FACT CHECK | ಸೇನೆ ವಾಪಸ್ಸಾತಿ ವೇಳೆ ಭಾರತ-ಚೀನಾ ಸೈನಿಕರು ಒಟ್ಟಿಗೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದು ನಿಜವೇ?

ಭಾರತ-ಚೀನಾ ಗಡಿಯಲ್ಲಿ ಸೇನೆ ಹಿಂತೆಗೆತ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳನ್ನು ಹಂಚಿಕೊಳ್ಳಲಾಗುತ್ತಿದೆ.

Fact Check: ಭಾರತ-ಚೀನ ಗಡಿಯಲ್ಲಿ ಸೇನೆ ಹಿಂತೆಗೆತ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆಯೇ? ಇಲ್ಲ, ವೈರಲ್ ಪೋಸ್ಟ್ ಸುಳ್ಳು

“ಇತ್ತೀಚಿಗೆ ಭಾರತ ಮತ್ತು ಚೀನಾ ಸರ್ಕಾರದ ಅಧಿಕಾರಿಗಳ ಮಟ್ಟದಲ್ಲಿ ಆದ ಒಪ್ಪಂದದ ಪ್ರಕಾರ (ಇದನ್ನು ನಂತರ ಪ್ರಧಾನಿ ಶ್ರೀ ಮೋದಿ ಮತ್ತು ಚೀನಾ ಅಧ್ಯಕ್ಷ ಷೀ ಜಿಂಪಿಂಗ್ ಕಜ಼ಾನ್ ಸಮ್ಮೇಳನದಲ್ಲಿ ಅನುಮೋದಿಸಿದ್ದಾರೆ) ಭಾರತದ ಮತ್ತು ಚೀನೀಯರ ಹೆಚ್ಚುವರಿ ಸೈನಿಕರು ಗಡಿ ಭಾಗದಿಂದ ಹಿಂದಿರುಗಿ ಹೋಗಲು ಶುರು ಮಾಡಿದ್ದಾರೆ. ಅಂತಹ ಒಂದು ಕಾರ್ಯಕ್ರಮದಲ್ಲಿ ಭಾರತ ಚೀನೀ ಸೈನಿಕರು ಪರಸ್ಪರ ಔತಣ ಕೂಟ ಏರ್ಪಡಿಸಿ ನಂತರ ಜೊತೆಯಾಗಿ ‘ಜೈ ಶ್ರೀ ರಾಮ್’ ಘೋಷಣೆ ಮೊಳಗಿಸಿ ತಮ್ಮ ವಾಪಾಸಾತಿಯನ್ನು ಶುರು ಮಾಡಿದ್ದಾರೆ! “ ಎಂದು ಪ್ರತಿಪಾದಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಅಕ್ಟೋಬರ್ 25, 2024 ರ ಎಕನಾಮಿಕ್ ಟೈಮ್ಸ್ ವರದಿ ಲಭ್ಯವಾಗಿದೆ. ಗಡಿಯ ಎರಡೂ ಬದಿಗಳಲ್ಲಿನ ಸೈನಿಕರು ಪೂರ್ವ ಲಡಾಖ್ ನ ಡೆಪ್ಸಾಂಗ್ ಮತ್ತು ಡೆಮ್ಚೋಕ್ನಲ್ಲಿ ಹಿಂತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಹೇಳಿದೆ.
Fact Check: ಭಾರತ-ಚೀನ ಗಡಿಯಲ್ಲಿ ಸೇನೆ ಹಿಂತೆಗೆತ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆಯೇ? ಇಲ್ಲ, ವೈರಲ್ ಪೋಸ್ಟ್ ಸುಳ್ಳು
ಎಕನಾಮಿಕ್‌ ಟೈಮ್ಸ್ ವರದಿ

“ಉಭಯ ದೇಶಗಳ ನಡುವಿನ ಒಪ್ಪಂದಗಳ ಪ್ರಕಾರ, ಭಾರತೀಯ ಪಡೆಗಳು ಆಯಾ ಪ್ರದೇಶಗಳಲ್ಲಿನ ಹಿಂದಿನ ಸ್ಥಳಗಳಿಗೆ ಉಪಕರಣಗಳನ್ನು ಹಿಂತೆಗೆದುಕೊಳ್ಳಲು ಪ್ರಾರಂಭಿಸಿವೆ” ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ ಎಂದಿದೆ.

ಅನಂತರ ನಾವು ಗೂಗಲ್ ಲೆನ್ಸ್ನಲ್ಲಿ ವೈರಲ್ ವಿಡಿಯೋದ ಕೀಫ್ರೇಮ್‌ ಗಳನ್ನು ತೆಗೆದು ಸರ್ಚ್ ಮಾಡಿದಾಗ, ಜನವರಿ 22, 2024 ರಂದು @chatterjeea330 ಅವರು ಹಂಚಿಕೊಂಡ ಎಕ್ಸ್ ಪೋಸ್ಟ್ ಲಭ್ಯವಾಗಿದೆ. ಭಾರತ ಮತ್ತು ಚೀನಾದ ಸೈನಿಕರು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುತ್ತಿರುವ ವೈರಲ್ ವಿಡಿಯೋವನ್ನು ಹೋಲುವಂತಿತ್ತು.

Fact Check: ಭಾರತ-ಚೀನ ಗಡಿಯಲ್ಲಿ ಸೇನೆ ಹಿಂತೆಗೆತ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆಯೇ? ಇಲ್ಲ, ವೈರಲ್ ಪೋಸ್ಟ್ ಸುಳ್ಳು
@chatterjeea330 ಎಕ್ಸ್ ಪೋಸ್ಟ್

ಇದರೊಂದಿಗೆ 2024 ರ ಜನವರಿಯಲ್ಲಿ @theaffairsinternational2108 ಅವರು ಪೋಸ್ಟ್ ಮಾಡಿದ ಯೂಟ್ಯೂಬ್‌ ವಿಡಿಯೋದಲ್ಲಿಯೂ ವೈರಲ್ ಕ್ಲಿಪ್ ಹೊಂದಿರುವುದನ್ನು ಕಾಣಬಹುದು.

Fact Check: ಭಾರತ-ಚೀನ ಗಡಿಯಲ್ಲಿ ಸೇನೆ ಹಿಂತೆಗೆತ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆಯೇ? ಇಲ್ಲ, ವೈರಲ್ ಪೋಸ್ಟ್ ಸುಳ್ಳು
@theaffairsinternational2108 ಯೂಟ್ಯೂಬ್‌ ಸ್ಕ್ರೀನ್‌ ಗ್ರಾಬ್

 

ಜನವರಿ 23, 2024 ರಂದು ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, “ಚೀನಾದ ಸೈನಿಕರು ಭಾರತೀಯ ಸೈನಿಕರೊಂದಿಗೆ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ‘ಜೈ ಶ್ರೀ ರಾಮ್’ ಎಂಬ ಹಿಂದೂ ಘೋಷಣೆಯನ್ನು ಕೂಗುತ್ತಿರುವ ದಿನಾಂಕವಿಲ್ಲದ ವಿಡಿಯೋವೊಂದು ಅಪ್‌ಲೋಡ್‌ ಆಗಿದೆ. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ದಿನದಂದು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋಗೆ ಭಾರತೀಯ ಸೇನೆಯಾಗಲೀ ಅಥವಾ ಚೀನಾದ ಮಿಲಿಟರಿಯಾಗಲೀ ಈವರೆಗೆ ಪ್ರತಿಕ್ರಿಯಿಸಿಲ್ಲ.

Fact Check: ಭಾರತ-ಚೀನ ಗಡಿಯಲ್ಲಿ ಸೇನೆ ಹಿಂತೆಗೆತ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆಯೇ? ಇಲ್ಲ, ವೈರಲ್ ಪೋಸ್ಟ್ ಸುಳ್ಳು
ಹಿಂದೂಸ್ತಾನ್‌ ಟೈಮ್ಸ್ ವರದಿ

 

ಇದೇ ರೀತಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಜನವರಿ 2024 ರಲ್ಲಿ ವೀಡಿಯೋವನ್ನು ಹಂಚಿಕೊಂಡಿರುವುದನ್ನು   ಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು. ಭಾರತ-ಚೀನಾ ಗಡಿಯಲ್ಲಿ ಇತ್ತೀಚೆಗೆ ನಡೆದ ಸೇನೆಯ ಹಿಂತೆಗೆತದ ಸಂದರ್ಭದ ವೀಡಿಯೋ ಇದಲ್ಲ ಎಂದು ನ್ಯೂಸ್‌ ಚೆಕ್ಕರ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತ-ಚೀನಾ ಗಡಿಯಲ್ಲಿ ಸೇನೆ ವಾಪಸ್ಸಾತಿಯ ಸಂದರ್ಭದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಲಾಗಿದೆ ಎಂದು ಹಳೆಯ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ದೇವೇಂದ್ರ ಫಡ್ನವೀಸ್ ಗನ್ ಹಿಡಿದ ಹಳೆಯ ಪೋಸ್ಟರ್‌ಅನ್ನು ಬಾಬಾ ಸಿದ್ದಿಕಿ ಹತ್ಯೆಗೆ ಲಿಂಕ್ ಮಾಡಿ ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights