್ಲೇಖಿಸಲಾಗಿದೆ.

ಸ್ಕ್ರೀನ್‌ಶಾಟ್‌ಗಳ ಹೋಲಿಕೆಯು ಬ್ಯಾನರ್, ಧ್ವಜ, ಹಿನ್ನೆಲೆಯಲ್ಲಿ ಕಟ್ಟಡಗಳು, ಬಿಲ್‌ಬೋರ್ಡ್ ಮತ್ತು ಭಾಗವಹಿಸುವವರು ಧರಿಸಿರುವ ಬಿಳಿ ಕ್ಯಾಪ್‌ಗಳನ್ನು ಪರಿಗಣಿಸಿ ಅದೇ ಮೆರವಣಿಗೆ ಎಂದು ತೋರಿಸುತ್ತದೆ.

 

ಮೆರವಣಿಗೆಯ ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು, ಯೆಮೆನ್ ಹೌತಿ ಗುಂಪಿನ ನೂರಾರು ಅನುಯಾಯಿಗಳು ರಾಜಧಾನಿ ಸನಾವನ್ನು ಗುಂಪು ವಶಪಡಿಸಿಕೊಂಡ ಹತ್ತನೇ ವಾರ್ಷಿಕೋತ್ಸವದ ಸ್ಮರಣಾರ್ಥ, ಯೆಮೆನ್ ಮತ್ತು ಪ್ಯಾಲೆಸ್ಟೈನ್ ಧ್ವಜಗಳನ್ನು ಬೀಸುತ್ತಾ,  ಸಮವಸ್ತ್ರಗಳನ್ನು ಧರಿಸಿ, ಶಸ್ತ್ರಾಸ್ತ್ರಗಳು ಮತ್ತು ಫಲಕಗಳನ್ನು ಹಿಡಿದು ಪರೇಡ್‌ನಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಒಟ್ಟಾರೆಯಾಗ ಹೇಳುವುದಾದರೆ, ದಶಮಾನೋತ್ಸವದ ಅಂಗವಾಗಿ, ಯೆಮೆನ್ ಹೌತಿ ಗುಂಪಿನ ಸಾವಿರಾರು ಅನುಯಾಯಿಗಳು ರಾಜಧಾನಿ ಸನಾದಲ್ಲಿ ಭಾಗವಹಿಸಿರುವ ಚಿತ್ರವನ್ನು, ಪ್ರವಾದಿ ಮುಹಮ್ಮದ್ ಮತ್ತು ಕುರಾನ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಯತಿ ನರಸಿಂಹಾನಂದನನ್ನು ಬಂಧಿಸುವಂತೆ ಒತ್ತಾಯಿಸಿ ಸೇರಿರುವ ಜನ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ :


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights