ವಾಟ್ಸ್ಆಪ್ ನಕಲಿ ಸುದ್ದಿಗೆ ಕಡಿವಾಣ : ಫಾರ್ವರ್ಡೆಡ್ ಸಂದೇಶಗಳ ಹಾವಳಿ ಶೇ.70% ಇಳಿಕೆ..!
ನಕಲಿ ಸುದ್ದಿಯ ಹಾವಳಿ ದಿನೇ ದಿನೇ ಹೆಚ್ಚುತ್ತಲೇ ಇದೆ, ಇದನ್ನು ತಡೆ ಗಟ್ಟಲು ಸರ್ಕಾರ ಮೇಲಿಂದ ಮೇಲೆ ಫೇಸ್ಬುಕ್ ವಾಟ್ಸ್ ಆಪ್ ಹೀಗೇ ಸಾಮಾಜಿಕ ಜಾಲತಾಣಗಳಿವೆ ಹೆಚ್ಚರಿಕೆಯನ್ನು ನೀಡುತ್ತಿದ್ದರು ಇದನ್ನು ನಿಯಂತ್ರಿಸಲು ಯಾವುದೇ ಒಂದು ಕಡಿವಾಣ ಸಿಗುತ್ತಿಲ್ಲ, ಆದರೆ ಇದೀಗ ವಾಟ್ಸ್ ಆಪ್ ಒಂದು ಸಾಹಸಕ್ಕೆ ಮುಂದಾಗಿರುವಂಥದ್ದು.
ಹೌದು… ಫಾರ್ವರ್ಡೆಡ್ ಮೆಸೇಜ್ ಗಳನ್ನು ಒಮ್ಮೆಲೆ ಬಹುತೇಕ ಜನರಿಗೆ ಕಳುಹಿಸುವುದಕ್ಕೆ ನಿಯಂತ್ರಣ ಹೇರಲಾಗಿದೆ. ಬದಲಿಗೆ ಒಬ್ಬರಿಗೆ ಮಾತ್ರ ಕಳುಹಿಸುವ ಮಿತಿಯನ್ನು ಹೇರಿದ್ದು ಜಾಗತೀಕವಾಗಿ ಫಾರ್ವರ್ಡೆಡ್ ಸಂದೇಶಗಳ ಹಾವಳಿ ಶೇ.70 ರಷ್ಟು ಕಡಿಮೆಯಾಗಿದೆ ಎಂದು ವಾಟ್ಸ್ಆಪ್ ತಿಳಿಸಿದೆ.
ಇತ್ತೀಚೆಗೆ ಕೊರೊನಾ ಕುರಿತಂತೆ ನಾನಾ ಸಂದೇಶಗಳು ಜನರಿಗೆ ಆತಂಕ ಮಾತ್ರವಲ್ಲದೇ ತಪ್ಪು ಮಾಹಿತಿಯನ್ನು ನೀಡಲು ಸಹಯಕವಾಗಿದ್ದುವು. ಇಂತಹ ಸಂದೇಶಗಳಿಗೆ ಬ್ರೇಕ್ ಹಾಕುವ ಸಲುವಾಗಿ ವಾಟ್ಸ್ಆಪ್ ಈ ನಿಯಮ ತಂದಿದೆ. ಇದರಿಂದ ಸುಳ್ಳು ಸುದ್ದಿಗಳನ್ನು ವೇಗವಾಗಿ ಹರಡುವುದನ್ನ ತಪ್ಪಿಸಬಹುದಾಗಿದೆ. ಜೊತೆಗೆ ಇದು ವೈಯಕ್ತಿಕ ಮತ್ತು ಖಾಸಗಿ ಸಂವಹನಕ್ಕೆ ವಾಟ್ಸ್ಆಪ್ ಬಳಕೆಯಾಗಲು ಈ ಬದಲಾವಣೆ ನೆರವಾಗುತ್ತದೆ ಎಂದು ಪ್ರಕಟಣೆಯಲಲ್ಲಿ ಕಂಪನಿ ಹೇಳಿದೆ. ಫಾರ್ವರ್ಡೆಟ್ ಸಂದೇಶವನ್ನು ಏಕಕಾಲದಲ್ಲಿ ಒಬ್ಬರಿಗೆ ಕಳಿಸುವಂತೆ ನಿಯಂತ್ರಿಸಿದ್ದರ ಪರಿಣಾಮ ಜಾಗತಿಕ ಮಟ್ಟದಲ್ಲಿ ಶೇ.70% ಸಂದೇಶ ಕಳಿಸುವ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದೆ.
ಇತ್ತೀಚೆಗೆ ಕೊರೊನಾ ಕುರಿತ ತಪ್ಪು ಸಂದೇಶಗಳು ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಫಾರ್ವರ್ಡಡ್ ಸಂದೇಶಗಳನ್ನು ಒಮ್ಮೆಲೆ ಒಬ್ಬರಿಗೆ ಮಾತ್ರ ರವಾನಿಸುವ ಫೀಚರ್ ಅನ್ನು ಸೇರ್ಪಡೆ ಮಾಡಿತ್ತು. ಅದಕ್ಕೂ ಮೊದಲು ಫರ್ವರ್ಡೆಡ್ ಸಂದೇಶಗಳ ಪತ್ತೆಗೆ ‘ಫಾರ್ವರ್ಡೆಡ್’ಎಂಬ ಲೇವಲ್ ಅನ್ನು ವಾಟ್ಸ್ ಆಪ್ ಪರಿಚಯಿಸಿತ್ತು.
ವಾಟ್ಸ್ಆಪ್ 2018ರಲ್ಲಿ ಏಕಕಾಲದಲ್ಲಿ 5 ಮಂದಿಗೆ ಮಾತ್ರ ಪಾರ್ವರ್ಡೆಡ್ ಸಂದೇಶ ಅವಕಾಶ ನೀಡಿತ್ತು. ಈ ಮೂಲಕ ವೈರಲ್ ಸುದ್ದಿಗಳನ್ನು ಹರಡದಂತೆ ತಡೆಯುವ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಯನ್ನಿಟ್ಟಿತ್ತು. ಹಳ್ಳಿಯಿಂದ ದಿಲ್ಲಿಯವರೆಗೆ ಸ್ಮಾರ್ಟ್ ಫೋನ್ ಹೊಂದಿರುವ ಎಲ್ಲರೂ ಸಂದೇಶ ರವಾನಿಸುವುದಕ್ಕಾಗಿ ವಾರ್ಟ್ ಆಪ್ ಅವಲಂಭಿಸಿದ್ದಾರೆ. ಕಾಲಕಾಲಕ್ಕೆ ತನ್ನ ಫೀಚರ್ ಬದಲಿಸುವ ವಾಟ್ಸ್ ಆಪ್ ಬಳಕೆದಾರರ ಸ್ನೇಹಿಯಾಗಿ ಗುರುತಿಸಿಕೊಮಡಿದೆ.