ರಾಜಕೀಯ ಅಸ್ಥಿರತೆ ಒಂದು ಕಡೆ; ಮತ್ತೊಂದು ಕಡೆ ಕೋವಿಡ್ ಏರಿಕೆ; ರಾಜಸ್ಥಾನದಲ್ಲಿ ಮತ್ತೆ ಗಡಿ ಬಂದ್

ಒಂದು ಕಡೆ ರಾಜಕೀಯ ಅಸ್ಥಿರತೆ. ಮತ್ತೊಂದು ಕಡೆ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆ. ರಾಜಸ್ಥಾನ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಎಂ ಎಲ್ ಎ ಗಳ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವಾಗಲೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಈಗ ಮತ್ತೆ ಅಂತರ ರಾಜ್ಯ ಗಡಿಗಳನ್ನು ಮುಚ್ಚುವುದಾಗಿ ಸರ್ಕಾರ ಘೋಷಿಸಿದೆ.

ಒಂದು ವಾರದವರೆಗೂ ಗಡಿಯಲ್ಲಿ ಚಲನವಲನ ನಿಷೇಧ ಜಾರಿಯಿರಲಿದ್ದು ಪಾಸ್ ಹೊಂದಿರುವವರು ಮಾತ್ರ ರಾಜ್ಯಕ್ಕೆ ಬರಬಹುದಾಗಿದೆ ಅಥವಾ ರಾಜ್ಯದಿಂದ ಹೊರಹೋಗಬಹುದಾಗಿದೆ. ಎಲ್ಲ ಚಲನವಲನಗಳ ಮೇಲೆ ಗಮನ ಇಡಲಾಗುವುದು. ಎನ್ ಒ ಸಿ ಇಲ್ಲದೆ ಯಾರೂ ರಾಜಸ್ಥಾನಕ್ಕೆ ಪ್ರವೇಶಿಸುವಂತಿಲ್ಲ ಅಎಂದು ಪೊಲೀಸ್ ಮಹಾನಿರ್ದೇಶಕ ಎಮ್ ಎಲ್ ಲಾಥೆರ್ ಆದೇಶ ಹೊರಡಿಸಿದ್ದಾರೆ.

ರಾಜಸ್ಥಾನದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 11,600 ಕ್ಕೆ ಏರಿದ್ದು, ಇಲ್ಲಿಯವರೆಗೂ 259 ಜನ ಮೃತಪಟ್ಟಿರುವುದು ವರದಿಯಾಗಿದೆ.

ಈಗ ಬಹುತೇಕ ರಾಜ್ಯಗಳು ನಿಷೇಧಗಳನ್ನು ಸಡಿಲಿಸಿದ್ದು ಅಂತರರಾಜ್ಯ ಓಡಾಟ ಸಾಮಾನ್ಯಕ್ಕೆ ಬರುತ್ತಿದೆ. ಆದರೆ ರಾಜಸ್ಥಾನದಲ್ಲಿ ಮಾತ್ರ ಎಲ್ಲ ಗಡಿಗಳಲ್ಲಿ, ರೈಲ್ವೇ ಮತ್ತು ವಿಮಾನ ನಿಲ್ದಾಣಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ, ಚಲನವಲನವನ್ನು ನಿರ್ಬಂಧಿಸಲು ತೀರ್ಮಾನಿಸಲಾಗಿದೆ. ರಾಜಸ್ಥಾನ ರಾಜ್ಯ ಪಂಜಾಬ್, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಹರ್ಯಾಣ ರಾಜ್ಯಗಳ ಜೊತೆಗೆ ಗಡಿ ಹಂಚಿಕೊಂಡಿದೆ.

ರಾಜಸ್ಥಾನದಿಂದ ಹೊರಗೆ ಹೋಗಲೂ ಕೂಡ ತುರ್ತು ಕಾರಣಗಲಿಗೆ ಮಾತ್ರ ಜಿಲ್ಲಾಧಿಕಾರಿಗಳು, ಮತ್ತು ಪೊಲೀಸ್ ಸೂಪರಿಂಡೆಂಟ್ ಗಳಿಂದ ಪಾಸ್ ಪಡೆಯಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights