ಮದುವೆ ಆಮಂತ್ರಣ ಪತ್ರಿಕೆ ಕೊಡಲು ಹೋಗಿದ್ದ ತಂದೆ ಮಗ ಮಸಣ ಸೇರಿದ್ರು…!
ಮದುವೆ ಆಮಂತ್ರಣ ಪತ್ರಿಕೆ ಕೊಡಲು ಹೋಗಿದ್ದ ತಂದೆ ಮಗ ಧಾರುಣವಾಗಿ ಸಾವನ್ನಪ್ಪಿದ ಘಟನೆ ಕೆಜಿಎಪ್ ಹೊರವಲಯದ ಕೋಡಿಯಪಲ್ಲಿ ಕುಪ್ಪಂ ರಸ್ತೆಯಲ್ಲಿ ನಡೆದಿದೆ.
ತಂದೆ ವೆಂಕಟೇಶ್ ( 57) ಮಗ ಕನಕರಾಜ್ (27 ) ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಕೆಜಿಎಪ್ ಹೊರವಲಯದ ಕೋಡಿಯಪಲ್ಲಿ ಕುಪ್ಪಂ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹಿರಿಯ ಸಹೋದರ ರವಿ ಮದುವೆ ಆಮಂತ್ರಣ ನೀಡಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ.
ಸ್ಥಳಕ್ಕೆ ಮಾರಿಕುಪ್ಪಂ ಪೊಲೀಸರು ಭೇಟಿ ಪರಿಶೀಲನೆ ಮಾಡುತ್ತಿದ್ದಾರೆ. ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.