Categories
Breaking News District National Political State

ಕೆಪಿಸಿಸಿ ಕಿರೀಟ ಯುದ್ಧ : ಮಂಕಾಯ್ತಾ ಡಿಕೆ ಶಿವಕುಮಾರ್ ಕನಸು…?

ಕೆಪಿಸಿಸಿ ಅಧ್ಯಕ್ಷ ಪಟ್ಟ ಡಿಕೆ ಶಿವಕುಮಾರ್ ಗೋ ಅಥವಾ ಎಂಬಿ ಪಾಟೀಲ್ ಗೋ..? ಇ ಬಗ್ಗೆ ಸಾಕಷ್ಟು ಚರ್ಚೆ ರಾಜ್ಯ ರಾಜಕೀಯದಲ್ಲಿ ಸೃಷ್ಟಿಯಾಗಿದೆ. ಈ ವಿಚಾರವಾಗಿ ಹೈಕಮಾಂಡ ಜೊತೆ ಚರ್ಚೆಗಿಳಿದ ಸಿದ್ದು ಸೂಚಿಸಿದ ಹೆಸರು ಯಾವುದು..? ದೆಹಲಿಯಲ್ಲಿ ಮಂಗಳವಾರ ಸಿದ್ದು ಮಾಡಿದ್ದೇನು..? ದೆಹಲಿಯಲ್ಲಿ ಸಿದ್ದರಾಮಯ್ಯ ಅಧಿನಾಯಕಿಗೆ ಹೇಳಿದ್ದೇನು…? ಏನಿದ್ದು ಕೆಪಿಸಿಸಿ ಕಿರೀಟ್ ಯುದ್ಧ.. ಸಿದ್ದರಾಮಯ್ಯ ದೆಹಲಿ ಆಡಿದ ಗೇಮ್ ಯಾವುದು..? ಅನ್ನೋ ಪ್ರಶ್ನೆಗೆ ಉತ್ತರ ಸಾಕಷ್ಟು ಕುತೂಹಲ ಕೆರಳಿಸಿದೆ.

ಕರ್ನಾಟಕದ ಕಾಂಗ್ರೆಸ್ ರಾಜಕಾರಣದ ಬಗ್ಗೆ ಮಾತನಾಡುತ್ತಾ ಹೋದ್ರೆ ಕೆಪಿಸಿಸಿ ಪಟ್ಟದ ಗುಂಗು ಸದ್ಯ ಗುಲ್ಲೆದ್ದಿದೆ. ಮಂಗಳವಾರ ದೆಹಲಿಯಲ್ಲಿ ಬೀಡುಬಿಟ್ಟ ಸಿದ್ದು ಮಾಡಿದ ತಂತ್ರಗಾರಿಕೆಗೆ ಮೂಲ ಕಾಂಗ್ರೆಸ್ಸಿಗರ ದಿಕ್ಕು ಬದಲಾದಂತೆ ಕಾಣ್ಣುತ್ತಿದೆ.

ಹೌದು.. 2019 ಡಿ9 ರಂದು 15 ಕ್ಷೇತ್ರಗಳ ಉಚನುಮಾವಣೆಯಲ್ಲಿ ಕಾಂಗ್ರೆಸ್ 2ಸ್ಥಾನ ಪಡೆದುಕೊಂಡು ಹೀನಾಯ ಸೋಲು ಅನುಭವಿಸಿದ ಹೊಣೆ ಹೊತ್ತು ದಿನೇಶ್ ಗುಂಡೂರುರಾವ್ ಹಾಗೂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟದ್ದರು. ಇದೇ ಸ್ಥಾನಕ್ಕೆ ಸದ್ಯ ಕಾಂಗ್ರೆಸ್ ನಾಯಕರಲ್ಲಿ ಲಾಬಿ ನಡೆದಿದೆ.

ಈ ಬಗ್ಗೆ ಚರ್ಚೆ ಮಾಡಲು ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಹೊಸ ಗೇಮ್ ಆಡಿದ್ದಾರೆ ಎನ್ನಲಾಗುತ್ತಿದೆ. ಈ ಗೇಮ್ ನಲ್ಲಿ  ಡಿಕೆ ಕನಸನ್ನು ಮಂಕಾಗಿದೆ.

ಹೌದು… ಕೆಪಿಸಿಸಿ ಕಿರೀಟದ ಯುದ್ಧದ ದಿಕ್ಕು ಬದಲಿಸಿದ್ರಾ ಸಿದ್ದು.. ರಾಜೀನಾಮೆಯ ಬಳಿಕೆ ಸಿದ್ದರಾಮಯ್ಯ ಕಥೆ ಮುಗಿತೂ ಅಂತ ಕೆಲ ನಾಯಕರು ಬೀಗುತ್ತಿದ್ದರು. ಆದರೆ ಡಿ 16 ರ ಸಂಜೆ ದೆಹಲಿಯಿಂದ ಬಂದ ಒಂದು ಫೋನ್ ಕಾಲ್ ನಿಂದ ಸಿದ್ದರಾಮಯ್ಯ ಅಸಲಿ ಆಟ ಶುರು ಮಾಡಿದ್ದಾರೆ. ಕೆ.ಹೆಚ್ ಮುನಿಯಪ್ಪ ಹಾಗೂ ಡಿಕೆ ಶಿವಕುಮಾರ್ ಜೊತೆ ಎಂಬಿ ಪಾಟೀಲ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸಿದ್ದರು.

ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಎಂ.ಬಿ ಪಾಟೀಲ್‌ಗೆ ನೀಡಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ದೆಹಲಿಯಲ್ಲಿ ಮಂಗಳವಾರ ಸೋನಿಯಾ ಭೇಟಿ ಮಾಡಿದ್ದ ಸಿದ್ದರಾಮಯ್ಯ ಪಕ್ಷ ಸಂಘಟನೆ ಹಾಗೂ ಹೊಂದಾಣಿಗೆ ದೃಷ್ಟಿಯಲ್ಲಿ ಡಿ.ಕೆ ಶಿವಕುಮಾರ್‌ ಬದಲಾಗಿ ಎಂ.ಬಿ ಪಾಟೀಲ್‌ ಅವರ ಆಯ್ಕೆ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸೋನಿಯಾ ಗಾಂಧಿ ಅವರ ಜೊತೆಗೆ ಸುಮಾರು 45 ನಿಮಿಷಗಳ ಕಾಲ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಅದಕ್ಕೂ ಮೊದಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಹಾಗೂ ಅಹ್ಮದ್ ಪಟೇಲ್ ಜೊತೆಗೂ ಸುದೀರ್ಘವಾಗಿ ಸಿದ್ದರಾಮಯ್ಯ ಅವರು ಮಾತನಾಡಿದ್ದರು.

ಮಾತುಕತೆಯ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ನಾಯಕ ಸ್ಥಾನವನ್ನು ಮುಂದುವರಿಸಿಕೊಂಡು ಹೋಗುವಂತೆ ಸಿದ್ದರಾಮಯ್ಯ ಅವರಿಗೆ ಸೋನಿಯಾ ಗಾಂಧಿ ಸೂಚಿಸಿದ್ದಾರೆಂದು ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ಬದಲಾಗಿ ತನ್ನ ಆಪ್ತರಾದ ಎಂಬಿ ಪಾಟೀಲ್‌ ಅಥವಾ ಕೃಷ್ಣ ಭೈರೇಗೌಡ ಅವರಿಗೆ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಕೆಪಿಸಿಸಿ ಪಟ್ಟಕ್ಕಾಗಿ ಡಿಕೆಶಿ ಹಾಗೂ ಎಂಬಿಪಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು ಹಿರಿಯ ಮುಖಂಡರು ಡಿಕೆಶಿ ಪರವಾಗಿ ಒಲವು ವ್ಯಕ್ತಪಡಿಸಿದ್ದರೆ ಸಿದ್ದರಾಮಯ್ಯ ಬಣ ಎಂಬಿಪಿಗೆ ಪಟ್ಟಕಟ್ಟುವ ಉತ್ಸಾಹದಲ್ಲಿದೆ.

ಒಂದು ವೇಳೆ ಡಿಕೆ ಶಿವಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷದ ಹಿಡಿತ ಸಿದ್ದರಾಮಯ್ಯ ಕೈ ತಪ್ಪಿ ಹೋಗುತ್ತದೆ. ಈ ಕಾರಣಕ್ಕಾಗಿ ಎಂಬಿ ಪಾಟೀಲ್‌ ಅವರಿಗೆ ನೀಡಿದರೆ ಸಿದ್ದರಾಮಯ್ಯ ಹಿಡಿತದಲ್ಲೇ ಪಕ್ಷ ಮುಂದುವರಿಯಲಿದ್ದು ಲಿಂಗಾಯತ ಸಮುದಾಯವನ್ನು ಒಳಗೊಂಡಂತೆ ಆಗುತ್ತದೆ ಎಂಬುವುದು ಸಿದ್ದರಾಮಯ್ಯ ಬಣದ ವಾದ.

ಒಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಮತ್ತೆ ಮನಸ್ತಾಪಗಳು ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದ್ದು. ಮುಂದಾಗುವ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.

Categories
Breaking News District Political State

ಜೆಡಿಎಸ್ ಗೆ ಕಮರಿದ ಮಂಡ್ಯ ಮನ್ಮುಲ್ ಅಧಿಕಾರದ ಕನಸು..?

ಮಂಡ್ಯ ಮನ್ಮುಲ್ ಅಧಿಕಾರದ ಕನಸು ಜೆಡಿಎಸ್ ಗೆ ಕಮರಿ ಹೋದಂತೆ ಕಾಣುತ್ತಿದೆ.

ಮನ್ಮುಲ್ ನ ಜೆಡಿಎಸ್ ನಿರ್ದೇಶಕ  ಬಿಜೆಪಿ ಸೇರ್ಪಡೆಗೆ ಸಿದ್ದರಾಗಿದ್ದಾರೆ. ಬೆಂಗಳೂರಿನಲ್ಲಿ ಜೆಡಿಎಸ್ ಬೆಂಬಲಿತ ಮನ್ಮುಲ್ ನಿರ್ದೇಶಕನಾಗಿರೋ ಎಸ್ಪಿ ಸ್ವಾಮಿ ಸಿ.ಎಂ‌.ಯಡಿಯೂರಪ್ಪ ರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಕಚೇರಿ ಕಾರ್ಯಾಲಯದಲ್ಲಿ ಬಿಜೆಪಿ ಸೇರ್ಪಡೆಗೆ ಸಿದ್ದತೆ ನಡೆಸಿದ್ದಾರೆ ಎನ್ನುವ ಮಾಹಿತಿ  ಆಪ್ತ ಮೂಲಗಳಿಂದ ಲಭ್ಯವಾಗಿದೆ.

ಮನ್ಮುಲ್ ಚುನಾವಣೆಯಲ್ಲಿ ೮ ಸ್ಥಾನ ಗೆದ್ರು ಜೆಡಿಎಸ್ ಗೆ ಅಧಿಕಾರ ಕೈ ತಪ್ಪುತ್ತದೆ. ಮದ್ದೂರು ಕ್ಷೇತ್ರದ ಜೆಡಿಎಸ್ ಶಾಸಕ ಡಿಸಿ ತಮ್ಮಣ್ಣ‌ ಭಂಟನಾಗಿದ್ದ ಸ್ವಾಮಿ ಬಿಜೆಪಿ ಸೇರ್ಪಡೆ ಯಿಂದ ಜೆಡಿಎಸ್ ಪಕ್ಷದಲ್ಲಿ ಆತಂಕ ಶುರುವಾಗಿದೆ.