ಆ್ಯಂಡ್ರ್ಯೂ ಅವರನ್ನು ಮಂಕಿ ಎಂದಿದ್ದ ಹರ್ಭಜನ್ ಸಿಂಗ್‌ಗೆ ನಿಷೇಧ ಏರಿದರೂ ಭಾರತದ ತಂಡ ವಾಪಸ್ ಬರಲಿಲ್ಲ: ಏಕೆ ಗೊತ್ತಾ?

ಮಂಕಿಗೇಟ್ ಪ್ರಕರಣದ ಹೊರತಾಗಿಯೂ ಭಾರತ ತಂಡ 2007-08ರಲ್ಲಿ ಆಸ್ಟ್ರೇಲಿಯಾದಿಂದ ಅರ್ಧಕ್ಕೆ ಯಾಕೆ ವಾಪಸ್ ಬರಲಿಲ್ಲ ಅನ್ನೋದನ್ನ ಅನಿಲ್ ಕುಂಬ್ಳೆ ಬಹಿರಂಗಪಡಿಸಿದ್ದಾರೆ. ಕ್ರೀಡಾಸ್ಫೂರ್ತಿಗಾಗಿ ನಾವು ಕ್ರಿಕೆಟ್ ಆಡಿದವರು. ದ್ವೇಷ, ಅಸೂಯೆ ಮಾತೆ ಇರಲಿಲ್ಲ, ಅರ್ಧಕ್ಕೆ ವಾಪಸ್‌ ಬಂದಿದ್ದರೇ ತಂಡದ ಮೇಲೆ ಉತ್ತಮ ಭಾವನೆಯೂ ಬರುತ್ತಿರಲಿಲ್ಲ. ಹೀಗಾಗಿ ಆರಂಭಿಕ ಎರಡು ಟೆಸ್ಟ್‌ಗಳ ಸೋಲಿನ ಹೊರತಾಗಿಯೂ ನಾವು ಆಸ್ಟ್ರೇಲಿಯಾದಲ್ಲೇ ಉಳಿದೆವು ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ.

ರವಿಚಂದ್ರನ್ ಅಶ್ವಿನ್ ಜೊತೆಗಿನ ಸೋಷಿಯಲ್ ಮೀಡಿಯಾ ಸಂದರ್ಶನದಲ್ಲಿ ಮಾತನಾಡಿದ ಅವರು, 2008ರ ಜನವರಿಯಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಆ್ಯಂಡ್ರ್ಯೂ ಸೈಮಂಡ್ಸ್ ಅವರುನ್ನು ಮಂಕಿ ಎಂದು ಕರೆದು ಜನಾಂಗೀಯ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪದ ಮೇಲೆ ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್‌ಗೆ ಮೂರು ಪಂದ್ಯಗಳ ನಿಷೇಧ ಹೇರಲಾಗಿತ್ತು. ಪ್ರಕರಣ ವಿವಾದವನ್ನೂ ಸೃಷ್ಠಿಸಿತ್ತು. ಆದರೂ ಸರಣಿಯನ್ನೂ ಮುಂದುವರಿಸಲು ನಿರ್ಧರಿಸಿದ ಭಾರತ ಒತ್ತಡದ ನಡುವೆಯೂ ಮುಂದಿನ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಪ್ರಕರಣದ ನಂತರ ಹರ್ಭಜನ್ ಗೆ ನಿಷೇಧ ಹೇರಿದ್ದು ಮಾತ್ರವಲ್ಲ, ಪಂದ್ಯ ಶುಲ್ಕದ ಅರ್ಧ ಮೊತ್ತವಲನ್ನ ತಡೆಹಿಡಿಯಲಾಗಿತ್ತು. ಐಸಿಸಿ ತೀರ್ಪಿನ ವಿರುದ್ಧ ಭಾರತ ಮೇಲ್ಮನವಿ ಸಲ್ಲಿಸಿತ್ತು. ಹೀಗಾಗಿ ಸರಣಿಯನ್ನೂ ಅಲ್ಲಿಗೇ ಮುಕ್ತಾಯಗೊಳಿಸುವ ಕುರಿತ ಮಾತುಕತೆಗಳು ನಡೆದಿದ್ದವು ಅನಿಲ್ ಕುಂಬ್ಳೆ ತಿಳಿಸಿದ್ದಾರೆ. ಸಿಡ್ನಿ ಟೆಸ್ಟ್‌ನಲ್ಲಿ ಅಂಪೈರ್‌ಗಳ ತೀರ್ಪಿನಲ್ಲೂ ಕೆಲವು ಲೋಪಗಳು ಆಗಿದ್ದವು ಎಂದು ಆ ಟೆಸ್ಟ್‌ನ ಅಂಪೈರ್‌ಗಳಲ್ಲಿ ಒಬ್ಬರಾಗಿದ್ದ ಸ್ಟೀವ್ ಬಕ್ನರ್ ಇತ್ತೀಚೆಗಷ್ಟೆ ತಿಳಿಸಿದ್ದರು.


ಇದನ್ನೂ ಓದಿ:  ಕಾಂಗ್ರೆಸ್‌-ಜೆಡಿಎಸ್‌ ಭದ್ರಕೋಟೆ ಭೇದಿಸಲು ಬಿಜೆಪಿ ಕಾರ್ಯತಂತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights