ಕೆಆರ್ಪೇಟೆ ಉಪಚುನಾವಣೆಯ ಅಭ್ಯರ್ಥಿಗಳಿಗೆ ಹೊಸ ಚಾಲೆಂಜ್….
ಕೆಆರ್ಪೇಟೆ ಉಪಚುನಾವಣೆಯ ಅಭ್ಯರ್ಥಿಗಳಿಗೆ ಹೊಸ ಚಾಲೆಂಜ್ ನೀಡಲಾಗಿದೆ. ಅದುವೇ ಮಂಡ್ಯದ ತಾಲೂಕಿನ ಊರು ಕೇರಿ ಜನ ಗುರ್ತು ಮಾಡೋ ಟಾಸ್ಕ್.
ಹೌದು… ಜೆಡಿಎಸ್ ಅಭ್ಯರ್ಥಿ ದೇವರಾಜು ಮತ್ತು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ನಡುವೆ ಟಾಸ್ಕ್ ನೀಡಲಾಗಿದ್ದು, ಕಾರಿನಲ್ಕಿ ಡ್ರೈವ್ ಮಾಡಿಕೊಂಡು ಒಬ್ಬರೇ ಹೋಗಬೇಕು. ಒಬ್ಬರೇ ಹತ್ತು ಊರುಗಳನ್ನು ಗುರುತಿಸಬೇಕು. ಒಂದೊಂದು ಊರಿನಲ್ಲಿ ಇಬ್ಬರನ್ನು ಗುರುತಿಸಬೇಕು. ಈ ಟಾಸ್ಕ್ ಮಾಡಿದ್ರೆ ನಾವು ಈಗಲೇ ಶರಣಾಗುತ್ತೇವೆ ಎಂದ ಜೆಡಿಎಸ್ ಅಭ್ಯರ್ಥಿ ದೇವರಾಜು ಸವಾಲ್ ಹಾಕಿದ್ದಾರೆ.
ಈ ಚಾಲೆಂಜ್ ನಾನು ಸ್ವೀಕರಿಸುತ್ತೇನೆ. ನಾನು ಸ್ವತಃ ನಾನೇ ಡ್ರೈವಿಂಗ್ ಮಾಡಿಕೊಂಡು ಹೋಗುತ್ತೇನೆ. ನನ್ನ ಪೊಲೀಸ್ ಅವರು ಕರೆದುಕೊಂಡು ಹೋಗ್ತಾ ಇಲ್ಲ. ನನ್ನ ಗನ್ ಮ್ಯಾನ್ ಕೂಡ ಕರೆದುಕೊಂಡು ಹೋಗ್ತಾ ಇಲ್ಲ. ನಾನು ಇಬ್ಬರನ್ನು ಮಾತ್ರವಲ್ಲ 10 ಜನರನ್ನು ಗುರುತಿಸುತ್ತೇನೆ.
ನೀವು ಊರಿನ ಪಟ್ಟಿ ಕೊಡಿ. ನಾನು ಹೆಸರು ಹೇಳಲಿಲ್ಲ ಅಂದ್ರೆ ರಾಜಕಾರಣವನ್ನೇ ಬಿಟ್ಟು ಬಿಡುತ್ತೇನೆ. ನೀವು ಗುರುತಿಸುತ್ತೀರಾ, ಜನರನ್ನು ಊರನ್ನು. ಜೆಡಿಎಸ್ನ ಹೊಸ ಮುಖಂಡರು ಬಂದು ಸಹ ಗುರುತಿಸಲಿ. ಜೆಡಿಎಸ್ ಅಭ್ಯರ್ಥಿ ಚಾಲೆಂಜ್ ಸ್ವೀಕರಿಸಿದ ನಾರಾಯಣಗೌಡ ಪ್ರತಿ ಚಾಲೆಂಜ್ ಹಾಕಿದ್ರು.