ನೆರೆ ಪರಿಹಾರ ತಡ : ಬಿಜೆಪಿ ಸಂಸದರಿಗೆ ಅರಿಶಿಣ, ಕುಂಕುಮ ಬಳೆ ಪೋಸ್ಟ್ – ಲಕ್ಷ್ಮಣ್ ಆಕ್ರೋಶ

ರಾಜ್ಯಕ್ಕೆ ಕೇಂದ್ರದಿಂದ ನೆರೆ ಪರಿಹಾರ ತಡವಾದ ಹಿನ್ನಲೆಯಲ್ಲಿ ಕೇಂದ್ರ ಹಾಗು ರಾಜ್ಯ ಬಿಜೆಪಿ ವಿರುದ್ಧ ಕೆಪಿಸಿಸಿ ಮಾಧ್ಯಮ ವಕ್ತಾರ ಲಕ್ಷ್ಮಣ್ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ಸಂಸದರಿಗೆ ಅರಿಶಿಣ, ಕುಂಕುಮ ಬಳೆ ಪೋಸ್ಟ್ ಮಾಡುವುದಾಗಿ ಮೈಸೂರಿನ ಪಾಲಿಕೆ ಮುಂಭಾಗ ಕಾಂಗ್ರೆಸ್ ವಿನೂತನ ಪ್ರತಿಭಟನೆ ಮಾಡಲಾಗುತ್ತಿದೆ. ಕೆಪಿಸಿಸಿ ಮಾಧ್ಯಮ ವಕ್ತಾರ ಲಕ್ಷ್ಮಣ್ ನೇತೃತ್ವದಲ್ಲಿ  ಮೋದಿ, ಅಮಿತ್ ಶಾ, ಸಿಎಂ ಬಿಎಸ್ವೈ ವಿರುದ್ಧ ಆಕ್ರೋಶ ವ್ಕ್ತಪಡಿಸಲಾಗುತ್ತಿದೆ.

ಶ್ರೀನಿವಾಸ್ ಪ್ರಸಾಸ್ ಕೇಂದ್ರದ ಧೋರಣೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಹೀಗಾಗಿ ಶ್ರೀನಿವಾಸ್ ಪ್ರಸಾದ್ ಹೊರತುಪಡಿಸಿ ಎಲ್ಲರಿಗು  25 ಸಂಸದರಿಗೆ ಅರಿಶಿಣ, ಕುಂಕುಮ ಬಳೆ ಅಂಚೆ ಮೂಲಕ ರವಾನೆ ಮಾಡುವುದಾಗಿ ವ್ಯಂಗ್ಯವಾಡಿದ್ದಾರೆ. ಜೊತೆಗೆ ಪಕ್ಷೇತರ ಅಭ್ಯರ್ಥಿ ಸುಮಲತಾಗು ಇದನ್ನ ರವಾನೆ ಮಾಡಲಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಸಂಜೆ ಇಳಕಲ್ ಸೀರೆ, ತಾಂಬೂಲ ರವಾನೆ ಮಾಡಲಾಗುವುದು, ಇದು ಮಹಿಳೆಯರಿಗೆ, ಸಂಸದರಿಗೆ ಅವಮಾನ ಮಾಡುತ್ತಿಲ್ಲ. ಇದನ್ನ ನೋಡಿಯಾದ್ರು ಹೊರಗೆ ಮೋದಿ ಬಂದು ಸಮಸ್ಯೆ ಕೇಳಲಿ. ಜನ ಸಾಯುತ್ತಿದ್ದಾರೆ, ಸತ್ತ ಮೇಲೆ ಪರಿಹಾರ ಬೇಡ.
ಸಾಯುವ ಮುನ್ನ ಬದುಕಿಸಲು ಪರಿಹಾರ ಕೊಡಿ. ಇಂದು ಬರತ್ತೆ, ನಾಳೆ ಬರತ್ತೆ ನಾಡಿದ್ದು ಬರತ್ತೆ ಅಂತಾರೆ. ಆದರೆ 2ತಿಂಗಳು ಕಳೆದರು ಏನು ಬಂದಿಲ್ಲ ಎಂದು ಕೇಂದ್ರ ಹಾಗು ರಾಜ್ಯ ಬಿಜೆಪಿ ವಿರುದ್ಧ ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights