ಹೆಚ್‌ಡಿ ದೇವೇಗೌಡರ ಸಂಬಂಧಿ ಮನೆಗೆ ಸಿದ್ದರಾಮಯ್ಯ ಭೇಟಿ….!

ಮೈಸೂರಿನಲ್ಲಿರುವ ಪ್ರೊ.ಕೆ.ಎಸ್.ರಂಗಪ್ಪ ಹೆಚ್‌ಡಿ ದೇವೇಗೌಡರ ಸಂಬಂಧಿ ಮನೆಗೆ ಇಂದು ಸಿದ್ದರಾಮಯ್ಯ ಭೇಟಿ ನೀಡಿದ್ದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಮತ್ತೆ ದೋಸ್ತಿ ಸರ್ಕಾರಕ್ಕೇನಾದ್ರೂ ಕೈ ನಾಯಕರು ಕೈ ಕಹಾಕಿದ್ರಾ ಅನ್ನೋ ಪ್ರಶ್ನೆ ಎದುರಾಗಿದೆ.

ಇದೇ ವೇಳೆ ಮಾತನಾಡಿದ ಹೆಚ್‌ಡಿ ದೇವೇಗೌಡರ ಸಂಬಂಧಿ ಪ್ರೊ.ಕೆ.ಎಸ್.ರಂಗಪ್ಪ ‘ಸಿದ್ದರಾಮಯ್ಯ ನಮ್ಮ ಮನೆಗೆ ಬಂದಿದ್ದು ಸೌಜನ್ಯದ ಭೇಟಿ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಸಿದ್ದರಾಮಯ್ಯರಂಥ ಒಳ್ಳೆಯವರು ಮತ್ತೆ ಸಿಎಂ ಆಗಬೇಕು.
ಯಾರೇ ಒಳ್ಳೆ ಕೆಲಸ ಮಾಡಿದ್ರು ನಾನು ಅವರನ್ನು ಬೆಂಬಲಿಸುತ್ತೇನೆ. ನಾನು ಈಗ ರಾಜಕೀಯವಾಗಿ ಸಕ್ರಿಯವಾಗಿಲ್ಲ. ಚುನಾವಣೆಯಲ್ಲಿ ಸೋತ ನಂತರ ಜೆಡಿಎಸ್ ನನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. ನಾನು ಈಗ ಮುಕ್ತವಾಗಿದ್ದೇನೆ.
ಯಾರು ನನ್ನ ಗೌರವದಿಂದ ನನ್ನ ಅನುಭವ ಬಳಸಿಕೊಳ್ಳುತ್ತಾರೋ.? ನಾನು ಅವರ ಪರವಾಗಿ ಇರುತ್ತೇನೆ. ನಾನು ರಾಜಕೀಯಕ್ಕಿಂತ ಸಂಶೋಧನೆಗೆ ಹೆಚ್ಚಿನ ಆದ್ಯತೆ ಕೊಡ್ತಿನಿ ಎಂದು ಸ್ಪಷ್ಟನೆ ನೀಡಿದರು.

ನಾನು ರಂಗಪ್ಪ ಸ್ನೇಹಿತರು, ತಿಂಡಿಗೆ ಕರೆದಿದ್ದರು ಬಂದಿದ್ದೆ. ಇಷ್ಟು ಬಿಟ್ಟು ಬೇರೆ ಇನ್ಯಾವಾ ರಾಜಕೀಯವೂ ಇದರಲ್ಲಿ ಇಲ್ಲ. ಹೆಚ್.ಡಿ. ದೇವೇಗೌಡರ ಸಂಬಂಧಿ ಪ್ರೊ. ರಂಗಪ್ಪ ಭೇಟಿ ನಂತರ ಸಿದ್ದರಾಮಯ್ಯ ಹೇಳಿದರು. ಕೇಂದ್ರ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ನೆರೆ ಸಂತ್ರಸ್ತರ ಕಷ್ಟಕ್ಕೆ ಬಾರದ ಇಂತಹ ಕೇಂದ್ರ ಸರಕಾರ ಇದ್ದರೆಷ್ಟು ಹೋದರೆಷ್ಟು. ಸಚಿವ ಕೆ.ಎಸ್. ಈಶ್ಚರಪ್ಪ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights