ದೆಹಲಿಯ ಮೂವರು ವೈದ್ಯರಿಗೆ ಕೋವಿಡ್-19 ಸೋಂಕು; ದೆಹಲಿಯಲ್ಲಿ ಒಟ್ಟು 120 ಕ್ಕೂ ಹೆಚ್ಹು ಪ್ರಕರಣಗಳು
ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಮೂರು ವೈದ್ಯರು ಕೋವಿಡ್-19 ಸೋಂಕಿಗೆ ಗುರಿಯಾಗಿದ್ದಾರೆ. ದೆಹಲಿ ಸರ್ಕಾರದ ಸರ್ದಾರ್ ವಲ್ಲಬಾಯ್ ಪಟೇಲ್ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಸೇವೆ ಸಲ್ಲಿಸುವ 32 ವರ್ಷ ವೈದ್ಯ ಮಂಗಳವಾರ ಕೋವಿಡ್-19 ಸೋಂಕಿಗೆ ಗುರಿಯಾಗಿರುವುದು ಪರೀಕ್ಷೆಯಿಂದ ಪತ್ತೆಯಾಗಿದೆ. ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅವರ ಪತ್ನಿಗೆ ಸೋಂಕು ತಗಲಿರುವುದು ಮಾರ್ಚ್ 26 ರಂದು ಪತ್ತೆಯಾಗಿತ್ತು .
“ಅವರ ಪರೀಕ್ಷೆಯಲ್ಲಿ ಸೋಂಕಿಗೆ ಪಾಸಿಟಿವ್ ಫಲಿತಾಂಶ ಬಂದಿದೆ. ಆದರೆ ಮತ್ತೆ ಪರೀಕ್ಷೆಗೆ ಕಳುಹಿಸುತ್ತಿದ್ದೇವೆ” ಎಂದು ಹಿರಿಯ ವೈದ್ಯರು ಹೇಳಿದ್ದಾರೆ. ಈ ದಂಪತಿಗಳು ದಕ್ಷಿಣ ದೆಹಲಿಯಲ್ಲಿ ವಾಸಿಸುತ್ತಾರೆ.
ದೆಹಲಿ ರಾಜ್ಯದ ಕ್ಯಾನ್ಸರ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಮತ್ತೊಬ್ಬ ಹಿರಿಯ ವೈದ್ಯರೂ ಕೂಡ ಸೋಂಕಿಗೆ ಗುರಿಯಾಗಿದ್ದಾರೆ. ಈ ಮೊದಲು ಆಮ್ ಆದ್ಮಿ ಮೊಹಲ್ಲ ಕ್ಲಿನಿಕ್ ನಲ್ಲಿ ಸೇವೆ ಸಲ್ಲಿಸುವ ಇಬ್ಬರು ವೈದ್ಯರು ಮತ್ತು ಖಾಸಗಿಯಾಗಿ ಸೇವೆ ಸಲ್ಲಿಸುತ್ತಿದ್ದ ಮತ್ತೊಬ್ಬ ವೈದ್ಯರಿಗೆ ಕೊರೊನ ಸೋಂಕು ಪತ್ತೆಯಾಗಿತ್ತು.
ಈ ವೈದ್ಯರ ಸಂಪರ್ಕಕ್ಕೆ ಬಂದಿದ್ದ ಸುಮಾರು 2000 ಜನರನ್ನು ಆರೋಗ್ಯ ಇಲಾಖೆ ಗಮನಿಸುತ್ತಿದೆ. ದೆಹಲಿಯಲ್ಲಿ ಇಲ್ಲಿಯವರೆಗೂ 120 ಕ್ಕೂ ಹೆಚ್ಚು ಜನ ಸೋಂಕಿಗೆ ಗುರಿಯಾಗಿದ್ದಾರೆ.