ದಸರಾ ಉದ್ಘಾಟನಾ ದಿನದಂದೇ ಯುವಕರ ಮಾರಾಮಾರಿ…..!

ದಸರಾ ಉದ್ಘಾಟನಾ ದಿನದಂದೇ ಯುವಕರ ಮಾರಾಮಾರಿಯಾದ ಘಟನೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಎರಡು ಯುವಕರ  ಗುಂಪುಗಳ ನಡುವೆ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿದ್ದ ಯುವಕರಿಂದ ಗಲಾಟೆ ನಡೆದಿದೆ. 10ಕ್ಕೂ ಹೆಚ್ಚಿನ ಯುವಕರಿಂದ ಗಲಾಟೆಯಾಗಿದ್ದು ಪ್ರಯಾಣಿಕನೋರ್ವನಿಂದ ಗಲಾಟೆಯ ವಿಡಿಯೋ ಸೆರೆಯಾಗಿದೆ. ಸ್ಥಳದಲ್ಲಿ ಇದ್ದ ಇಬ್ಬರೂ ಯುವಕರ ದ್ವಿಚಕ್ರ ವಾಹನವನ್ನು ದ್ವಂಸಗೊಳಿಸಿ, ರಾತ್ರಿ ವೇಳೆಯಲ್ಲಿ ಇಬ್ಬರು ಯುವಕರಿಗೆ ಮನಬಂದಂತೆ ಯುವಕರು ಚಚ್ಚಿದ್ದಾರೆ. ಸಾರ್ವಜನಿಕರ ಎದುರಲ್ಲೇ  ನಡು ರಸ್ತೆಯಲ್ಲೇ ಇಬ್ಬರು ಯುವಕರನ್ನ ತಳಿಸಲಾಗಿದೆ.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹೈಡ್ರಾಮ ನಡೆದಿದ್ದು, ಹೊಡೆದಾಟ ಬಿಡಿಸಲು ಹೆದರಿ ಅಸಹಾಯಕರಾದ ಸಾರ್ವಜನಿಕರು ಮೊಬೈಲ್ ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ.  ಸ್ಥಳಕ್ಕೆ ಆಗಮಿಸಿದ ಕೆ.ಆರ್. ಠಾಣೆಯ ಪೋಲಿಸರು,
ಗಲಾಟೆ ನಡೆಸಿದ ಕೆಲ ಯುವಕರನ್ನ ಬಂಧಿಸಿ ಠಾಣೆಗೆ ಕರೆದೋಯ್ದಿದ್ದಾರೆ.

Leave a Reply